ತನ್ನಿಮಿತ್ತ
ಡಾ.ಕರವೀರಪ್ರಭು ಕ್ಯಾಲಕೊಂಡ
drkvkyalakond@gmail.com
‘ಭಾರತ ಪ್ರಗತಿಯ ಹಾದಿಯಲ್ಲಿದೆ. ಶಿಕ್ಷಣ, ಸಾರ್ವಜನಿಕ ಆರೋಗ್ಯ, ನೈರ್ಮಲ್ಯ, ಆರ್ಥಿಕ ಪ್ರಗತಿ ಮತ್ತು ತಂತ್ರಜ್ಞಾನ ಮುನ್ನಡೆ ಗಳಲ್ಲಿ ಬಲವಾದ ಪ್ರಗತಿ ಸಾಧಿಸುತ್ತಿದೆ. ೧೫ – ೨೪ ವರ್ಷ ವಯಸ್ಸಿನವರೇ ೨೫.೪ ಕೋಟಿ ಇದ್ದಾರೆ. ಹೀಗಾಗಿ ಹೊಸ ಚಿಂತನೆ ಮತ್ತು ಸಂಶೋ ಧನೆಗೆ ಬಹುದೊಡ್ಡ ಮೂಲ ಎನಿಸಿಕೊಂಡಿದೆ. ಮಹಿಳೆಯರು ಮತ್ತು ಬಾಲಕಿಯರಿಗೆ ಸಮಾನ ಶಿಕ್ಷಣ ಮತ್ತು ಕೌಶಲಾ ಭಿವೃದ್ಧಿ ಅವಕಾಶ ದೊರೆತಲ್ಲಿ ಇನ್ನಷ್ಟು ವೇಗವಾಗಿ ಮುನ್ನಡೆಯಲಿದೆ…’
ಜುಲೈ ೧೧,೧೯೮೭ರಂದು ವಿಶ್ವದ ಜನಸಂಖ್ಯೆಯು ೫೦೦ ಕೋಟಿಯ ಗಡಿ ದಾಟಿ ಆತಂಕದ ಅಂಚಿಗೆ ತಲುಪಿದ ದಿನ. ಇದರಿಂದ ಜುಲೈ ೧೧ರಂದು ಪ್ರತೀ ವರ್ಷವೂ ವಿಶ್ವ ಜನಸಂಖ್ಯಾ ದಿನವನ್ನಾಗಿ ಆಚರಿಸಲಾಗುತ್ತಿದೆ. ನಿರಂತರ ಬೆಳೆಯುವ ಜನಸಂಖ್ಯೆಗೆ ಬೇಕಾಗುವ ಆಹಾರ, ಬಟ್ಟೆ-ಬರೆ, ವಸತಿ, ಆರೋಗ್ಯ, ಶಿಕ್ಷಣ ಹಾಗೂ ಉದ್ಯೋಗ ಇವುಗಳನ್ನು ಒದಗಿಸುವಷ್ಟು ಸಂಪನ್ಮೂಲಗಳು ಇಲ್ಲದೇ ಹೋದಾಗ ಜನಸಂಖ್ಯಾ ಬೆಳವಣಿಗೆ ಒಂದು ಸಮಸ್ಯೆಯಾಗುತ್ತದೆ.
ವೈದ್ಯ ವಿಜ್ಞಾನ ಬೆಳೆದಂತೆ, ಆರೋಗ್ಯ ಸ್ಥಿತಿ ಉತ್ತಮಗೊಂಡಂತೆ ಮನುಷ್ಯ ತನ್ನ ಅಕಾಲ ಮರಣವನ್ನು ನಿವಾರಿಸಿಕೊಂಡಿದ್ದಾನೆ. ಹಿಂದುಳಿದ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೂ ಮಕ್ಕಳ ಸಾವಿನ ಸಂಖ್ಯೆ ಕಡಿಮೆ ಮಾಡಲು ಬಳಸಿಕೊಳ್ಳುತ್ತಿರುವ ವೈದ್ಯ ವಿeನವನ್ನು, ಜನನಸಂಖ್ಯೆಯನ್ನು ಮಿತಿ ಯಲ್ಲಿಡುವುದಕ್ಕಾಗಿ ಬಳಸುವಲ್ಲಿ ಹಿಂದೆ ಉಳಿದಿದ್ದೇವೆ. ಹಿಂಜರಿಯುತ್ತಿದ್ದೇವೆ. ಮಿಕ್ಕೆಲ್ಲ ವಿಷಯಗಳಲ್ಲಿ ಪಾಶ್ಚಾತ್ಯರ ಅನುಕರಣೆ ಮಾಡುವ ಜನ ಕುಟುಂಬ ನಿಯಂತ್ರಣದಲ್ಲಿ ಮಾತ್ರ ಅನಾಸಕ್ತಿ ತೋರುತ್ತಿರುವುದು ವಿಚಿತ್ರ.
