Sunday, 15th December 2024

ಭರವಸೆ ಸಾಕಾರಗೊಳಿಸಲು ಸಾಧ್ಯವಾಗದಿದ್ದರೆ ಅಪರಾಧ ಎನ್ನಲಾಗದು: ಒರಿಸ್ಸಾ ಹೈಕೋರ್ಟ್

ಒರಿಸ್ಸಾ: ಮದುವೆಯಾಗುತ್ತೇನೆಂಬ ನಂಬಿಕೆಯಲ್ಲಿ ಸಮ್ಮತಿಯ ದೈಹಿಕ ಸಂಬಂಧ ಬೆಳೆಸಿದ ಬಳಿಕ ಕಾರಣಾಂತರಗಳಿಂದ ಆ ಮದುವೆ ನಿಂತು ಹೋದರೆ ಆಗ ಅದನ್ನು ಅತ್ಯಾಚಾರ ಎಂದು ಹೇಳಲು ಸಾಧ್ಯವಿಲ್ಲ ಎಂದು ಒರಿಸ್ಸಾ ಹೈಕೋರ್ಟ್ ತೀರ್ಪನ್ನು ನೀಡಿದೆ.

ಭುವನೇಶ್ವರ ಮೂಲದ ವ್ಯಕ್ತಿ ಮೇಲೆ ಹೊರಿಸಲಾಗಿದ್ದ ಆರೋಪವನ್ನು ಹೈಕೋರ್ಟ್ ರದ್ದು ಮಾಡಿದೆ. ಅರ್ಜಿದಾರರ ಸ್ನೇಹಿತೆಯಾಗಿದ್ದ ವಿವಾಹಿತ ಮಹಿಳೆಯೊಬ್ಬರು ಕಳೆದ ಐದು ವರ್ಷಗಳಿಂದ ತಮ್ಮ ಪತಿಯೊಂದಿಗೆ ವೈಮನಸ್ಯ ಹೊಂದಿದ್ದರು. ಇದೇ ಮಹಿಳೆ ಯು ಅತ್ಯಾಚಾರ ಆರೋಪ ಮಾಡಿದ್ದರು.

ಒಳ್ಳೆಯ ಉದ್ದೇಶದಿಂದ ನೀಡಿದ ಭರವಸೆಯು ಸಾಕಾರಗೊಳಿಸಲು ಸಾಧ್ಯವಾಗದೇ ಇದ್ದರೆ ಅದನ್ನು ಅಪರಾಧ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಲೈಂಗಿಕವಾಗಿ ಅನ್ಯೋನ್ಯವಾಗಿದ್ದಾರೆ ಎಂದ ಮಾತ್ರಕ್ಕೆ ಅದನ್ನು ಅಪರಾಧ ಎಂದು ಹೇಳಲು ಸಾಧ್ಯವಿಲ್ಲ ಎಂದು ಜುಲೈ ಮೂರರಂದು ನೀಡಿದ ಆದೇಶದಲ್ಲಿ ಒರಿಸ್ಸಾ ಹೈಕೋರ್ಟ್ ತಿಳಿಸಿದೆ.

ಸಂತ್ರಸ್ತೆಗೆ ವಿವಾಹದ ಆಶ್ವಾಸನೆಯನ್ನು ನೀಡಿ ಇಬ್ಬರು ದೈಹಿಕ ಸಂಬಂಧವನ್ನು ಸಮ್ಮತಿಯ ಮೇಲೆ ಹೊಂದಿದ್ದರೆ ಕೆಲವು ಕಾರಣಗಳಿಂದ ಮದುವೆ ಮಾಡಿಕೊಳ್ಳಲು ಸಾಧ್ಯವಾಗದೇ ಇದ್ದರೆ, ಕೊಟ್ಟ ಭರವಸೆ ಉಲ್ಲಂಘಿಸಿದ್ದಾರೆ ಎಂಬ ಒಂದೇ ಕಾರಣಕ್ಕೆ ಅದನ್ನು ಅತ್ಯಾಚಾರ ಎಂದು ಹೇಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್​ ನೀಡಿದ ಆದೇಶವನ್ನು ಹೈಕೋರ್ಟ್ ಗಮನಿಸಿದೆ.