ಒಂದು ಷರತ್ತು ವಿಧಿಸಿರುವ ಆಪ್ ದೆಹಲಿ, ಪಂಜಾಬ್ ರಾಜ್ಯಗಳಲ್ಲಿ ಚುನಾವಣಾ ಕಣದಿಂದ ಕಾಂಗ್ರೆಸ್ ದೂರ ಉಳಿದರೆ ಮಾತ್ರ ತಾವು ಈ ನಿರ್ಣಯ ತೆಗೆದುಕೊಳ್ಳುವುದಾಗಿ ಎಎಪಿ ರಾಷ್ಟ್ರೀಯ ವಕ್ತಾರ, ದೆಹಲಿ ಸಚಿವ ಸೌರಭ್ ಭಾರದ್ವಾಜ್ ಹೇಳಿದ್ದಾರೆ.
ಒಂದೆಡೆ ಕಾಂಗ್ರೆಸ್ ಪಕ್ಷಕ್ಕೆ ಆಫರ್ ನೀಡುತ್ತಲೇ ಅವರ ನೀತಿಗಳನ್ನು ಕಾಪಿ ಮಾಡುತ್ತಿದ್ದಾರೆಂದು ಆರೋಪ ಹೊರಿಸಿದರು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಂತಹ ಎಎಪಿಯ ಕಲ್ಯಾಣ ಯೋಜನೆಗಳನ್ನು ಕಾಂಗ್ರೆಸ್ ನಕಲು ಮಾಡುತ್ತಿದೆ ಎಂದು ಕಿಡಿ ಕಾರಿದರು.
ದೆಹಲಿಯಲ್ಲಿ ಸೇವೆಗಳ ನಿಯಂತ್ರಣಕ್ಕೆ ಕೇಂದ್ರದ ಸುಗ್ರೀವಾಜ್ಞೆಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವು ಎಎಪಿಯನ್ನು ಬೆಂಬಲಿಸ ದಿದ್ದಕ್ಕೆ ಭಾರ ದ್ವಾಜ್ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರದ ಸುಗ್ರೀವಾಜ್ಞೆ ಕುರಿತ ಪ್ರಶ್ನೆಗೆ ಉತ್ತರಿಸಿದ ಭಾರದ್ವಾಜ್, ರಾಷ್ಟ್ರ ರಾಜಧಾನಿ ಯಲ್ಲಿ ಚುನಾಯಿತ ಸರ್ಕಾರ ಕೆಲಸ ಮಾಡಬೇಕು. ಹಾಗೆ ಮಾಡದಂತೆ ಕೇಂದ್ರ ಸರ್ಕಾರ ತಡೆಯುತ್ತಿದೆ ಎಂದರು.