Friday, 22nd November 2024

ಮಣಿಪುರಲ್ಲಿ ಇಂದಿನಿಂದ ಶಾಲೆಗಳು ಆರಂಭ

ಇಂಫಾಲ: ಹಿಂಸಾಚಾರ ಪೀಡಿದ ಮಣಿಪುರಲ್ಲಿ ಇಂದಿನಿಂದ ಶಾಲೆಗಳು ಆರಂಭವಾಗ ಲಿವೆ ಎಂದು ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ತಿಳಿಸಿದ್ದಾರೆ.

ಒಂದರಿಂದ ಎಂಟರವರೆಗಿನ ತರಗತಿಗಳು ಆರಂಭವಾಗಲಿವೆ ಎಂದು ತಿಳಿಸಿದ್ದಾರೆ. ‘ಸೂಕ್ಷ್ಮ ಪ್ರದೇಶಗಳಲ್ಲಿ ರಾಜ್ಯ ಭದ್ರತಾ ಪಡೆ ಹಾಗೂ ಅರೆಸೇನಾ ಪಡೆಗಳನ್ನು ನಿಯೋ ಜಿಸಲು ನಿರ್ಧರಿಸಲಾಗಿದೆ.

ಐದು ಜಿಲ್ಲೆಗಳಲ್ಲಿ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿದೆ. ಒಂದರಿಂದ ಎಂಟ ರವರೆಗಿನ ತರಗತಿಹಳನ್ನು ತೆರೆಯಲು ನಿರ್ಧರಿಸಲಾಗಿದೆ’ ಎಂದು ಬೀರೇನ್‌ ಸಿಂಗ್‌ ಅವರು ಮಾಧ್ಯಮಗಳಿಗೆ ತಿಳಿಸಿದರು. ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದರಿಂದ ಮೇ ಮೊದಲ ವಾರದಿಂದಲೇ ಶಾಲೆಗಳು ಮುಚ್ಚಿದ್ದವು.

ಮೈತೇಯಿ ಸಮುದಾಯವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸುವ ಪ್ರಸ್ತಾಪವನ್ನು ವಿರೋಧಿಸಿ ಕುಕಿ ಸಮುದಾಯ ಪ್ರತಿಭಟನೆ ಪ್ರಾರಂಭಿಸಿತ್ತು. ಇದು ಹಿಂಸಾಚಾರಕ್ಕೆ ಕಾರಣವಾಗಿತ್ತು. ಹಿಂಸಾಚಾರದಿಂದಾಗಿ ಈವರೆಗೆ 114 ಮಂದಿ ಮೃತಪಟ್ಟಿದ್ದು, 40,000 ಮಂದಿ ನಿರಾಶ್ರಿತರಾಗಿದ್ದಾರೆ.