Thursday, 12th December 2024

ಕ್ರೆಡಾಯ್ ಬೆಂಗಳೂರಿನ 2023-25ರ ಸಾಲಿನ ಅಧ್ಯಕ್ಷರಾಗಿ ಅಮರ್ ಮೈಸೂರು ಆಯ್ಕೆ

ಪ್ರಪ್ರಥಮ ಬಾರಿಗೆ ಕ್ರೆಡಾಯ್ ಮಹಿಳಾ ವಿಭಾಗದ ದಕ್ಷಿಣ ವಲಯ ಸಭೆ ಆಯೋಜನೆ

ಬೆಂಗಳೂರು: ಬ್ರಿಗೇಡ್ ಎಂಟರ್‌ಪ್ರೈಸಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅಮರ್ ಮೈಸೂರು ಅವರು 2023-25 ನೇ ಸಾಲಿಗೆ ಕ್ರೆಡಾಯ್(ಸಿಆರ್‌ಇಡಿಎಐ) ಬೆಂಗಳೂರಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಕ್ಕೆ ತನ್ನ ಕೊಡುಗೆ ಯನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಸುಸ್ಥಿರ ಬೆಳವಣಿಗೆ ಪ್ರೋತ್ಸಾಹಿಸುವ ಗುರಿಯನ್ನು ಕ್ರೆಡಾಯ್ ಬೆಂಗಳೂರು ಹೊಂದಿರುವು ದರಿoದ ಈ ನಾಯಕತ್ವ ಬದಲಾವಣೆ ಬಂದಿದೆ. ಅಮರ್ ಅವರು ವಿವಿಧ ಪಾಲುದಾರರ ಆಕಾಂಕ್ಷೆಗಳನ್ನು ಪೂರೈಸಲು ಶ್ರಮಿಸು ವರು.

“ಕ್ರೆಡಾಯ್ ಬೆಂಗಳೂರು ಅಧ್ಯಕ್ಷ ಸ್ಥಾನ ಸ್ವೀಕರಿಸುವುದು ಇದು ನಿಜವಾಗಿಯೂ ಗೌರವ ಮತ್ತು ವಿಶೇಷ ಹೆಮ್ಮೆಯ ವಿಷಯ ವಾಗಿದೆ. ಒಂದುಕಡೆ ನಾನು ಅಧ್ಯಕ್ಷರಾಗಿ ನನ್ನ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವುದು ಬಹಳ ರೋಚಕವಾಗಿದೆ ಮತ್ತು ಇನ್ನೊಂದೆಡೆ, ಹಿಂದಿನ ಅಧ್ಯಕ್ಷರ ದಶಕಗಳ ಶ್ರೇಷ್ಠ ನಾಯಕತ್ವಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುವುದು ಬಹಳ ದೊಡ್ಡ ಜವಾ ಬ್ದಾರಿಯಾಗಿದೆ. ನನ್ನದೇ ಆದ ಪ್ರಭಾವ ಸೃಷ್ಟಿಸುವ ಭರವಸೆ ನನಗಿದೆ. ನಿರ್ಗಮಿಸುತ್ತಿರುವ ಅಧ್ಯಕ್ಷ ಭಾಸ್ಕರ್ ಮತ್ತು ಅವರ ತಂಡ ಮಾಡಿದ ಅದ್ಭುತ ಕಾರ್ಯಕ್ಕಾಗಿ ನಾನು ನನ್ನ ಮೆಚ್ಚುಗೆ ವ್ಯಕ್ತಪಡಿಸಲು ಬಯಸುತ್ತೇನೆ” ಎಂದು ಅಮರ್ ಮೈಸೂರು ಹೇಳಿದರು.

ಬ್ರಿಗೇಡ್ ಗ್ರೂಪ್‌ನ ಅಧ್ಯಕ್ಷರಾದ ಶ್ರೀ ಎಂ ಆರ್ ಜೈಶಂಕರ್ ಮತ್ತು ಪ್ರೆಸ್ಟೀಜ್ ಗ್ರೂಪ್‌ನ ಶ್ರೀ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಇರ್ಫಾನ್ ರಜಾಕ್ ಮತ್ತು ಚಾರ್ಟರ್ಡ್ ಹೌಸಿಂಗ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಬಾಲಕೃಷ್ಣ ಹೆಗ್ಡೆ ಮತ್ತು ಜೋನಾಶಾ ಎಸ್ಟೇಟ್ಸ್ ಮತ್ತು ಪ್ರಾಜೆಕ್ಟ್ನ ಶ್ರೀ ನಾಗರಾಜ್ ರೆಡ್ಡಿ ಮುಂತಾದ ಉದ್ಯಮದ ದಿಗ್ಗಜರ ಉಪಸ್ಥಿತಿಯಲ್ಲಿ ಅಮರ್ ಮೈಸೂರು ಅವರು ಕ್ರೆಡಾಯ್ ಅಧ್ಯಕ್ಷರಾಗಿ ತಮ್ಮ ಹೊಸ ಪಾತ್ರವನ್ನು ಮನಃಪೂರ್ವಕವಾಗಿ ವಿನಮ್ರತೆಯೊಂದಿಗೆ ಸ್ವೀಕರಿಸಿ ದರು.

