Friday, 22nd November 2024

ಅಮೆರಿಕದ ಶಾಲೆಗಳಲ್ಲಿ ಶೀಘ್ರದಲ್ಲಿಯೇ ಹಿಂದಿ ಭಾಷೆ ಕಲಿಕೆ

ವಾಷಿಂಗ್ಟನ್:‌ ಅಮೆರಿಕದ ಶಾಲೆಗಳಲ್ಲಿ ಶೀಘ್ರದಲ್ಲಿಯೇ ಹಿಂದಿಯನ್ನು ಎರಡನೇ ಭಾಷೆಯಾಗಿ ಕಲಿಯಲು ಅವಕಾಶ ನೀಡುವ ಸಾಧ್ಯತೆ ಇದೆ.

ಆಡಳಿತಾರೂಢ ಡೆಮಾಕ್ರಟಿಕ್‌ ಪಕ್ಷದ ಸಂಘಟನೆ ಏಷ್ಯಾ ಸೊಸೈಟಿ ಮತ್ತು ಇಂಡಿಯನ್‌ ಅಮೆರಿಕನ್‌ ಇಂಪ್ಯಾಕ್ಟ್‌ ಈ ಸಂಬಂಧ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರಿಗೆ ಪ್ರಸ್ತಾಪ ಸಲ್ಲಿಸಿದೆ. ಈ ಪ್ರಸ್ತಾಪದ ಪ್ರಕಾರ 1000 ಶಾಲೆಗಳಲ್ಲಿ ಹಿಂದಿಯನ್ನು ಕಲಿಸಲಯ ವ್ಯವಸ್ಥೆ ಯಾಗಲಿದೆ. ಇದಕ್ಕೆ 816 ಕೋಟಿ ರೂ. ನಿಧಿ ಸಿದ್ಧ ವಾಗಲಿದೆ.

ಮುಂದಿನ ವರ್ಷ ಅಧ್ಯಕ್ಷೀಯ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಹಾಗೂ ಉಭಯ ದೇಶಗಳ ಬಾಂಧವ್ಯ ವೃದ್ಧಿಸು ತ್ತಿರುವ ಕಾರಣದಿಂದ ಪ್ರಸ್ತಾಪ ಅಂಗೀಕಾರ ವಾಗುವ ಸಾಧ್ಯತೆ ನಿಚ್ಚಳವಾಗಿದೆ.

ಮುಂದಿನ ವರ್ಷ ಸೆಪ್ಟೆಂಬರ್‌ ವೇಳೆಗೆ ಅಮೆರಿಕದ ಶಾಲೆಗಳಲ್ಲಿ ಹಿಂದಿ ಬೋಧನೆ ಶುರು ವಾಗುವ ನಿರೀಕ್ಷೆ ಇದೆ. ಪ್ರಾಥಮಿಕ ತರಗತಿಗಳಲ್ಲಿ ಇಂಗ್ಲಿಷ್‌ ಬಳಿಕ ಎರಡನೇ ಭಾಷೆ ಯಾಗಿ ಹಿಂದಿಯನ್ನು ಆಯ್ಕೆ ಮಾಡಬಹುದು. ಅಮೆರಿಕದಲ್ಲಿ ಇರುವ 45 ಲಕ್ಷಕ್ಕೂ ಹೆಚ್ಚು ಭಾರತೀಯರಲ್ಲಿ 9 ಲಕ್ಷ ಮಂದಿ ಹಿಂದಿ ಭಾಷಿಕರಾಗಿದ್ದಾರೆ.