Sunday, 15th December 2024

ಯುಬಿಎಸ್ ಸ್ವಾಧೀನಕ್ಕೆ ಕ್ರೆಡಿಟ್ ಸ್ವೀಸ್ ಬ್ಯಾಂಕ್..!

ಜುರಿಚ್( ಸ್ವಿಟ್ಜರ್​ಲೆಂಡ್): ಯುಬಿಎಸ್ ಎಜಿ ದಿವಾಳಿಯಂಚಿನಲ್ಲಿದ್ದ ಕ್ರೆಡಿಟ್ ಸ್ವೀಸ್ ಬ್ಯಾಂಕನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿದೆ. ತುರ್ತಾಗಿ ಕ್ರೆಡಿಟ್ ಸ್ವೀಸ್ ಸ್ವಾಧೀನಪಡಿಸಿಕೊಳ್ಳುವ ಕಾರ್ಯ ಆರಂಭವಾಗಿತ್ತು. ಸೋಮವಾರ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಈ ವೇಳೆ ಕ್ರೆಡಿಟ್ ಸ್ವೀಸ್ ಬ್ಯಾಂಕ್​ನ ಕಾರ್ಯಚಟುವಟಿಕೆ ಮತ್ತು ವ್ಯವಹಾರದಲ್ಲಿ ಗಣನೀಯವಾದ ಬದಲಾವಣೆ ತರಲು ಹೊರಟಿದೆ. ಕ್ರೆಡಿಟ್ ಸ್ವೀಸ್ ಬ್ಯಾಂಕರ್​ಗಳ (ಸಿಬ್ಬಂದಿ) ಮೇಲೆ ಬಿಗಿ ನಿರ್ಬಂಧಗಳನ್ನು ಹಾಕಲು ನಿರ್ಧರಿಸ ಲಾಗಿದೆ. ಹೈ ರಿಸ್ಕ್ ಎಂದು ಪರಿಗಣಿಸಲಾದ ದೇಶಗಳಿಂದ ಹೊಸ ಗ್ರಾಹಕ ರನ್ನು ತರದಂತೆ ನಿಷೇಧ ಕೂಡ ಹೇರಲು ಯುಬಿಎಸ್ ಯೋಜಿಸಿದೆ.

ನಷ್ಟದಲ್ಲಿರುವ ಕ್ರೆಡಿಟ್ ಸ್ವೀಸ್ ಬ್ಯಾಂಕನ್ನು ಖರೀದಿಸಿದರೆ ಭಾರೀ ಹೊರೆಯಾದೀತೆಂದು ಯಾರೂ ಕೂಡ ಖರೀದಿ ಸಲು ಯಾರೂ ಮುಂದೆ ಬಂದಿರಲಿಲ್ಲ. ಯುಬಿಎಸ್ ಸಂಸ್ಥೆ ಕೂಡ ಹಿಂದೆ ಮುಂದೆ ನೋಡಿತ್ತು. ಕ್ರೆಡಿಟ್ ಸ್ವೀಸ್ ದಿವಾಳಿಗೊಂಡ ಇತಿಹಾಸಪುಟ ಸೇರುವುದನ್ನು ತಪ್ಪಿಸಲು ಸ್ವಿಟ್ಚರ್​ಲೆಂಡ್ ಸರ್ಕಾರ ಪ್ರಯತ್ನಿಸಿ, ಯುಬಿಎಸ್ ಎಜಿ ಜೊತೆ ಸಂಧಾನ ನಡೆಸಿತು.

ಕ್ರೆಡಿಟ್ ಸ್ವೀಸ್ ಸಂಸ್ಥೆಯನ್ನು ಖರೀದಿಸುವುದರಿಂದ ಯುಬಿಎಸ್​ಗೆ ಎದುರಾಗುವ ನಷ್ಟದಲ್ಲಿ ಸುಮಾರು 9 ಬಿಲಿಯನ್ ಸ್ವಿಸ್ ಫ್ರಾಂಕ್ (ಸುಮಾರು 82,000 ಕೋಟಿ ರೂ) ನಷ್ಟಭರಿಸಿಕೊಡುವುದಾಗಿ ಸ್ವಿಸ್ ಸರ್ಕಾರ ಭರವಸೆ ನೀಡಿದೆ.