ಹೊಸ ಅಧ್ಯಕ್ಷರ ಆಶ್ರಯದಲ್ಲಿ ನಡೆದ ಮೊದಲ ಕಾರ್ಯಕ್ರಮವೆಂದರೆ, ವಾರಾಂತ್ಯದಲ್ಲಿ ನಡೆದ ಮೊದಲ ಕ್ರೆಡಾಯ್ ಮಹಿಳಾ ವಿಭಾಗದ (ಸಿಡಬ್ಲ್ಯೂಡಬ್ಲ್ಯು) ದಕ್ಷಿಣ ವಲಯ ಸಭೆಯಾಗಿತ್ತು. ಸಿಡಬ್ಲ್ಯೂಡಬ್ಲ್ಯೂ ಸಂಯೋಜಕರು ಮತ್ತು ಕಾನ್ಕಾರ್ಡ್ ನಿರ್ದೇಶಕರಾದ ಗ್ರೀಷ್ಮಾ ರೆಡ್ಡಿ ಅವರೊಂದಿಗೆ ಸಿಡಬ್ಲ್ಯೂಡಬ್ಲ್ಯೂ ದಕ್ಷಿಣ ವಲಯ ಕಾರ್ಯದರ್ಶಿ ಮತ್ತು ಸ್ಟರ್ಲಿಂಗ್ ಡೆವಲ ಪರ್ಸ್ ಮಾರುಕಟ್ಟೆ ನಿರ್ದೇಶಕರಾದ ಅಂಜನಾ ಶಾಸ್ತ್ರಿ ಅವರು ಕಾರ್ಯಕ್ರಮ ಆಯೋಜಿಸಿದರಲ್ಲದೇ ಸಂಯೋಜನೆ ಕೈಗೊಂಡಿ ದ್ದರು.

ಸಹಾನುಭೂತಿ ಮತ್ತು ವಿವರಗಳಿಗೆ ನಿಖರವಾದ ಗಮನದ ಅಗತ್ಯ ಇರುವ ಯೋಜನೆಗಳನ್ನು ಕೈಗೊಳ್ಳುವಲ್ಲಿ ಮಹಿಳೆಯರು ನಂಬಲಾಗದಷ್ಟು ಸಾಮರ್ಥ್ಯ ಹೊಂದಿದ್ದಾರೆ ಎಂಬ ಅಂಶವನ್ನು ಸಭೆ ಒತ್ತಿಹೇಳಿತ್ತು. ಸಿಡಬ್ಲ್ಯೂಡಬ್ಲ್ಯೂ ದಕ್ಷಿಣ ಭಾರತ ಸಭೆಯ ಭಾಗವಾಗಿ, ಉದ್ಯಮದ ಪ್ರಮುಖರನ್ನು ಒಳಗೊಂಡ ಚಿಂತನ-ಪ್ರಚೋದಕ ಚರ್ಚೆ ನಡೆಸಲಾಯಿತು. ಬ್ರಿಗೇಡ್ ಎಂಟರ್‌ ಪ್ರೈಸಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಪವಿತ್ರಾ ಶಂಕರ್ ಅವರು ರಿಯಲ್ ಎಸ್ಟೇಟ್ ಉದ್ಯಮದ ಭವಿಷ್ಯದ ಬಗ್ಗೆ ಮತ್ತು ನಾಯಕತ್ವದ ಸ್ಥಾನಗಳಲ್ಲಿ ಲಿಂಗ ವೈವಿಧ್ಯತೆಯ ಪ್ರಾಮುಖ್ಯತೆ ಕುರಿತು ತಮ್ಮ ಅಮೂಲ್ಯ ಒಳನೋಟಗಳನ್ನು ಹಂಚಿ ಕೊoಡರು.

ಉದ್ಯಮದಲ್ಲಿ ಮಹಿಳೆಯರನ್ನು ಸಬಲೀಕರಿಸಲು ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕೌಶಲ್ಯದ ಪ್ರಾಮುಖ್ಯತೆಯನ್ನು ಒತ್ತಿಹೇಳುವ ಸಂದರ್ಭದಲ್ಲಿ ವಿಮರ್ಶಾತ್ಮಕ ಪಾತ್ರಗಳಲ್ಲಿ ಅವರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲು, ಕೃತಕ ಬುದ್ಧಿಮತ್ತೆಯ ಪ್ರಗತಿ ಕಲಿಯಲು ಮತ್ತು ಅನ್ವೇಶಿಸುವುದಕ್ಕಾಗಿ ಸಿಡಬ್ಲ್ಯೂಡಬ್ಲ್ಯೂ ಸಭೆಯನ್ನು ವಿನ್ಯಾಸಗೊಳಿಸಲಾಗಿದೆ. ರಿಯಲ್ ಎಸ್ಟೇಟ್ ಸಮುದಾಯದೊಳಗೆ ಸಹಯೋಗ, ಜ್ಞಾನ ವಿನಿಮಯ ಮತ್ತು ನವೀನತೆ ಬೆಳೆಸಲು ಕ್ರೆಡಾಯ್‌ನ ಬದ್ಧತೆ ಒತ್ತಿಹೇಳುವುದು ಸಭೆಯ ಉದ್ದೇಶವಾಗಿತ್ತು