ಈ ವರ್ಷದ ಘೋಷವಾಕ್ಯ ’u ಛಿZಠಿe ಜಿo ಜ್ಞಿ bZಜಛ್ಟಿ ಟ್ಛ ಟqಛ್ಟಿ mಟmZಠಿಜಿಟ್ಞ, ಟ್ಞಠ್ಟಿಟ್ಝ ಠಿeಛಿ mಟmZಠಿಜಿಟ್ಞ Zb oZqಛಿ ಠಿeಛಿ ಛಿZಠಿe’ ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಜನಸಂಖ್ಯಾ ಅಂದಾಜು ವರದಿಯನ್ವಯ ಚೀನಾವನ್ನು ಭಾರತ ಹಿಂದಿಕ್ಕಿದೆ. ವರದಿಯ ಪ್ರಕಾರ ಭಾರತದ ಜನಸಂಖ್ಯೆ ೧೪೨,೮೬ ಕೋಟಿ, ಚೀನಾದ್ದು ೧೪೨.೫೭ ಕೋಟಿ. ಚೀನಾದ ಜನಸಂಖ್ಯೆ ಈಗಾಗಲೇ ಕಡಿಮೆ ಯಾಗತೊಡಗಿದೆ. ಜನಸಂಖ್ಯೆ ಸುಸ್ಥಿರತೆ ಸಾಧಿಸುವ ೨.೧ ‘-ರ್ಟಿಲಿಟಿ ರೇಟ್’ ಅನ್ನು ಭಾರತ ಸಾದಿಸಿದೆಯಾದರೂ,
ಹಲವಾರು ಕಾರಣಗಳಿಂದ ಜನಸಂಖ್ಯೆ ಹೆಚ್ಚಳ ಇನ್ನೂ ೩ ದಶಕ ಮುಂದುವರಿಯುತ್ತದೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ.
೨೦೫೦ರ ಹೊತ್ತಿಗೆ ಚೀನಾ ಜನಸಂಖ್ಯೆ ೧೩೧.೭ ಕೋಟಿಗೆ ಇಳಿದರೆ, ಭಾರತದ ಜನಸಂಖ್ಯೆ ೧೬೬.೮ ಕೋಟಿಗೆ ಏರುತ್ತದೆ. ಚೀನಾ ದಲ್ಲಿ ವೃದ್ಧರ ಸಂಖ್ಯೆ ೨೦೩೦ರ ಹೊತ್ತಿಗೆ ೧೯.೨ ಕೋಟಿಗೆ ಏರಿ, ಈಗಿರುವ ಪ್ರಮಾಣದ ದುಪ್ಪಟ್ಟಾಗುತ್ತದೆ. ಭಾರತದಲ್ಲಿ ೨೦೫೦ರ ಹೊತ್ತಿಗೆ ಐದನೇ ಒಂದು ಭಾಗದಷ್ಟು ಜನವೃದ್ಧರಾಗುತ್ತಾರೆ ಎಂದು ವರದಿ ವಿಶ್ಲೇಷಿಸಿದೆ.
