ತುಮಕೂರು : ಮುಂದಿನ ಜಗ್ಗತ್ತಿನ ವಿನಾಶಕ್ಕೆ ಇಂದು ವಿಶ್ವಾದ್ಯಾದ್ಯಂತ ಹೆಚ್ಚುತ್ತಿರುವ ಜನಸಂಖ್ಯಾ ಸ್ಪೋಟವೆ ಮುಖ್ಯ ಕಾರಣ ಹೊರತು ಭೂ ಮಂಡಲದ ಮತ್ಯಾವ ಜೀವಿಯು ಕಾರಣವಲ್ಲ ಎಂದು ಶ್ರೀದೆವಿ ಮೆಡಿಕಲ್ ಕಾಲೇಜಿನ ಪ್ರೋಫೇಸರ್ ಡಾ. ರಂಗಸ್ವಾಮಿ ತಿಳಿಸಿದರು.
ನಗರದ ಎಸ್‌ವಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯೆ ದಿನಾ ಚರಣೆ ಕಾರ್ಯಕ್ರಮದ ಉದ್ಘಾಟನೆಯನ್ನ ನೆರವೇಸಿ ಮಾತನಾಡಿದ ಅವರು, ಇಂದು ವಿಶ್ವ ಜನ ಸಂಖ್ಯಾ ದಿನ ಜುಲೈ ೧೧ ರಂದು ವಿಶ್ವದಾದ್ಯಂತ ವಿಶ್ವ ಜನಸಂಖ್ಯಾ ದಿನಾ ಚರಣೆಯನ್ನು ಆಚರಿಸಲಾಗುತ್ತದೆ. ಜಗತ್ತಿನ ಜನಸಂಖ್ಯೆ ಬರೋಬ್ಬರಿ ೮೦೦ ಕೋಟಿ ದಾಟಿದ್ದು ಇದರಲ್ಲಿ ಈಗಿನ ಭಾರತದ ಜನಶಂಖ್ಯೆ ೧೪೧ ಕೋಟಿ ಯಾಗಿದೆ. ಶೇಕಡಾ ವಾರು ಲೆಕ್ಕದಲ್ಲಿ ಹೇಳುವುದಾದರೆ ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ ಶೇ.೧೭. ೭ರಷ್ಟು ಜನಸಂಖ್ಯೆಯನ್ನು ಭಾರತ ಹೊಂದಿದ್ದು ಈ ರೀತಿಯಾಗಿ ಭಾರತದಲ್ಲಿ ಜನಸಂಖ್ಯೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚು ತ್ತಿರುವ ಮುಖ್ಯ ಕಾರಣಗಳಲ್ಲಿ ನಮ್ಮ ದೇಶದ ಜನರಲ್ಲಿ ಆವರಿಸಿಕೊಂಡಿರುವ ಅಂಧಕಾರವು ಒಂದಾಗಿದೆ ಎಂದು ತಿಳಿಸಿದರು.
೧೯೮೭ರಲ್ಲಿ ವಿಶ್ವಜನಸಂಖ್ಯೆ ೫೦೦ ಕೋಟಿ ದಾಟಿದಾಗ ಡಾ.ಕೆ.ಸಿ.ಝಕಾರಿಯಾ ಎಂಬುವರು ವಿಶ್ವ ಜನಸಂಖ್ಯಾ ದಿನಾಚರಣೆ ಆಚರಿಸಲು ಸಲಹೆ ನೀಡಿದ್ದರು. ಜನಸಂಖ್ಯೆಯ ದುಷ್ಪರಿಣಾಮ ಕುರಿತು ಅರಿವು ಮೂಡಿಸಲು ಈ ವಿಶ್ವ ಜನಸಂಖ್ಯೆ ದಿನಾಚರಣೆ ಮಾಡಲಾಗುತ್ತಿದ್ದು,ಪ್ರತಿ ವರ್ಷ ವಿಶ್ವಸಂಸ್ಥೆ ಒಂದೊAದು ಧ್ಯೇಯ ವಾಕ್ಯದಡಿಯಲ್ಲಿ ಅರಿವು ಮೂಡಿಸುತ್ತಿದೆ , ಜನಸಂಖ್ಯಾ ಸ್ಫೋಟದಿಂದಾಗುವ ಅಪಾಯಗಳು, ಲಿಂಗ ಅಸಮಾನತೆ, ಶಿಶು ಮರಣ, ಸಣ್ಣ ಕುಟುಂಬಗಳ ಪ್ರಾಮುಖ್ಯತೆ ಕುರಿತು ಜಾಗೃತಿ ಮೂಡಿಸುವುದು ಈ ದಿನದ ದಿನಾಚರಣೆಯ ಉದ್ದೇಶವಾಗಿದೆ, ಜನಸಂಖ್ಯೆ ಹೆಚ್ಚಳದಿಂದ ಇಡೀ ಜಗತ್ತಿನ ಎಲ್ಲ ದೇಶಗಳು ಒಂದಿ ಲ್ಲೊ0ದು ಸಮಸ್ಯೆಯನ್ನು ಎದುರಿಸುತ್ತಿವೆ. ಬಡತನ, ಆರ್ಥಿಕತೆ ಮತ್ತು ಮಹಿಳೆಯ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾ ಮಗಳಾಗುತ್ತಿವೆ. ಈ ಸಮಸ್ಯೆಗಳನ್ನು ಬಗೆಹರಿಸಲು ವಿಶ್ವಜನಸಂಖ್ಯೆ ದಿನಾಚರಣೆ ಎಚ್ಚರಿಕೆ ಗಂಟೆಯಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಜನಸಂಖ್ಯಾ ಸ್ಪೋಟದಿಂದ ಪ್ರಕೃತಿನಾಶ, ವಾಯುನಾಶ, ಪರಿಸರ ಮಾಲಿನ್ಯವಾಗುತ್ತಿದೆ ಇದೇಲ್ಲೆದರ ಪರಿಣಾಮದಿಂದ ಮುಂದೊ0ದು ದಿನ ಇಡೀ ಜಗ್ಗತ್ತೆ ನಾಶವಾಗುತ್ತದೆ ಎಂದು ತಿಳಸಿದ ಅವರು, ಜನ ಸಂಖ್ಯಾ ನಿಯಂತ್ರಣಕ್ಕೆ ಇಂದಿನ ಯುವ ಪೀಳಿಗೆ ಪಣ ತೊಡಬೇಕಾಗಿದೆ ಸರಕಾರ ನೀಡಿರುವ ಸೂಚನೆಗಳನ್ನ ಪಾಲಿಸುತ್ತ ಜನಸಂಖ್ಯೆಯನ್ನ ನಿಯಂತ್ರಿಸಬೇಕಾಗಿದೆ ಎಂದು ತಿಳಿಸಿದರು.
ಎಸ್‌ವಿಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ಹೃದಯ ರೋಗ ತಜ್ಞರಾದ ಡಾ.ಕೆಪಿ ಸುರೇಶ್ ಬಾಬು ಮಾತನಾಡಿ, ಜನಸಂಖ್ಯಾ ಸ್ಪೋಟದಿಂದ ಅಸಂಖ್ಯಾತ ಸಮಸ್ಯೆಗಳು ಉದ್ಭವಿಸಲಿದ್ದು ಇದ್ದಕ್ಕೆ ಸೂಕ್ತ ಪರಿಹಾರ ಎಂದರೆ ಜನಸಂಖ್ಯಾ ನಿಯಂತ್ರಣವಾಗಿದೆ ಆದ ಕಾರಣ ಜನಸಂಖ್ಯಾ ನಿಯಂತ್ರಣ ಪಾಲನೆಯನ್ನು ಪ್ರತಿಯೊಬ್ಬರು ಪಾಲನೆ ಮಾಬೇಕಾಗಿದೆ.
ವಿಶ್ವಸಂಸ್ಥೆ ಪ್ರತಿ ವರ್ಷ ಒಂದು ಘೋಷವಾಕ್ಯದಡಿಯಲ್ಲಿ ಜನಸಂಖ್ಯಾ ದಿನಾಚರಣೆ ಆಚರಿಸಲಾಗುತ್ತದೆ, ೨೦೨೩ ನೆ ವರ್ಷದ ಘೋಷವಾಕ್ಯವಾದ ಸುರಕ್ಷಿತ ಕುಟುಂಬ, ಸುಂದರ ಕುಟುಂಬ, ಹಾಗೂ ಚಿಕ್ಕ ಕುಟುಂಬ ಎಂಬ ಘೋಷಣೆಯನ್ನ ಪಾಲಿಸೋಣ ಜೋತೆಗೆ ಲಿಂಗ ಸಮಾನತೆಯನ್ನು ಅನಾವರಣಗೊಳಿಸುವುದು. ನಮ್ಮ ಪ್ರಪಂಚದ ಅನಂತ ಸಾಧ್ಯತೆಗಳನ್ನು ಮನಬಿಚ್ಚಿ ಮಾತನಾಡುವಂತೆ ಮಾಡಲು ಮಹಿಳೆಯರು ಮತ್ತು ಬಾಲಕಿಯರ ಧ್ವನಿಯನ್ನು ಎತ್ತಿ ಹಿಡಿಯುವುದು ಆಗಿದೆ ಇದನ್ನು ಪಾಲನೆ ಮಾಡೊಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮುದಾಯ ಔಷಧದ ಪ್ರೊಪೆಸರ್ ಹಾಗೂವಿಭಾಗದ ಮುಖ್ಯಸ್ಥರಾದ ಡಾ. ಶಶಿಕಿರಣ್, ಎಸ್‌ವಿಎಸ್ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷರಾದ ಪ್ರೊ.ಕೆ.ಎಚ್. ಪ್ರಮಶಿವಯ್ಯ, ಕಿಡ್ಸ್ ಇಂಟರ್ ನ್ಯಾಷನಲ್ ಶಾಲೆಯ ಪ್ರಾಂಶುಪಾಲರಾದ ಡಾ.ಆರ್ ಸಿ ಪುಟ್ಟಬಿದ್ದಿ, ಪ್ರಾಂಶುಪಾಲರಾದ ಹರಿಕುಮಾರ್, ಎಸ್‌ವಿಎಸ್ ಶಿಕ್ಷಣ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.