Friday, 22nd November 2024

ಗೃಹಜ್ಯೋತಿ ಯೋಜನೆ: ಇಂದಿನಿಂದ ಬಳಸುವ ವಿದ್ಯುತ್ ಉಚಿತ

ಬೆಂಗಳೂರು: ಗೃಹಜ್ಯೋತಿ ಯೋಜನೆ ಶನಿವಾರದಿಂದ ಬಳಸುವ ವಿದ್ಯುತ್ ಉಚಿತ ವಾಗಿರುತ್ತದೆ. ಜುಲೈ 1ರಿಂದ ಗೃಹಜ್ಯೋತಿ ಯೋಜನೆ ಅಡಿ ಗೃಹ ಬಳಕೆದಾರರಿಗೆ ಮಾಸಿಕ 200 ಯೂನಿಟ್’ಗಿಂತ ಕಡಿಮೆ ವಿದ್ಯುತ್ ಗೆ ಆಗಸ್ಟ್’ನಲ್ಲಿ ಶೂನ್ಯ ಬಿಲ್ ನೀಡಲಾಗು ತ್ತದೆ.

ಜೂನ್ ತಿಂಗಳಲ್ಲಿ ಬಳಕೆ ಮಾಡಿದ ವಿದ್ಯುತ್ ಗೆ ಬಿಲ್ ನೀಡಲಾಗುವುದು.

ಆಗಸ್ಟ್ 1ರ ಬಳಿಕ ರೀಡ್ ಮಾಡುವ ಬಿಲ್ ಗೆ ಮಾತ್ರ ಗೃಹಜ್ಯೋತಿ ವಿನಾಯಿತಿ ಅನ್ವಯ ವಾಗುತ್ತದೆ. ಜುಲೈನಲ್ಲಿ ಯಾವುದೇ ದಿನಾಂಕದಲ್ಲಿ ಬಿಲ್ ನೀಡಿದರೂ ಅದರ ಸಂಪೂರ್ಣ ಶುಲ್ಕವನ್ನು ಗ್ರಾಹಕರು ಪಾವತಿಸಬೇಕು. ಆಗಸ್ಟ್ 1ರ ನಂತರ ರೀಡ್ ಮಾಡುವ ಬಿಲ್ ಗಳನ್ನು ಮಾತ್ರ ಪಾವತಿಸುವಂತಿಲ್ಲ. ಅದಕ್ಕೆ ಮೊದಲಿನ ವಿದ್ಯುತ್ ಬಿಲ್ ಗಳನ್ನು ಪಾವತಿಸಬೇಕು.

ನಿಗದಿಪಡಿಸಿದ ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದಲ್ಲಿ ಹೆಚ್ಚುವರಿ ಯೂನಿಟ್ ಬಳಕೆಯ ಬಿಲ್ ಪಾವತಿಸಬೇಕು. ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ಕಡಿತ ಗೊಳಿಸಲಾಗುವುದು. ಬಾಕಿ ಪಾವತಿಸಿದ ನಂತರ ಸಂಪರ್ಕ ಪಡೆಯಬಹುದು ಎಂದು ಹೇಳಲಾಗಿದೆ.

2022 -23ನೇ ಸಾಲಿನ ಸರಾಸರಿ ವಿದ್ಯುತ್ ಬಳಕೆ ಪ್ರಮಾಣದ ಮೇಲೆ ಶೇಕಡ 10ರಷ್ಟು ವಿದ್ಯುತ್ ಉಚಿತವಾಗಿ ಬಳಕೆ ಮಾಡಬ ಹುದು. 200 ಯೂನಿಟ್ ಮೀರಿದರೆ ಸಂಪೂರ್ಣ ಶುಲ್ಕ ಪಾವತಿಸಬೇಕು. ಯಾವುದಾದರೂ ಒಂದು ತಿಂಗಳಲ್ಲಿ ಮಾತ್ರ 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸಿದರೆ ಆ ನಿಗದಿತ ತಿಂಗಳ ಬಿಲ್ ಮಾತ್ರ ಪೂರ್ಣ ಪಾವತಿಸಬೇಕು. ಮುಂದಿನ ತಿಂಗಳಿಂದ ಗೃಹಜ್ಯೋತಿ ಯೋಜನೆಯ ಸೌಲಭ್ಯ ಮುಂದುವರೆಯುತ್ತದೆ ಎಂದು ಹೇಳಲಾಗಿದೆ.