ನಮ್ಮ ದೇಶದಲ್ಲಿ ತೀವ್ರವಾಗಿ ಜನಸಂಖ್ಯೆ ಬೆಳೆದಂತೆ ಪ್ರತಿವರ್ಷ ಭೂಮಿ ಏನಾದರೂ ಬೆಳೆಯುತ್ತ ಹೋಗುವುದೇ? ಇಲ್ಲ. ಹಾಗಾದರೆ ಈ ಜನಸಂಖ್ಯಾ ಬೆಳವಣಿಗೆ ಮಾರಕವಲ್ಲದೆ ಮತ್ತೇನು? ಜನಸಂಖ್ಯೆಯು ಬಡತನ, ನಿರುದ್ಯೋಗ, ಅನಕ್ಷ ರತೆ, ಭಿಕ್ಷಾಟನೆ, ಅಪರಾಧ, ಬಾಲಾಪರಾಧ, ವೇಶ್ಯಾವೃತ್ತಿ, ಭ್ರಷ್ಟಾಚಾರ ಮುಂತಾದ ಜ್ವಲಂತ ಸಮಸ್ಯೆಗಳಿಗೆ ದಾರಿ ಮಾಡಿ ಕೊಡುತ್ತದೆ. ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆ ಇಂದು ನಮ್ಮ ದೇಶದ ಅಭಿವೃದ್ಧಿಯ ಹೊಣೆಹೊತ್ತ ನಾಯಕ ರನ್ನು ದಂಗುಗೊಳಿಸಿ ದಿಕ್ಕು ತಪ್ಪಿಸುತ್ತಿದೆ.
ಆದ್ದರಿಂದ ತಾಗುವ ಮುನ್ನ ಬಾಗುವುದು ಲೇಸಲ್ಲವೆ? ಮಕ್ಕಳಿಲ್ಲದವರಿಗೆ ಸದ್ಗತಿಯಿಲ್ಲ ಎಂಬ ಒಂದು ಮಾತಿದೆ. ಗತಿ ದೊರಕು ವುದೋ ಇಲ್ಲವೋ ಹೇಳುವವರಾರು? ಆದರೆ, ಅತಿ ಮಕ್ಕಳನ್ನು ಹೊಂದಿದ ಮನುಷ್ಯ ಇಂದು ಇಲ್ಲಿಯೇ ಗತಿ ಕಾಣದಂತಾಗಿದ್ದಾನೆ. ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವವರೆಂದು ಬಸವಣ್ಣನವರು ಹೇಳಿzರೆ. ಮೊದಲು ಇಲ್ಲಿ ಸಲ್ಲುವಂತೆ ಜೀವಿಸುವುದನ್ನು ಕಲಿಯಬೇಕಾಗಿದೆ. ಮನೆ ತುಂಬ ಮಕ್ಕಳಿರಲೆಂದು ಹೇಳುವ ಕಾಲವೊಂದಿತ್ತು. ಆದರೆ, ಇಂದು ತುಂಬಮಕ್ಕಳಿದ್ದವರ ಗತಿ ಏನಾಗಿದೆ ಎಂಬುದನ್ನು ಕಣ್ಣಿಟ್ಟು ನೋಡುತ್ತಿದ್ದೇವೆ.
ದೇಶದಲ್ಲಿ ಅರೆಹೊಟ್ಟೆ ಉಣ್ಣುವ ಕುಟುಂಬ ಗಳೆಷ್ಟೋ ಇವೆ. ಜನ ಸಾಮಾನ್ಯರಲ್ಲಿ ಬೇರೂರಿರುವ ಇಂಥ ಭಾವನೆಗಳನ್ನು ತೊಲಗಿಸಲು ಶಿಕ್ಷಣವು ಪ್ರಬಲ ಸಾಧನವಾಗಿದೆ. ಮಕ್ಕಳು ಬೇಡವೇ ಬೇಡವೆಂದಲ್ಲ- ಮಕ್ಕಳ ಸಂಖ್ಯೆ ಮಿತಿಯಲ್ಲಿದ್ದರೆ ಹಿತವಾಗುವು ದೆಂಬುದನ್ನು ತಿಳಿಸಿಕೊಡಬೇಕು. ಸಾಮಾನ್ಯವಾಗಿ ಒಂದು ದೇಶದ ಜನಸಂಖ್ಯೆಯ ಏರಿಕೆಯ ಗತಿಯನ್ನು ಅರಿಯಲು ಒಟ್ಟಾರೆ ಬಲವಂತಿಕೆ ದರಎಂಬ ಮಾನದಂಡವನ್ನು ಬಳಸುತ್ತಾರೆ. ಅಂದರೆ ಒಂದು ದೇಶ/ ಪ್ರದೇಶದಲ್ಲಿ ಒಬ್ಬ ಮಹಿಳೆ ೧೮ -೪೯ ವಯಸ್ಸಿನ ತನ್ನಗರ್ಭಧಾರಣಾ ಅವಽಯಲ್ಲಿ ಸರಾಸರಿ ಎಷ್ಟು ಮಕ್ಕಳಿಗೆ ಜನ್ಮನೀಡುತ್ತಿದ್ದಾಳೆ ಎನ್ನುವ ಸರಾಸರಿ ಸಂಖ್ಯೆಯಿದು.
