Saturday, 23rd November 2024

ಬಿಸಿಸಿಐ: ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್​ ಅಗರ್ಕರ್​ ನೇಮಕ

ನವದೆಹಲಿ: ಭಾರತ ಹಿರಿಯ ಪುರುಷರ ಕ್ರಿಕೆಟ್​ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಮಾಜಿ ವೇಗಿ ಅಜಿತ್​ ಅಗರ್ಕರ್​ ನೇಮಕ ವಾಗಿದ್ದಾರೆ.

ಕ್ರಿಕೆಟ್ ಸಲಹಾ ಸಮಿತಿಯ (ಸಿಎಸಿ) ಶಿಫಾರಸಿನ ಮೇರೆಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಈ ವಿಚಾರವನ್ನು ಪ್ರಕಟಿಸಿ ದ್ದಾರೆ.

ಸುಲಕ್ಷಣಾ ನಾಯಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನೊಳ ಗೊಂಡ ಕ್ರಿಕೆಟ್ ಸಲಹಾ ಸಮಿತಿಯು (ಸಿಎಸಿ) ಪುರುಷರ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕಾಗಿ ಅರ್ಜಿದಾರರನ್ನು ಸಂದರ್ಶಿಸಿತು.

ಅಗರ್ಕರ್ ಭಾರತ ತಂಡದ ಪರವಾಗಿ 26 ಟೆಸ್ಟ್, 191 ಏಕದಿನ ಮತ್ತು 4 ಟಿ20 ಪಂದ್ಯ ಗಳನ್ನು ಆಡಿದ್ದಾರೆ. 1999, 2003 ಮತ್ತು 2007ರ ಏಕದಿನ ವಿಶ್ವಕಪ್ ತಂಡದ ಭಾಗವಾ ಗಿದ್ದರು. 2007ರ ಟಿ20 ವಿಶ್ವಕಪ್​ ವಿಜೇತ ತಂಡದಲ್ಲೂ ಇದ್ದರು.

ಅಜಿತ್​ ಅಗರ್ಕರ್​ ಸುಮಾರು 1 ಕೋಟಿ ರೂಪಾಯಿ ವೇತನ ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಸಮಿತಿಯ ಉಳಿದ ಸದಸ್ಯರಿಗೆ ತಲಾ 90 ಲಕ್ಷ ರೂಪಾಯಿ ವೇತನ ಸಿಗಲಿದೆ.

ವೆಸ್ಟ್​ ಇಂಡೀಸ್​ ಸರಣಿಗೆ ಟೆಸ್ಟ್ ಮತ್ತು ಏಕದಿನ ತಂಡವನ್ನು ಆಯ್ಕೆ ಮಾಡಲಾಗಿದೆ. ಈ ಸರಣಿ ಪೂರ್ಣಗೊಂಡ ನಂತರ ಟಿ20 ಸರಣಿ ನಡೆಯಲಿದ್ದು, ಅಜಿತ್​ ಅಗರ್ಕರ್​ ನೇತೃತ್ವದಲ್ಲಿ ಮೊದಲ ತಂಡದ ಆಯ್ಕೆ ನಡೆಯಲಿದೆ.

ಅಜಿತ್​ ಅಗರ್ಕರ್​ ಅವರು ಪ್ರಧಾನ ಆಯ್ಕೆಗಾರ ಹುದ್ದೆಗೆ ಏಕೈಕ ಅಭ್ಯರ್ಥಿಯಾಗಿದ್ದರು. ಪ್ರಸ್ತುತ ಅವರು ಕುಟುಂಬದೊಂದಿಗೆ ವಿದೇಶ ಪ್ರವಾಸದಲ್ಲಿದ್ದಾರೆ. ಅಲ್ಲಿಂದಲೇ ಅವರು ಸಂದರ್ಶನಕ್ಕೆ ಹಾಜರಾಗಿದ್ದಾರೆ.

ಇದೇ ಕಾರಣಕ್ಕಾಗಿ ಈ ಹಿಂದೆ ಅನುಸರಿಸಿಕೊಂಡು ಬರುತ್ತಿದ್ದ ದೇಶದ ಐದು ವಲಯಗಳಿಂದ ತಲಾ ಒಬ್ಬ ಆಯ್ಕೆಗಾರರನ್ನು ನೇಮಿಸುವ ಹಳೆಯ ಸಂಪ್ರದಾಯ ಮುರಿಯಿತು. ಅಗರ್ಕರ್ ಅವರ ನೇಮಕದ ಬಳಿಕ ಆಯ್ಕೆ ಸಮಿತಿಯಲ್ಲಿ ಪಶ್ಚಿಮ ವಲಯ ದಿಂದ ಇಬ್ಬರು ಆಯ್ಕೆಗಾರರನ್ನು ಹೊಂದಿದಂತಾಗುತ್ತದೆ.