ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಸತತ 14 ನೇ ಬಾರಿ ರಾಜ್ಯ ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಮಾಡುತ್ತಿದ್ದಾರೆ.
ಬಜೆಟ್ ಆರಂಭದ ವೇಳೆ ಮಾತನಾಡಿ, ಬಸವಣ್ಣನವರಿಂದ ಹಿಡಿದು ಒಡೆಯರ ತನಕ ಈ ನಾಡಿನ ಘನ ತೇರನ್ನು ಇಂದಿಗೂ ನಾವೆಲ್ಲ ಎಳೆಯುತ್ತಿದ್ದೇವೆ ಅಂತ ಹೇಳಿದರು. ಸರ್ವರಿಗೂ ಸಮಪಾಲನ್ನು ನಾವು ಅನುಸರಿಸುತ್ತಿದ್ದೇವೆ ಆಂತ ಅವರು ಹೇಳಿದರು. ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ಕುವೆಂಪು ಅವರ ಮಾತನ್ನು ಉಲ್ಲೇಖ ಮಾಡಿದರು.
ಈ ಬಾರಿಯ ಬಜೆಟ್‌ನಲ್ಲಿ ಅಬಕಾರಿ ಶುಲ್ಕದಲ್ಲಿ ಹೆಚ್ಚಳ ಮಾಡಿದ್ದು ಶೇಕಡ 20ರಷ್ಟು ಮಾಡಿದ್ದು ಈ ಮೂಲಕ ಬಿಯರ್ ಮೇಲಿನ ಅಬಕಾರಿ ಶುಲ್ಕವನ್ನು ಶೇ 10ರಷ್ಟುಹೆಚ್ಚಳ ಮಾಡಲಾಗಿದೆ.