ಭಾರತಕ್ಕೆ ಸ್ವಾತಂತ್ರ್ಯ ಬಂದಾಗ, ಭಾರತದ ಒಟ್ಟಾರೆ ಫಲವಂತಿಕೆ ದರ (Sಊ) ೫.೯, ಅಂದರೆ ೧೯೫೧ರ ವೇಳೆಗೆ ಭಾರತದ ಮಹಿಳೆ
ಸರಾಸರಿ ೬ ಮಕ್ಕಳಿಗೆ ಜನ್ಮ ನೀಡುತ್ತಿದ್ದರು ಎಂದರ್ಥ. ಒಟ್ಟಾರೆ ಫಲವಂತಿಕೆ ದರ ಅದೇ ರೀತಿ ಮುಂದುವರಿದಿದ್ದರೆ ಈಗ ಭಾರತದ ಜನಸಂಖ್ಯೆ ೨೫೦ – ೩೦೦ ಕೋಟಿಗೆ ತಲುಪಬೇಕಿತ್ತು. ಆದರೆ, ಭಾರತವು ಪ್ರಾರಂಭದಿಂದಲೇ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಅರಿವು ಹಾಗೂ ಕುಟುಂಬ ನಿಯಂತ್ರಣ ಸಾಧನಗಳ ಲಭ್ಯತೆಯ ಬಗ್ಗೆ ಹೆಚ್ಚುಒತ್ತು ಕೊಟ್ಟಿದ್ದರಿಂದ ಎಲ್ಲಿ ಅರಿವು, ಲಭ್ಯತೆ ಹಾಗೂ ಮಹಿಳೆಯರ ಶಿಕ್ಷಣ, ಸಬಲೀಕರಣ ಸಾಪೇಕ್ಷವಾಗಿ ಸಾಧ್ಯವಾಯಿತೋ ಅಲ್ಲ ಬಹಳ ಬೇಗನೆ ಟಿಎಪ್ಆರ್ ದರ ಕುಸಿಯುತ್ತ ಬಂತು. ರಾಷ್ಟೀಯ ಕುಟುಂಬ ಆರೋಗ್ಯ ಸರ್ವೇ (ಘೆಊಏಖ)ಯ ಅಂಕಿ ಅಂಶಗಳ ಪ್ರಕಾರ ಈಗ ಭಾರತದ ಸರಾಸರಿ ಟಿಎ-ಆರ್ ದರ ೨.೧ಗೆ ಕುಸಿದಿದೆ.
ಅಂದರೆ ೧೯೫೧ಕ್ಕೆ ಹೋಲಿಸಿದರೆ ಜನಸಂಖ್ಯೆ ಏರಿಕೆಯ ದರ ಅರ್ಧಕ್ಕಿಂತಲೂ ಹೆಚ್ಚು ಕಡಿಮೆಯಾಗಿದೆ. ಸಂತಾನ ಶಕ್ತಿ ಫಲವತ್ತತೆ ೨.೧ ಇದ್ದಲ್ಲಿ ಜನಸಂಖ್ಯೆ ಹೆಚ್ಚುವುದೂ ಇಲ್ಲ. ಕಡಿಮೆಯೂ ಆಗುವುದಿಲ್ಲ ಎನ್ನುವುದು ತಜ್ಞರ ಲೆಕ್ಕಾಚಾರ. ಭಾರತದ ಜನಸಂಖ್ಯಾ ನಿಯಂತ್ರಣ ಯೋಜನೆಯು ಪ್ರಧಾನವಾಗಿ ಮನವರಿಕೆ, ಸೌಲಭ್ಯಗಳ ಒದಗಿಸುವಿಕೆ ಹಾಗೂ ಮಹಿಳಾ ಸಬಲೀಕರಣಗಳನ್ನು ಆಧರಿಸಿಯೇ ನಡೆಯುತ್ತಿದೆ.
