Saturday, 23rd November 2024

ನಿಗಮಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ರಾಮಲಿಂಗಾರೆಡ್ಡಿ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಸಾರಿಗೆ ನಿಗಮಗಳ ಮಗು 13,415 ಖಾಲಿ ಹುದ್ದೆ ಭರ್ತಿಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

ನಿವೃತ್ತಿ, ಮರಣ ಸೇರಿ ವಿವಿಧ ಕಾರಣದಿಂದ ಹಲವು ವರ್ಷಗಳಿಂದ ಚಾಲಕರು, ನಿರ್ವಾ ಹಕರು, ತಾಂತ್ರಿಕ ವಿಭಾಗ ಸೇರಿ ಇತರೆ ವಿಭಾಗಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಉತ್ತಮ ಸೇವೆ ನೀಡಲು ಸಮಸ್ಯೆಯಾಗುತ್ತಿದೆ. ಇದನ್ನು ನಿವಾರಿಸಲು ನಾಲ್ಕು ನಿಗಮ ಗಳಲ್ಲಿ ಖಾಲಿ ಇರುವ 13,415 ಹುದ್ದೆಗಳ ಭರ್ತಿಗೆ ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಕೆಎಸ್‌ಆರ್ಟಿಸಿಯಲ್ಲಿ 3745 ಚಾಲನಾ ಸಿಬ್ಬಂದಿ, 726 ತಾಂತ್ರಿಕ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆದಿದೆ. ಹೊಸದಾಗಿ 1,433 ಚಾಲನೆ ಸಿಬ್ಬಂದಿ, 2738 ತಾಂತ್ರಿಕ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲಾಗುವುದು. ಕೆಕೆಆರ್ಟಿಸಿಯಲ್ಲಿ 1773 ನಿರ್ವಾಹಕರ ನೇಮಕಾತಿ ಮಾಡಿಕೊಳ್ಳಲಾಗುವುದು. ಬಿಎಂಟಿಸಿಯಲ್ಲಿ 2000 ನಿರ್ವಾಹಕರು, 1 ಸಾವಿರ ಚಾಲಕ ಕಂ ನಿರ್ವಾಹಕರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದರು.