ಆನ್ ಲೈನ್ ಗೇಮಿಂಗ್ ವೇದಿಕೆ ಝುಪೀಯೊಂದಿಗೆ ತಮ್ಮ ಸಹಯೋಗವನ್ನು ಆರಂಭಿಸಿರುವ ಕಪಿಲ್ ಶರ್ಮಾ, ತಮ್ಮ ವಿಶಿಷ್ಟ ಮನೋರಂಜನಾ ಅವತಾರದಲ್ಲಿ ಲೂಡೋ ವನ್ನು ಸರ್ವೋತ್ಕೃಷ್ಟ “ ಇಂಡಿಯಾ ಕಾ ಅಪ್ನಾ ಗೇಮ್” ಎಂದು ಪ್ರಚಾರ ಮಾಡ ಲಿದ್ದಾರೆ. ಈ ಪ್ರಚಾರಾಂದೋಲನವು ಲೂಡೊ ಆಟವನ್ನು ರಾಷ್ಟ್ರದ ನೆಚ್ಚಿನ ಆಟವಾಗಿ ಆಚರಿಸುವ ಆಕಾಂಕ್ಷೆ ಹೊಂದಿದೆ.
•ಈ ಹೊಸ ಪ್ರಚಾರಾಂದೋಲನವು ಟೆಲಿವಿಷನ್ ವಾಣಿಜ್ಯ ಜಾಹೀರಾತು ಸೇರಿದಂತೆ ಡಿಜಿಟಲ್, ರೇಡಿಯೊ, ಹೊರಾಂಗಣ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರಗಳನ್ನು ಒಳಗೊಂಡಿದೆ.
ಗುರುಗ್ರಾಮ್: ಭಾರತದ ಪ್ರಮುಖ ಆನ್ ಲೈನ್ ಕೌಶಲ್ಯಾಧಾರಿತ ಗೇಮಿಂಗ್ ವೇದಿಕೆಗಳಲ್ಲಿ ಒಂದಾದ Zupee, ಜನಪ್ರಿಯ ಮನೋರಂಜನಕಾರ ಕಪಿಲ್ ಶರ್ಮಾ ಅವರನ್ನು ತನ್ನ ನೂತನ ಬ್ರ್ಯಾಂಡ್ ರಾಯಭಾರಿಯಾಗಿ ನೇಮಿಸಿರುವುದಾಗಿ ಇಂದು ಪ್ರಕಟಿಸಿತು.
ಕಪಿಲ್ ಶರ್ಮಾ ಅವರೊಂದಿಗೆ ಸಹಯೋಗ ಮಾಡಿಕೊಳ್ಳುವ ಮೂಲಕ, ಕ್ಷಿಪ್ರಗತಿಯಲ್ಲಿ ಹರಡುತ್ತಿರುವ ಕೌಶಲ್ಯಾಧಾರಿತ ಆನ್ ಲೈನ್ ಗೇಮಿಂಗ್ ಕ್ಷೇತ್ರದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಿಕೊಳ್ಳಲು ಹವಣಿಸಿದೆ. ಮತ್ತು ಲೂಡೊ ಆಟದಲ್ಲಿ ತನ್ನ ನಾಯಕ್ತ್ವ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತ ಇತರ ಬೋರ್ಡ್ ಆಟಗಳನ್ನು ಒದಗಿಸಲಿದೆ. ನ ಇತ್ತೀಚಿನ ಪ್ರಚಾರಾಂದೋ ಲನವು ಬಹಳ ಆಳವಾದ ಸಂಬಂಧ ಹೊಂದಿರುವ ಮತ್ತು ದೇಶದ ಜನಪ್ರಿಯ ಆಟವಾಗಿರುವ ಲೂಡೊವನ್ನು ಆಚರಿಸುತ್ತ, ಹೆಚ್ಚು ಜನರನ್ನು ತಲುಪುತ್ತ ಜನಮಾನಸದೊಂದಿಗೆ ಬಲವಾದ ಸಂಬಂಧ ಬೆಸೆಯುತ್ತದೆ.
ಲ್ಯೂಡೊನ ದೇಶವ್ಯಾಪಿ ಜನಪ್ರಿಯತೆ ಹಾಗೂ ಆಳವಾದ ಸಂಬಂಧವನ್ನು ಆಚರಿಸುವ “ ಇಂಡಿಯಾ ಕಾ ಅಪ್ನಾ ಗೇಮ್” ಎನ್ನುವ ತನ್ನ ಇತ್ತೀಚಿನ ಪ್ರಚಾರಾಂದೋಲನ ಆರಂಭಿಸಿರುವುದಾಗಿ Zupee ಪ್ರಕಟಿಸಿದೆ.ಈ ಸಹಯೋಗದ ಮೂಲಕ, ಸಲ್ಮಾನ್ ಖಾನ್ ಅವರಂತಹ ಪ್ರಸಿದ್ಧ ತಾರೆ ಸೇರಿದಂತೆ ತನ್ನ ಪ್ರತಿಷ್ಠಿತ ಸೆಲಿಬ್ರಿಟಿಗಳೊಂದಿಗಿನ ಸಹಯೋಗ ಪಟ್ಟಿಗೆ ಮತ್ತೊಂದು ಜನಪ್ರಿಯ ಹೆಸರನ್ನು ಸೇರಿಸುವುದರ ಜೊತೆಗೆ ತನ್ನ ವೇದಿಕೆಯನ್ನು ವಿಸ್ತರಿಸಿದೆ.
ಈ ಉಪಕ್ರಮವು, ಕೇವಲ ಮನೋರಂಜನೆ ಮತ್ತು ರೋಮಾಂಚನ ಉಂಟು ಮಾಡುವ ಚೈತನ್ಯದಾಚೆ ಲೂಡೊವನ್ನು ಸರ್ವ ಜನಾಂಗಗಳ ಆಟವನ್ನಾಗಿಸಿ ವಿವಿಧ ಸಾಮಾಜಿಕ ಹಿನ್ನೆಲೆ ಹಾಗೂ ವೈವಿಧ್ಯ ಪ್ರೇಕ್ಷಕರನ್ನು ತಲುಪುವ ಗುರಿ ಹೊಂದಿದೆ.
ಝುಪೀ ನ ಸಿ ಇ ಓ ಹಾಗೂ ಸಂಸ್ಥಾಪಕ ದಿಲ್ಶೇರ್ ಸಿಂಗ್ ಮಾಲ್ಹಿ ಅವರು ಈ ಸಹಯೋಗದ ಬಗ್ಗೆ ತಮಗಿರುವ ಉತ್ಸುಕತೆ ವ್ಯಕ್ತಪಡಿಸುತ್ತ, “ ಭಾರತ ಅತ್ಯಂತ ಜನಪ್ರಿಯ ಮನೋರಂಜಕರಾದ ಕಪಿಲ್ ಶರ್ಮಾ , ಝುಪೀ ಯನ್ನು ಬ್ರ್ಯಾಂಡ್ ರಾಯಭಾರಿ ಯಾಗಿ ಸೇರಿಕೊಳ್ಳುತ್ತಿದ್ದಾರೆ. ಅವರ ಹಾಸ್ಯದ ಮೇಧಾವಿತನ, ಎಂಥವರನ್ನೂ ಆಕರ್ಷಿಸುವ ತಂತ್ರಗಾರಿಕೆ ಮತ್ತು ಜನಮಾನಸ ವನ್ನು ಸೆರೆಹಿಡಿಯುವ ಸಾಮರ್ಥ್ಯಗಳ ಮೂಲಕ, ಆನಂದದಾಯಕವಾದ ಹಾಗೂ ಅರ್ಥಪೂರ್ಣವಾದ ಮನೋರಂಜನೆಯ ನಮ್ಮ ಪ್ರಯತ್ನಕ್ಕೆ ಅತ್ಯಂತ ಸೂಕ್ತ ವ್ಯಕ್ತಿಯಾಗಿದ್ದಾರೆ. “ಇಂಡಿಯಾ ಕಾ ಅಪ್ನಾ ಗೇಮ್” ಪ್ರಚಾರಾಂದೋ ಲನ ದ ಮೂಲಕ ಲೂಡೋ ಆಟದೊಂದಿಗೆ ಜನರಿಗಿರುವ ವ್ಯಾಪಕ ಜನಪ್ರಿಯತೆ ಹಾಗೂ ಭಾವನಾತ್ಮಕ ನಂಟನ್ನು ಆಚರಿಸುವುದು ನಮ್ಮ ಗುರಿ. “ ಎಂದರು.
