Saturday, 14th December 2024

ನಾಡಪ್ರಭು ಕೆಂಪೇಗೌಡರ ೫೧೪ನೇ ಜಯಂತ್ಯೋತ್ಸವ

ತುರುವೇಕೆರೆ: ನಾಡಪ್ರಭು ಕೆಂಪೇಗೌಡರ ೫೧೪ನೇ ಜಯಂತ್ಯೋತ್ಸವವನ್ನು ತಾಲೂಕು ವಕ್ಕಲಿಗರ ಸಂಘ ಮತ್ತು ತಾಲೂಕು ನೌಕರರ ಸಂಘ ಹಾಗೂ ಶ್ರೀ ಕಾಲಭೈರವೇಶ್ವರ ಮಹಿಳಾ ಒಕ್ಕಲಿಗರ ಸಂಘ ಶ್ರೀ ಕೆಂಪೇ ಗೌಡ ಯುವ ಸೇನೆ ವತಿಯಿಂದ ಬಹಳ ಅದ್ದೂರಿಯಾಗಿ ಪಟ್ಟಣದಲ್ಲಿ ಆಚರಿಸಲಾ ಯಿತು.

ಕಾರ‍್ಯಕ್ರಮದಲ್ಲಿ ಶಾಸಕ ಎಂ ಟಿ ಕೃಷ್ಣಪ್ಪನವರು ಮಾತನಾಡಿ ನಾಡಪ್ರಭು ಕೆಂಪೇಗೌಡರ ೫೧೪ನೇ ಜಯಂತಿಯನ್ನು ನಾವು ಗಳೆಲ್ಲರೂ ಬಹಳ ಸಂಭ್ರಮದಿಂದ ಆಚರಿಸುತ್ತಿದ್ದೇವೆ ಶ್ರೀ ಆದಿಚುಂಚನಗಿರಿ ಮಠದ ಪ್ರಧಾನ ಕರ‍್ಯರ‍್ಶಿಗಳು ಹಾಗೂ ಕಲ್ಪತರು ಆಶರ‍್ವಾದ ಸ್ವಾಮೀಜಿಯವರಾದ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ನಮಗೆ ಆಶರ‍್ವಚನವನ್ನು ಮಾಡಿದ್ದಾರೆ ಈ ಸಮಾ ರಂಭದ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಪ್ರೊಫೆಸರ್ ಚಂದ್ರಶೇಖರ್ ರವರು ಬಹಳ ಸೊಗಸಾಗಿ ಕೆಂಪೇಗೌಡರ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟಿದ್ದಾರೆ ಅವರಿಗೆ ನನ್ನ ಕೃತಜ್ಞತೆಗಳನ್ನು ತಿಳಿಸಿ.

ಪ್ರೊಫೆಸರ್ ಪುಟ್ಟರಂಗಪ್ಪನವರು ಚಂದ್ರಶೇರ‍್ರವರ ಹೆಸರನ್ನು ಶಿಫಾರಸು ಮಾಡಿ ಬಹಳ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ ಅವರಿಗೆ ಧನ್ಯವಾದಗಳು ನಿರೀಕ್ಷಿತ ಮಟ್ಟದಲ್ಲಿ ಜನ ಸೇರದ್ದಕ್ಕೆ ಬಹಳ ನಿರಾಸೆಯಾಗಿದೆ ಮಗಳಿಗೆ ಇಂತಹ ವಿಚಾರದಲ್ಲಿ ಆಸಕ್ತಿ ಕಡಿಮೆಯಾಗಿರುವುದೇ ಇದಕ್ಕೆ ಸಾಕ್ಷಿ ಕಳೆದ ಬಾರಿ ಹೆಚ್ಚು ಜನಗಳನ್ನು ಸೇರಿಸಿ ಜಯಂತಿಯನ್ನು ಆಚರಿಸಿದ್ದೆವು ಆದರೆ ಈ ಬಾರಿ ಕೆಲಸದ ಒತ್ತಡದಿಂದ ಜನರನ್ನು ಸೇರಿಸಲು ಆಗಲಿಲ್ಲ. ಅದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಮುಂದಿನ ದಿನಗಳಲ್ಲಿ ನಿರೀಕ್ಷೆಗೂ ಮೀರಿ ಜಯಂತಿಯನ್ನು ಆಚರಿಸೋಣ ಎಂದು ಕರೆಕೊಟ್ಟು ಜನಗಳು ತಮ್ಮ ತಮ್ಮ ಜವಾಬ್ದಾರಿಗಳನ್ನು ಏನೆಂಬು ದನ್ನು ತಿಳಿದುಕೊಳ್ಳಬೇಕಾಗಿದೆ ಅವರೇ ಅರಿತುಕೊಳ್ಳ ಬೇಕು ಎಂದು ಬೇಸರಿಸಿ ಕೊಂಡರು.

ಈ ಸಮಯದಲ್ಲಿ ಕೆಂಪೇಗೌಡರನ್ನು ಕಡ್ಡಾಯವಾಗಿ ನೆನಪಿಸಿಕೊಳ್ಳಲೇಬೇಕು ಕೆಂಪೇಗೌಡರು ಬೆಂಗಳೂರು ನಗರ ಕಟ್ಟದಿದ್ದರೆ ಮತ್ತು ಕೆಂಗಲ್ ಹನುಮಂತಯ್ಯ ನವರು ವಿಧಾನಸೌಧವನ್ನು ಕಟ್ಟದೆ ಇದ್ದರೆ ನಾವೆಲ್ಲ ದಾವಣಗೆರೆಗೆ ಹೋಗಬೇಕಾಗಿ ಬರುತ್ತಿತ್ತು ಆದ್ದರಿಂದ ಅದು ತಪ್ಪಿದಂತಾಗಿದೆ ಕೆಂಪೇಗೌಡರನ್ನು ಸ್ಮರಿಸುವುದು ನಮ್ಮ ಜವಾಬ್ದಾರಿಯು ಕೂಡ ಆಗಿದೆ ಅವರ ಆರ‍್ಶ ತತ್ವ ಗಳನ್ನು ನನ್ನನ್ನು ಸೇರಿದಂತೆ ಪಾಲಿಸುವುದು ನಮ್ಮೆಲ್ಲರ ರ‍್ತವ್ಯವಾಗಿದೆ ಕೆಂಪೇಗೌಡರ ಸೇವೆಯನ್ನು ಎಲ್ಲ ರ‍್ಗದ ಜನ ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ ಎಲ್ಲಾ ರ‍್ಗದ ಜನರಿಗೆ ಸಮಪಾಲು ಸಮ ಬಾಳು ಕೊಟ್ಟಂತಹ ಏಕೈಕ ವ್ಯಕ್ತಿ ಕೆಂಪೇಗೌಡರ ಎಂದು ತಿಳಿಸಿದರು.

ಈ ಕಾರ‍್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕರ‍್ಯರ‍್ಶಿ ಗಳು ಹಾಗೂ ಮಾಯಸಂದ್ರ ಕಲ್ಪತರು ಆಶ್ರಮದ ಶ್ರೀಗಳಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ಆಶರ‍್ವಚನ ನೀಡಿದರು.

