Friday, 22nd November 2024

ಮಡೆನೂರು ಬಸವೇಶ್ವರ ಇಂಜಿನೀಯರಿಗ್ ಕಾಲೇಜು ಪುನಾರಂಭ : ಸಂಸ್ಥೆಯ ಅದ್ಯಕ್ಷ ಹಾಲಪ್ಪ ಸ್ಪಷ್ಟನೆ

ತಿಪಟೂರು: ಎರಡು ವರ್ಷಗಳ ಹಿಂದೆ ವಿಧ್ಯಾರ್ಥಿಗಳ ಸಂಖ್ಯೆಯ ಕೊರತೆಯಿಂದ ಪ್ರವೇಶ ಅವಕಾಶ ಸ್ಥಗೀತ ಗೊಂಡಿದ್ದ ನಗರಕ್ಕೆ ಹೊಂದಿಕೊ0ಡಿರುವ ಮಡೇನೂರು ಗೇಟ್ ಬಳಿಯಿರುವ ಶ್ರೀ ಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯ (ಇಂಜಿನೀಯರಿಗ್ ) ಪ್ರವೇಶಾತಿ ಪ್ರಕ್ರೀಯೆಯು ಪುನಾರಂಭಗೊ0ಡಿದೆ ಎಂದು ಶ್ರೀ ಬಸವೇಶ್ವರ ವಿದ್ಯಾ ಸಂಸ್ಥೆಯ ಹೆಚ್.ಎನ್ ಹಾಲಪ್ಪ ತಿಳಿಸಿದರು.

ತಾಲ್ಲೂಕಿನ ಮಡೇನೂರು ಗೇಟ್ ಬಳಿಯಿರುವ ಶ್ರೀ ಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಕಾಲೇಜಿನಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ದೂರದೃಷ್ಟಿ ಯಿಂದ ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲಕ್ಕಾಗಿ ಶುಲ್ಕದಲ್ಲಿಯೂ ಸಹ ವಿನಾಯಿತಿ ನೀಡಿ, ಸರ್ಕಾರದ ಶುಲ್ಕವನ್ನು ಪಡೆದು ಉತ್ತಮ ಗುಣಮಟ್ಟದ ಬೋಧನೆಯೊಂದಿಗೆ ತರಗತಿಗಳನ್ನು ಪುನಾರಂಭ ಮಾಡಲಾ ಗುವುದು, ಕಾಲೇಜಿನ ಪುನಾರಂಭಕ್ಕೆ ಇದ್ದ ಎಲ್ಲಾ ಅಡೆ-ತಡೆಗಳು ಸಂಪೂರ್ಣವಾಗಿ ಮುಗಿದಿದ್ದು, ಇಂಜಿನೀ ಯರಿಗ್ ಕಾಲೇಜಿನ ಪ್ರವೇಶವು ಪುನಾರಂಭವಾಗಿ ನಮ್ಮಲ್ಲಿಯೇ ಉದ್ಯೋಗ  ಅವಕಾಶ ಗಳನ್ನು ನೀಡುವಂತಹ ಕಂಪನಿಗಳ ಜೊತೆ ಚರ್ಚಿಸಲಾಗಿದ್ದು ಕಾಲೇಜಿಗೆ ಬಂದು ವಿದ್ಯಾರ್ಥಿಗಳಿಗೆ ತರಬೇತಿ ನೀಡುವವರು ಎಂದು ತಿಳಿಸಿದರು.

ಪ್ರಾಶುಂಪಾಲರಾದ ಡಾ.ಚಂದ್ರರಾವ್ ಮದೇನಿ ಮಾತನಾಡಿ ಸಿವಿಲ್, ಮೆಕಾನಿಕಲ್, ಎಲೆಕ್ಟಾçನಿಕ್ಸ್ ಕಂಪ್ಯೂಟರ್ ಸೈನ್ಸ್, ಕಮ್ಯುನಿಕೇಷನ್ ಅಂಡ್ ಎಲೆಕ್ಟಾçನಿಕ್ಸ್ , ಸೇರಿದಂತೆ ೫ ವಿಭಾಗಗಳ ಮೂಲಕ ಪ್ರತಿ ವಿಬಾಗಕ್ಕೆ ೬೦ ವಿದ್ಯಾರ್ಥಿಗಳನ್ನು ದಾಖಾಲಾತಿಯನ್ನು ಪಡೆಯಲಾಗಿದ್ದು, ಪ್ರಯೋಗಾಲಯ, ಸುಸಜ್ಜಿತವಾದ ಕಾಲೇಜಿನ ಕಟ್ಟಡ, ಹಾಗೂ ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೇಲ್ ವ್ಯವಸ್ಥೆಯು ಸಹ ಇರುತ್ತದೆ ಎಂದು ತಿಳಿಸಿದರು.

ಪ್ರತಿಕಾಗೋಷ್ಟಿಯಲ್ಲಿ ಉಪನ್ಯಾಸಕ ಡಾ,ಚಂದ್ರಶೇಖರ್, ಮತ್ತಿತ್ತರು ಹಾಜರಿದ್ದರು.