Saturday, 23rd November 2024

ಇಟಲಿಯ ಮಾಜಿ ಪ್ರಧಾನಿ ಬೆರ್ಲುಸ್ಕೋನಿ ನಿಧನ

ರೋಮ್: ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೊ ಬೆರ್ಲುಸ್ಕೋನಿ ಮಿಲಾನ್​ನ ಸ್ಯಾನ್ ರಾಫೆಲ್(86) ಆಸ್ಪತ್ರೆಯಲ್ಲಿ ನಿಧನರಾದರು.

ಏಪ್ರಿಲ್‌ನಲ್ಲಿ ದೀರ್ಘಕಾಲದ ಲ್ಯುಕೇಮಿಯಾ ಪ್ರಕರಣಕ್ಕೆ ಸಂಬಂಧಿಸಿದ ಶ್ವಾಸಕೋಶದ ಸೋಂಕಿಗೆ ಬೆರ್ಲುಸ್ಕೋನಿ ಚಿಕಿತ್ಸೆ ಪಡೆದಿದ್ದಾರೆ. ಬಿಲಿಯನೇರ್ ಮಾಧ್ಯಮ ಉದ್ಯಮಿ ಬರ್ಲುಸ್ಕೋನಿ 1994 ರಲ್ಲಿ ಪ್ರಥಮ ಬಾರಿಗೆ ಅಧಿಕಾರಕ್ಕೆ ಬಂದರು ಮತ್ತು 2011 ರವರೆಗೆ ನಾಲ್ಕು ಬಾರಿ ಪ್ರಧಾನಿಯಾಗಿದ್ದರು.

ಸೆಪ್ಟೆಂಬರ್‌ನಲ್ಲಿ ನಡೆದ ಚುನಾವಣೆಯ ನಂತರ ಹಾಲಿ ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೋನಿ ನೇತೃತ್ವದಲ್ಲಿ ಒಕ್ಕೂಟಕ್ಕೆ ಸೇರಿ ಬಲಪಂಥೀಯ ಮಧ್ಯಮ ಮಾರ್ಗದ ಫೋರ್ಜಾ ಇಟಾಲಿಯಾ ಪಕ್ಷವನ್ನು ಮುನ್ನಡೆಸಿದರು.

ಮಾಜಿ ಪ್ರಧಾನಿ ನಿಧನಕ್ಕೆ ಪ್ರತಿಕ್ರಿಯಿಸಿದ ಇಟಲಿಯ ರಕ್ಷಣಾ ಸಚಿವ ಗಿಡೋ ಕ್ರೊಸೆಟ್ಟೊ ಸೋಮವಾರ ಬರ್ಲು ಸ್ಕೋನಿಯ ಸಾವು ದೊಡ್ಡ ಶೂನ್ಯ ಸೃಷ್ಟಿಸಿದೆ ಎಂದಿದ್ದಾರೆ. ಒಂದು ಯುಗ ಮುಗಿದಿದೆ… ವಿದಾಯ ಸಿಲ್ವಿಯೊ ಎಂದು ಕ್ರೊಸೆಟ್ಟೊ ಟ್ವೀಟ್‌ನಲ್ಲಿ ಬರೆದಿದ್ದಾರೆ.

ಬೆರ್ಲುಸ್ಕೋನಿ 1994 ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದರು ಮತ್ತು ಲಕ್ಷಾಂತರ ಇಟಾಲಿಯನ್ನರಿಗೆ ಅವರು ಇಟಾಲಿಯನ್ ಆರ್ಥಿಕತೆಯ ಸುವರ್ಣ ಯುಗದ ಸೃಷ್ಟಿಕರ್ತರಾಗಿದ್ದರು. ತೆರಿಗೆ ವಂಚನೆಯ ಅಪರಾಧದ ನಂತರ ಆರು ವರ್ಷಗಳ ಕಾಲ ರಾಜಕೀಯ ದಿಂದ ನಿಷೇಧಕ್ಕೊಳಗಾಗುವ ಮೊದಲು ಅವರು ಇಟಲಿಯ ಪ್ರಧಾನ ಮಂತ್ರಿಯಾಗಿ ಮೂರು ಬಾರಿ ಸೇವೆ ಸಲ್ಲಿಸಿದರು.

ಅವರು ಗೆಳತಿ ಮಾರ್ಟಾ ಫಾಸಿನಾ, ಇಬ್ಬರು ಮಾಜಿ ಪತ್ನಿಯರು ಮತ್ತು ಐದು ಮಕ್ಕಳನ್ನು ಅಗಲಿದ್ದಾರೆ.