Wednesday, 4th December 2024

ಲಂಡನ್’ನಲ್ಲಿ ಭಾರತೀಯ ಮೂಲದ ಯುವತಿ ಹತ್ಯೆ

ಲಂಡನ್: ಬ್ರೆಜಿಲ್ ನ ವ್ಯಕ್ತಿಯೊಬ್ಬ ಭಾರತೀಯ ಮೂಲದ ಯುವತಿಯನ್ನು ಚಾಕುವಿನಿಂದ ಇರಿದು ಕೊಲೆ ಗೈದಿರುವ ಘಟನೆ ಲಂಡನ್ ನಲ್ಲಿ ನಡೆದಿದೆ.

ಹೈದರಾಬಾದ್ ಮೂಲದ 27 ವರ್ಷದ ತೇಜಸ್ವಿನಿ ರೆಡ್ಡಿ ಕೊಲೆಯಾದ ಯುವತಿ. ಲಂಡನ್‌ನ ವೆಂಬ್ಲಿ ನಲ್ಲಿ ತೇಜಸ್ವಿನಿ ರೆಡ್ಡಿಯನ್ನು ಬ್ರೆಜಿಲ್‌ನ ವ್ಯಕ್ತಿಯೊಬ್ಬ ವಸತಿಗೃಹದಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.

ತೇಜಸ್ವಿನಿ ಸ್ಥಳದಲ್ಲೇ ಮೃತ ಪಟ್ಟಿದ್ದು. ಇನ್ನೊಬ್ಬ ಯುವತಿಯನ್ನೂ ಚಾಕುವಿನಿಂದ ಇರಿಯಲಾಗಿದೆ.

ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಿದ್ದು, ಯಾವುದೇ ಪ್ರಾಣಾಪಾಯವಿಲ್ಲ ಎಂದು ಮೆಟ್ರೋಪಾಲಿಟನ್ ಪೋಲೀಸರು ಹೇಳಿದ್ದಾರೆ. ಈ ಘಟನೆಯು ವೆಂಬ್ಲಿಯ ನೀಲ್ಡ್ ಕ್ರೆಸೆಂಟ್ ನಲ್ಲಿ ನಡೆದಿದ್ದು. ಪ್ರಕರಣಕ್ಕೆ ಸಂಬಂಧ ಪಟ್ಟ 24 ವರ್ಷದ ಯುವಕ ಮತ್ತು 23 ವರ್ಷದ ಯವತಿಯನ್ನ ಬಂಧಿಸಲಾಗಿದೆ.

ಒಬ್ಬ ಯುವಕ ಪೋಲೀಸ್ ಕಸ್ಟಡಿಯಲ್ಲಿದ್ದಾನೆ. ಆದರೆ ಯುವತಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.