ಜಗತ್ತಿನಾದ್ಯಂತ ಎಲ್ಲ ಯಶಸ್ವಿ ಕುಟುಂಬ ನಿಯಂತ್ರಣಗಳ ಕಥನವೂ ಇದೇ ಮಾರ್ಗವನ್ನು ಅನುಸರಿಸಿದೆ. ಭಾರತವು ಜನಸಂಖ್ಯಾ ಸ್ಫೋಟದ ಪರಿಸ್ಥಿತಿಯನ್ನು ಎದುರಿಸುತ್ತಿಲ್ಲವೆಂದೂ, ವಾಸ್ತವವಾಗಿ ಜನಸಂಖ್ಯಾ ಏರಿಕೆಯು ಭಾರ ತದ ಬಡತನಕ್ಕೆ ಕಾರಣವಲ್ಲವೆಂದೂ ಹಾಗೂ ಈಗ ಭಾರತದಲ್ಲಿ ಯುವಜನಸಂಖ್ಯೆ ಹೆಚ್ಚಿರುವ ಕಾರಣದಿಂದ ಅದ್ಭುತ ಆರ್ಥಿಕ ಪ್ರಗತಿಯ ಅವಕಾಶವಿದೆಯಂಬುದೂ ಸ್ಫಟಿಕದಷ್ಟೇ ಸ್ಪಷ್ಟ. ಈ ಎಲ್ಲ ಅಂಶಗಳನ್ನು ಭಾರತ ಸರಕಾರದ ಕುಟುಂಬ ಮತ್ತು ಆರೋಗ್ಯ ಕಲ್ಯಾಣ ಇಲಾಖೆಯ ಭಾಗವಾಗಿರುವ ರಾಷ್ಟೀಯ ಕುಟುಂಬ ಆರೋಗ್ಯ ಸರ್ವೇ ನ ೩,೪ ಮತ್ತು ೫ನೇ ಸುತ್ತು ಹಾಗೂ ಭಾರತದ ೧೯೯೧,೨೦೦೧ ಮತ್ತು ೨೦೧೧ರ ಜನಸಂಖ್ಯಾ ಗಣತಿಯ ವರದಿಗಳು ಸ್ಪಷ್ಟ ಪಡಿಸುತ್ತವೆ.
೧೯೫೧ರಲ್ಲಿ ಭಾರತದ ಜನಸಂಖ್ಯೆ ೩೬ಕೋಟಿ ಇದ್ದರೆ ಈಗ ೧೪೦ ಕೋಟಿಯಾಗಿದೆ. ಅಂದರೆ ಹೆಚ್ಚೂಕಡಿಮೆ ೪ ಪೆಟ್ಟು ಹೆಚ್ಚಿದೆ. ಆಗ ಭಾರತದ ಜಿಡಿಪಿ ೨.೫೨ ಲಕ್ಷ ಕೋಟಿ. ಈಗ ಭಾರತದ ಜಿಡಿಪಿ ೨೦೦ಲಕ್ಷ ಕೋಟಿ. ಅಂದರೆ ಭಾರತದ ಸಂಪತ್ತು ಸ್ವಾತಂತ್ರ್ಯಾ ನಂತರದಲ್ಲಿ ೮೩ ಪಟ್ಟು ಹೆಚ್ಚಾಗಿದೆ. ಈ ಸಂಪತ್ತನ್ನು ಸೃಷ್ಟಿಸಿರುವವರು ಈ ದೇಶದ ಕಾರ್ಮಿಕರು, ರೈತರು, ಉದ್ಯೋಗಿಗಳೇ. ಆದರೂ ಅವರು ಬಡವರಾಗಿಯೇ ಉಳಿದಿರಲು ಸಂಪತ್ತಿನ ವಿತರಣೆಯಲ್ಲಿ ಬ್ರಾಹ್ಮಣವಾಗಿ ಹಾಗೂ ಬಂಡವಾಳ ಶಾಹಿ ನೀತಿಗಳನ್ನು ಅನುಸರಿಸುತ್ತಿರುವುದು ಕಾರಣವೇ ಹೊರತು ಜನಸಂಖ್ಯೆ ಏರಿಕೆಯಲ್ಲ.