ಕರ‍್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರ ಬಳಿಯಿಂದ ನೂರಾರು ಸಂಖ್ಯೆಯ ಸಂಘಟಕರು ಹಾಗೂ ಸರ‍್ವಜನಿಕರು ಕೆಂಪೇಗೌಡರ ಭಾವಚಿತ್ರವನ್ನೆರಿಸಿದ ರಥದಲ್ಲಿ ಮೆರವಣಿಗೆ ಮೂಲಕ ಹಿರಣ್ಣಯ್ಯ ಬಯಲು ರಂಗ ಮಂದಿರದಲ್ಲಿ ಸಿದ್ಧವಾಗಿದ್ದ ವೇದಿಕೆಯ ಬಳಿ ಕಲಾತಂಡಗಳೊಂದಿಗೆ ಕರೆತರಲಾಯಿತು ಈ ಮೆರವಣಿಗೆಯಲ್ಲಿ ವ್ಯಕ್ತಿಯರ‍್ವ ಕೆಂಪೇಗೌಡರ ಪೋಷಕನ್ನು ಹಾಕಿ ಕುದುರೆ ಮೇಲೆ ಕುಳಿತು ಬಂದ ದೃಶ್ಯವೂ ಆರ‍್ಷಣೀಯವಾಗಿತ್ತು ಕರ‍್ಯಕ್ರಮದ ವೇದಿಕೆಯಲ್ಲಿ ಕೈಗಾರಿಕೋದ್ಯಮಿ ಎನ್ ಕೆಂಪಯ್ಯ ಮಲೇಷ್ಯಾದಲ್ಲಿ ನಡೆದ ಅಂತರರಾಷ್ಟ್ರೀಯ ಡಾಡ್ಜ್ ಬಾಲ್ ಪಂದ್ಯಾವಳಿಯಲ್ಲಿ ತರಬೇತುದಾರರಾಗಿ ಭಾಗವಹಿಸಿದ್ದ ಎಸ್ ಬಿಜಿ ಶಾಲೆಯ ದೈಹಿಕ ಶಿಕ್ಷಕ ಉದಯ್ ಕುಮಾರ್ ಸಿಪಿ ಮತ್ತು ಇದೇ ಪಂದ್ಯಾವಳಿಯಲ್ಲಿ ಸ್ರ‍್ಣ ಪದಕ ಗೆದ್ದ ಕುಮಾರಿ ಮಾನಸ ಜಿ ಕುಮಾರಿ ವೇದಾವತಿ ರವರನ್ನು ಸನ್ಮಾನಿಸಿ ತಾಲೂಕು ಕೆಂಪೇಗೌಡ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಈ ಸಂರ‍್ಭದಲ್ಲಿ ತಾಲೂಕು ತಹಸೀಲ್ದಾರ್ ವೈ. ಎಂ. ರೇಣುಕುಮಾರ್. ಒಕ್ಕಲಿಗ ಸಂಘದ ತಾಲೂಕು ಅಧ್ಯಕ್ಷರಾದ ಪಿ. ಎಚ್. ಧನಪಾಲ್ . ತಾಲೂಕು ನೌಕರರ ಸಂಘದ ಅಧ್ಯಕ್ಷ ನo.ರಾಜು. ಆರ್. ಹನುಮಂತರಾಯಪ್ಪ. ತಾಲೂಕು ಒಕ್ಕಲಿಗ ನೌಕರರ ಸಂಘದ ಅಧ್ಯಕ್ಷ ಡಾಕ್ಟರ್ ನವೀನ್. ಮಹಿಳಾ ತಾಲೂಕು ಅಧ್ಯಕ್ಷ ಶ್ರೀಮತಿ ವಿಜಯಲಕ್ಷ್ಮಿ. ಎಐಸಿಸಿ ಸದಸ್ಯ ಸುಬ್ರಹ್ಮಣ್ಯ ಶ್ರೀಕಂಠೇಗೌಡ. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಡಿಪಿ ರಾಜು. ಎನ್ ಆರ್ ಜಯರಾಮ್. ಡಿಸಿಸಿ ಬ್ಯಾಂಕ್ ಮಾಜಿ ನರ‍್ದೇಶಕ ಬಿ ಎಸ್ ದೇವರಾಜ್. ಹಬುಕನಹಳ್ಳಿ ರಂಗನಾಥ್. ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ರಮೇಶ್ ಗೌಡ .ಮುತ್ತುಗದ ಹಳ್ಳಿ ಕೆಂಪರಾಜು. ಚಂದ್ರೇಗೌಡ ಸೇರಿದಂತೆ ಇತರರಿದ್ದರು.