ನಕಲಿ ಸಂಸ್ಥೆಗಳ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ 9,000 ನಕಲಿ GSTINಗಳು ಮತ್ತು 25,000 ಕೋಟಿ ರೂ.ಗಳ ಇನ್ಪುಟ್ ತೆರಿಗೆ ಕ್ರೆಡಿಟ್(ITC) ಕ್ಲೈಮ್ ಗಳನ್ನು ಒಳಗೊಂಡಿರುವ 304 ಸಿಂಡಿಕೇಟ್ಗಳನ್ನು GST ಅಧಿಕಾರಿಗಳು ಭೇದಿಸಿದ್ದಾರೆ ಎಂದು CBIC ಅಧ್ಯಕ್ಷ ವಿವೇಕ್ ಜೋಹ್ರಿ ಹೇಳಿದ್ದಾರೆ.
ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯ(ಸಿಬಿಐಸಿ) ಮುಖ್ಯಸ್ಥರು, ಕಾರ್ಪೊರೇಟ್ ಆದಾಯ ತೆರಿಗೆದಾರರ ಮೂಲದಲ್ಲಿ ಕೇವಲ 40 ಪ್ರತಿಶತದಷ್ಟು ಮಾತ್ರ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಅಡಿಯಲ್ಲಿ ನೋಂದಾಯಿಸಲಾಗಿದೆ ಎಂದು ಹೇಳಿದ್ದಾರೆ.
ಐಟಿಸಿಯನ್ನು ಮೋಸದಿಂದ ಕ್ಲೈಮ್ ಮಾಡುವ ಮತ್ತು ಬೊಕ್ಕಸಕ್ಕೆ ವಂಚಿಸುವ ಉದ್ದೇಶ ದಿಂದ ಜಿಎಸ್ಟಿ ಅಡಿಯಲ್ಲಿ ನೋಂದಾಯಿಸಲಾದ ನಕಲಿ ವ್ಯವಹಾರಗಳನ್ನು ಗುರುತಿಸಲು ಕೇಂದ್ರ ಮತ್ತು ರಾಜ್ಯ ತೆರಿಗೆ ಅಧಿಕಾರಿಗಳು ಎರಡು ತಿಂಗಳ ವಿಶೇಷ ಅಭಿಯಾನವನ್ನು ನಡೆಸುತ್ತಿದ್ದಾರೆ.