ಬಡತನದಿಂದ ತುಂಬಿದ ಶ್ರೀಮಂತ ದೇಶ ನಮ್ಮದು ಎಂದು ಪಂಡಿತ ಜವಾಹರಲಾಲ್ ನೆಹರು ಒಮ್ಮೆ ಹೇಳಿದ್ದರು. ನೆಲ, ಜಲ, ಉತ್ತುಂಗ ಶಿಖರಗಳು, ದೇಶವನ್ನು ಸುತ್ತುವರಿದ ಮೂರು ಸಮುದ್ರಗಳು, ಪ್ರಕೃತಿಯ ಸೌಂದರ್ಯ, ಭೂ- ಜಲ ಸಂಪತ್ತು, ವಿಪುಲ ಖನಿಜ ದ್ರವ್ಯಗಳು ಭಾರತದಲ್ಲಿ ಸಮೃದ್ಧವಾಗಿವೆ. ನಮ್ಮ ದೇಶ ಸುಜಲಾಂ ಸು-ಲಾಂ ಸಸ್ಯ ಶಾಮಲಾಂ ಎಂದೆನಿಸಿತು. ಆದರೆ, ಇಂದು ಎಲ್ಲರಿಗೂ ಅವಶ್ಯ ಆಶ್ರಯ ಸಾಕಷ್ಟು ಸಿಗದಂತಾಗಿದೆ. ಬಡತನ ರೇಖೆಯ ಕೆಳಗೆ ಅನೇಕ ಕುಟುಂಬಗಳಿವೆ. ಸಮೃದ್ಧಿಯ ಗಂಗೆ ಇನ್ನೂ ಬಂದಿಲ್ಲ.
ಇದಕ್ಕೆ ಮುಖ್ಯ ಕಾರಣ ಬಂಡವಾಳ ಶಾಹಿ ನೀತಿ. ಅವರ ಕಪಿಮುಷ್ಟಿಯಲ್ಲಿ ದೇಶ ಇರುವುದರಿಂದ ಬಡವರು ಬಡವರಾಗಿಯೇ ಉಳಿದಿದ್ದಾರೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿzರೆ. ಹಾಗೆ ನೋಡಿದರೆ, ಎನ್ಎ- ಎಚ್ಎಸ್ ವರದಿಗಳು ಹಾಗೂ ಜಗತ್ತಿನಾದ್ಯಂತ ನಡೆಯುತ್ತಿರುವ ಅಧ್ಯಯನಗಳು ಮುಂದಿಡುತ್ತಿರುವ ಅಪಾಯ ಜನಸಂಖ್ಯೆ ಹೆಚ್ಚಳದ್ದಲ್ಲ, ಜನಸಂಖ್ಯೆ ಕಡಿಮೆ ಆಗುತ್ತಿರುವುದು!
