*ಮೊದಲ ಪಂದ್ಯ ಗೆದ್ದ ಕಿಂಗ್ಸ್ ಎಲೆವೆನ್ ಪಂಜಾಬ್
ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಕಿಂಗ್ಸ್ ಎಲೆವೆನ್ ಪಂಜಾಬ್ ತಂಡ ರಾಜನಾಗಿ ಮೆರೆಯಿತು. ರಾಂiÀiಲ್ ಚಾಲೆಂರ್ಸ್ ತಂಡವನ್ನು ಭಾರೀ ಅಂತರದಲ್ಲಿ ಬಗ್ಗುಪಡಿಯಿತು.
ಸಿಡಿಲ ಮರಿ, ನಾಯಕ ಕೆ.ಎಲ್.ರಾಹುಲ್ ಅವರ ಅಜೇಯ ಶತಕದ ಮೂಲಕ ತಂಡಕ್ಕೆ ಉತ್ತಮ ಮೊತ್ತ ಪೇರಿಸಿ ಕೊಟ್ಟರು. ಭರ್ತಿ 206 ರನ್ ಗಳಿಸಿ, ಕೊಹ್ಲಿ ಪಡೆಗೆ ಅಸಾಧ್ಯ ಸವಾಲು ನೀಡಿದರು. ಜವಾಬು ನೀಡಲಾರಂಭಿಸಿದ ರಾಯಲ್ ಚಾಲೆಂರ್ಸ್ ಬೆಂಗಳೂರು ತಂಡಕ್ಕೆ ಎಲ್ಲೂ ಉತ್ತಮ ಆರಂಭ ಸಿಗಲಿಲ್ಲ. ಚೇಸಿಂಗ್ ಎಂಬುದು ಇಲ್ಲದೇ, ಹೋದ ಪುಟ್ಟ ಬಂದ ಪುಟ್ಟ ಎಂಬAತಾಗಿದೆ ಸ್ಥಿತಿ. ಇದರ ಇನ್ನಿಂಗ್ಸö್ನನಲ್ಲಿ ಸರ್ವಾಧಿಕ 30 ರನ್. ಹೊಡೆದಿದ್ದು ಆಲ್ರೌಂಡರ್ ವಾಷಿಂಗ್ಟನ್ ಸುಂದರ್.
ಒಟ್ಟಿನಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲಿರ್ಸ್ ಅವರ ಸ್ಪೋಟಕ ಆಟ ತಂಡದ ಗೆಲುವಿಗೆ ಅನಿವರ್ಯ ಎಂಬ ಮಾತು ನಿಜವಾಯಿತು. ವಿರಾಟ್ ಕೊಹ್ಲಿ ಒಂದು ರನ್ ಗಳಿಸಿ, ಔಟಾದರು. ಎರಡನೇ ಪಂದ್ಯದಲ್ಲಿ ವಿಫಲರಾದರು. ಕಿಂಗ್ಸ್ ತಂಡದ ರವಿ ಬಿಷ್ಣೋಯಿ ಹಾಗೂ ಮುರುಗನ್ ಅಶ್ವಿನ್ ತಲಾ ಮೂರು ವಿಕೆಟ್ ಕಿತ್ತು, ಯಶ ಕಂಡರು. ಈ ಮೂಲಕ ಬೆಂಗಳೂರು ತಂಡ 109 ರನ್ನಿಗೆ ಸರ್ವಪತನ ಕಂಡು, ತನ್ನ ಬ್ಯಾಟಿಂಗ್ ಬಡತನವನ್ನು ಜಗಜ್ಜಾಹೀರುಗೊಳಿಸಿತು.
ಸ್ಕೋರ್ ವಿವರ
ಕಿಂಗ್ಸ್ ಎಲೆವೆನ್ ಪಂಜಾಬ್ 206/3
ಕೆ.ಎಲ್.ರಾಹುಲ್ 132 (14 ಬೌಂಡರಿ, 7 ಸಿಕ್ಸರ್)
ಬೌಲಿಂಗ್: ಶಿವಂ ದುಬೆ 33/2
ರಾಯಲ್ ಚಾಲೆಂರ್ಸ್ ಬೆಂಗಳೂರು 109
ವಾಷಿಂಗ್ಟನ್ ಸುಂದರ್ 30, ಎಬಿಡಿ ವಿಲಿರ್ಸ್ 28, ಆರನ್ ಫಿಂಚ್ 20.
ಬೌಲಿಂಗ್: ರವಿ ಬಿಷ್ಣೋಯಿ 32/3, ಮುರುಗನ್ ಅಶ್ವಿನ್ 21/3, ಶೆಲ್ಡನ್ ಕಾಟ್ರೆಲ್ 17/2.
ಪಂದ್ಯಶ್ರೇಷ್ಠ: ಕೆ.ಎಲ್.ರಾಹುಲ್