ಬಹಳ ಪ್ರಖ್ಯಾತಿ ಹೊಂದಿರುವ ಎಲ್ಲಾ ವಯೋಮಾನದವರು ಇಷ್ಟಪಡುವಂಥ ನಟ ಕಪಿಲ್ ಶರ್ಮಾ, “ಝುಪೀನ ಭಾಗವಾಗಿರುವುದು ನನಗೆ ಸಂತಸ ಉಂಟು ಮಾಡಿದೆ.ಗೇಮಿಂಗ್ ಬಗ್ಗೆ ನನಗಿರುವ ಪ್ರೀತಿಯನ್ನು ಝುಪೀಹಂಚಿಕೊಳ್ಳುತ್ತದೆ . ಅರ್ಥಪೂರ್ಣ ಮನೋರಂಜನೆ ಬಗ್ಗೆ ಝುಪೀಯ ವಿನೂತನ ವಿಧಾನ ಹಾಗೂ ಬದ್ಧತೆ , ಆನ್ ಲೈನ್ ಗೇಮಿಂಗ್ ಉದ್ದಿಮೆಯಲ್ಲಿ ಅವರಿಗೆ ವಿಶಿಷ್ಟ ಸ್ಥಾನ ಕಲ್ಪಿಸಿದೆ. ಅವರ ಪ್ರಧಾನ ಉತ್ಪನ್ನವಾದ ಲೂಡೊ, ತನ್ನ ತೊಡಗಿಕೊಳ್ಳುವ ಆಟದ ವೈಖರಿಯ ಮೂಲಕ ಲಕ್ಷಾಮ್ತರ ಮನಸ್ಸನ್ನು ಸೂರೆಗೊಂಡಿದೆ. ಲೂಡೊ ಬಗ್ಗೆ ಪ್ರೀತಿಯನ್ನು ಮತ್ತಷ್ಟು ವಿಸ್ತರಿಸಲು ಝುಪೀಯನ್ನು ಸೇರಿಕೊಳ್ಳುತ್ತಿ ರುವುದು ನನಗೆ ಹರ್ಷ ತಂದಿದೆ. “ ಎಂದರು.
ಕಪಿಲ್ ಶರ್ಮಾ ಅವರ ಭಾಗಿತ್ವವಲ್ಲದೆ, ಈ ಪ್ರಚಾರಾಲೋಂದನವು ಮಾಜಿ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್ , ಫ್ರೀಸ್ಟೈಲ್ ಕುಸ್ತಿಪಟು ಯೋಗೇಶ್ವರ್ ದತ್, ಮಾಜಿ ವೃತ್ತಿನಿರತ ಹಾಕಿ ಆಟಗಾರ ಸರ್ದಾರ್ ಸಿಂಗ್ ಮತ್ತು ಭಾರತೀಯ ಕಬ್ಬಡಿ ಆಟಗಾರ ಪವನ್ ಶೇರಾವತ್ ರಂತಹ ಖ್ಯಾತನಾಮರು ಸೇರಿದಂತೆ ಇನ್ನೂ ಅನೇಕ ಗೌರವಾನ್ವಿತ ಕ್ರೀಡಾ ಪಟುಗಳನ್ನು ಒಳಗೊಂಡಿದೆ. ಇವರೆಲ್ಲರೂ “ಇಂಡಿಯಾ ಕಾ ಅಪ್ನಾ ಗೇಮ್” ನಿಜಕ್ಕೂ ಅರ್ಥಪೂರ್ಣ ಆಟದ ಬಗ್ಗೆ ಲಘು ಹಾಸ್ಯಭರಿತ ಚರ್ಚೆಯಲ್ಲಿ ತೊಡಗಿ ಕೊಳ್ಳುತ್ತಾರೆ.
ಲಿಯೋ ಬ್ರುನೆಟ್ ಏಷ್ಯಾ ನ ಸಿ ಇ ಓ ಹಾಗೂ ಪ್ರಧಾನ ಸೃಜನಾತ್ಮಕ ಅಧಿಕಾರಿ ರಾಜ್ ದೀಪಕ್ ದಾಸ್, “ ಲೂಡೊ ಆಟವು ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ ಹಾಗೂ ಎಲ್ಲಾ ವಯೋಮಾನದ ಜನರೊಂದಿಗೆ ಸ್ಪಂದಿಸುತ್ತದೆ. ಯ ಲೂಡೊ ಕುರಿತ “ಇಂಡಿಯಾ ಕಾ ಅಪ್ನಾ ಗೇಮ್” ನ ಬಗ್ಗೆ ದೇಶದ ಜನರಿಗಿರುವ ಪ್ರೀತಿಯನ್ನು ಮೋಜಿನಿಂದ ಕೂಡಿದ ರೀತಿಯಲ್ಲಿ ಆಚರಿಸುವ ಪ್ರಚಾರಾಂದೋಲನ ಇದಾಗಿದೆ.” ಎಂದರು.
ಈ ಅಸೋಸಿಯೇಷನ್ ಅನ್ನು ‘ಪಿಎಬಿ – ಪೀಪಲ್ ಆಸ್ ಬ್ರಾಂಡ್’ ನಿಂದ ರಚಿಸಲಾಗಿದೆ, ಇದನ್ನು ಲಿಯೋ ಬರ್ನೆಟ್ ಅವರು ಪರಿಕಲ್ಪನೆ ಮಾಡಿದ್ದಾರೆ ಮತ್ತು ಪ್ರೊಡಿಜಿಯಸ್ ನಿರ್ಮಿಸಿದ್ದಾರೆ.