Sunday, 15th December 2024

ಎಂಜಿನಿಯರ್ ಆಸ್ತಿ ೨ ಕೋಟಿಗೂ ಅಧಿಕ

ತುಮಕೂರು: ಶಿರಾದ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗದಲ್ಲಿ ಸಹಾಯಕ ಅಭಿಯಂತರ(ಎಇ)ರಾಗಿ ಕಾರ್ಯ ನಿರ್ವಹಿಸುತ್ತಿರುವ ಪುಟ್ಟರಾಜು ಕೆ.ಬಿ. ಆದಾಯಕ್ಕೂ ಅಧಿಕ ಅಕ್ರಮ ಆಸ್ತಿ ಹೊಂದಿರುವ ದೂರು ಬಂದ ಹಿನ್ನೆಲೆಯಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಲೋಕಾ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ ಸಂದರ್ಭದಲ್ಲಿ ೨.೩೭ ಕೋಟಿಗೂ ಅಧಿಕ ಅಕ್ರಮ ಆಸ್ತಿ ಕಂಡು ಬಂದಿದೆ.
ತುಮಕೂರಿನ ಅಶೋಕ ನಗರದ ೯ನೇ ಕ್ರಾಸ್‌ನಲ್ಲಿರುವ ಅಂಜನಾದ್ರಿ ನಿಲಯ, ಯಲ್ಲಾಪುರದಲ್ಲಿರುವ ಮೂರು ಮಹಡಿಯ ವಾಣಿಜ್ಯ ಕಟ್ಟಡದ ಮೇಲೆ ಲೋಕಾಯುಕ್ತ ಎಸ್‌ಪಿ ವಲೀಭಾಷ ನೇತೃತ್ವದಲ್ಲಿ ಡಿವೈಎಸ್ಪಿ ಮಂಜುನಾಥ್ ಹಾಗೂ ಸಿಬ್ಬಂದಿ ದಾಳಿ ಮಾಡಿ ಪರಿಶೀಲನೆ ನಡೆಸಿದರು.
ಪುಟ್ಟರಾಜು ಶಿರಾ ತಾಲೂಕಿನ ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರಿಂಗ್ ವಿಭಾಗದಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಆಗಿದ್ದು ಇತ್ತೀಚಿಗಷ್ಟೇ ಭದ್ರಾವತಿಯಿಂದ ತುಮಕೂರು ಜಿಲ್ಲೆಗೆ ವರ್ಗಾವಣೆಗೊಂಡಿದ್ದರು.
ಒಟ್ಟು ಮೌಲ್ಯ-೨,೩೭,೫೦,೦೦೯ (೨. ೩೭ ಕೋಟಿಗೂ ಅಧಿಕ ಅಕ್ರಮ ಆಸ್ತಿ)
ಪತ್ತೆಯಾಗಿರುವ ಸ್ಥಿರಾಸ್ತಿ ಮೌಲ್ಯ- ೧.೫೦.೭೬.೦೫೭(೧ಕೋಟಿ ೫೦ಲಕ್ಷಕ್ಕೂ ಅಧಿಕ)
ಪತ್ತೆಯಾಗಿರುವ ಚರಾಸ್ತಿ ಮೌಲ್ಯ- ೮೬.೭೩.೯೫೨( ೮೬ ಲಕ್ಷಕ್ಕೂ ಅಧಿಕ)
ಸ್ಥಿರಾಸ್ತಿ ವಿವರ
* ಅಶೋಕ ನಗರದಲ್ಲಿ ವಾಸದ ಮನೆ( ಅಂಜನಾದ್ರಿ ನಿಲಯ)- ೬೬.೬೦.೩೦೦ ರು.
* ಯಲ್ಲಾಪುರದಲ್ಲಿ ಮೂರು ಅಂತಸ್ಥಿನ ವಾಣಿಜ್ಯ ಮಳಿಗೆ – ೮೦.೬೮.೦೦೦ ರು.
* ಯಲ್ಲಾಪುರದಲ್ಲಿ ನಿವೇಶನ- ೩.೪೮.೦೫೭ ರು.
ಚರಾಸ್ತಿ ವಿವರ
ಚಿನ್ನ- ೧೨೦೦ ಗ್ರಾಂ- ೬೫.೦೮.೨೩೩
ಬೆಳ್ಳಿ- ೮ ಕೆಜಿ ೦.೨೯ ಗ್ರಾಂ- ೫.೭೦.೪೫೫
ಕಾರು- ೧.೫೦.೦೦೦, ಬೈಕ್- ೫೦ ಸಾವಿರ ನಗದು-೪೩.೪೭೦
ಬ್ಯಾಂಕ್‌ನಲ್ಲಿರುವ ನಗದು- ೩.೫೧.೭೯೪
ಗೃಹೋಪಯೋಗಿ ವಸ್ತಗಳ ಮೌಲ್ಯ ೧೦ ಲಕ್ಷ.
*
ಲೋಕಾ ಬಲೆಗೆ ಜೆಡಿ
ಕೃಷಿ ಇಲಾಖೆ ಜಂಟಿ ನಿರ್ದೇಶಕ ರವಿ ಬಾಡಿಗೆಯಿರುವ  ಮನೆ ಹಾಗೂ ರಾಮನಗರದ ಫಾರಂ ಹೌಸ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ. ನಗರದ ಬಾಡಿಗೆ ಮನೆ ಮನೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ದಾಖಲಾತಿಗಳೊಂದಿಗೆ ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು, ರಾಮನಗರ, ಕನಕಪುರ ಸೇರಿದಂತೆ ಸುಮಾರು ೧೦ ಕ್ಕೂ ಹೆಚ್ಚು ಕಡೆಗಳಲ್ಲಿ ಕೆ.ಎಚ್. ರವಿ ಆಸ್ತಿ ಖರೀದಿ ಮಾಡಿರುವುದು ದಾಳಿ ವೇಳೆಯಲ್ಲಿ ಪತ್ತೆಯಾಗಿದೆ. ರವಿ ಇತ್ತೀಚೆಗಷ್ಟೇ ಹಾಸನದಿಂದ ತುಮಕೂರಿಗೆ ವರ್ಗಾವಣೆಯಾಗಿ ಬಂದಿದ್ದರು.