ಜಗತ್ತಿನ ಅತ್ಯಂತ ಪ್ರತಿಷ್ಠಿತ ವೈeನಿಕ ಪತ್ರಿಕೆ ಲ್ಯಾನ್ಸೆಟ್ ಅಧ್ಯಯನದ ಪ್ರಕಾರ ಈಗ ಭಾರತದ ಜನಸಂಖ್ಯೆ ೧೪೨.೮೬ ಕೋಟಿ ಯಿದ್ದು, ೨೦೫೦ರ ವೇಳೆಗೆ ೧೬೬.೮ ಕೋಟಿ ತಲುಪಬಹುದೆಂದು ಊಹಿಸಿದ್ದರೂ, ಜನಸಂಖ್ಯೆಯ ವೇಗ ಈಗ ಕುಸಿಯುವುದರಿಂದ ವಾಸ್ತವದಲ್ಲಿ ೨೦೫೦ರಿಂದ ಭಾರತದ ಜನಸಂಖ್ಯೆ ೧೦೯ ಕೋಟಿಗೆ ಇಳಿಯುತ್ತದೆ. ಅದಕ್ಕಿಂತ ಗಂಭೀರ ಸಂಗತಿಯೆಂದರೆ, ಆ ಸಂದರ್ಭದಲ್ಲಿ ಕೆಲಸ ಮಾಡಬಲ್ಲ ಯುವಕರ ಸಂಖ್ಯೆಗಿಂತ ಹಿರಿಯರ, ವಯೋವೃದ್ದರ ಸಂಖ್ಯೆ ಎರಡು ಪಟ್ಟು ಹೆಚ್ಚುತ್ತದೆ. ಇದು ಆ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ.
ಈಗಾಗಲೇ ಚೀನಾದಲ್ಲಿ ಈ ಪರಿಸ್ಥಿತಿ ಎದುರಾಗಿದೆ. ಆದ್ದರಿಂದಲೇ ಅಲ್ಲಿ ಒಂದು ಮಕ್ಕಳ ನೀತಿಯನ್ನು ಸಡಿಲಿಸಿ ಮೂರು ಮಕ್ಕಳನ್ನು ಪಡೆಯಲು ಉತ್ತೇಜನ ನೀಡಲಾಗುತ್ತಿದೆ. ಮುಗಿಸುವ ಮುನ್ನ : u ಠಿeಛಿ ಟ್ಚ್ಚZoಜಿಟ್ಞ ಟ್ಛ ಅZbಜಿ ಓZ ಅಞ್ಟಜಿಠಿ IZeಟಠಿoZq ,ಛಿಠಿ o ಠಿZhಛಿ Z mಛಿbಜಛಿ ಠಿಟ Zbಟmಠಿ Zಞಜ್ಝಿqs mZಜ್ಞಿಜ Zo Z eಟಜ್ಚಿಛಿ ಟ್ಟ eZmmಜ್ಞಿಛಿoo Zb mಟomಛ್ಟಿಜಿಠಿqs ಇದು ಭಾರತ ಸರಕಾರದ ಈ ವರ್ಷದ ಜನಸಂಖ್ಯಾ ದಿನಾಚರಣೆ ಉದ್ದೇಶವಾಗಿದೆ. ಈ ಎಲ್ಲ ವಿಷಯಗಳನ್ನು ಸಾರಾಸಾರಾ ವಿಚಾರಿಸಿ, ಸರಕಾರ ಕುಟುಂಬ ಕಲ್ಯಾಣ ನೀತಿ ಬದಲಿಸಲು ಚಿಂತಿಸಬೇಕಿದೆ.
ಒಂದೆಡೆ ಜನಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳುತ್ತ, ಇನ್ನೊಂದೆಡೆ ಒಟ್ಟಾರೆ ಫಲವಂತಿಕೆ ದರ ಕುಸಿಯುತ್ತಿದೆ ಎಂದು ವರದಿ ಬಿಡುಗಡೆ ಮಾಡಿ, ನಾಡವರಲ್ಲಿ ಗೊಂದಲ ಉಂಟು ಮಾಡುವುದನ್ನು ಬಿಡಬೇಕಿದೆ. ಬಂಡವಾಳಶಾಹಿ ಧೋರಣೆಗೆ ವಿದಾಯ ಹೇಳ ಬೇಕಿದೆ. ಯುವಶಕ್ತಿಗೆ ಉದ್ಯೋಗಗಳನ್ನು ಸೃಷ್ಟಿಸ ಬೇಕಿದೆ. ವಯೋವೃದ್ಧರು ಉಂಟು ಮಾಡುವ ಸಮಸ್ಯೆಗಳನ್ನು ಬಗೆ ಹರಿಸಲು ಸಕಾರಾತ್ಮಕವಾಗಿ ಯೋಚಿಸಬೇಕಿದೆ.