Sunday, 15th December 2024

ಬ್ಯಾಂಕ್ ಉದ್ಯೋಗಿಗಳ ವಾರಕ್ಕೆ ಐದು ದಿನ ಕೆಲಸ: ಜು.28ರಂದು ತೀರ್ಮಾನ

ವದೆಹಲಿ: ವಾರಕ್ಕೆ ಐದು ದಿನ ಕೆಲಸ, ಎರಡು ದಿನ ರಜೆ, ವೇತನ ಹೆಚ್ಚಳ ಮತ್ತು ನಿವೃತ್ತಿ ವೇತನದಾರರ ಗ್ರೂಪ್ ಮೆಡಿಕಲ್ ಇನ್ಸೂರೆನ್ಸ್ ಪಾಲಿಸಿ ಸೇರಿದಂತೆ ಬ್ಯಾಂಕ್ ಉದ್ಯೋಗಿಗಳ ಬಹುದಿನಗಳ ಬೇಡಿಕೆ ಕುರಿತಂತೆ ಭಾರತೀಯ ಬ್ಯಾಂಕಿಂಗ್ ಸಂಸ್ಥೆ(IBA) ಜು.28ರಂದು ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ.

ಬ್ಯಾಂಕ್ ನೌಕರರ ಸಂಘಟನೆ ಮತ್ತು ಭಾರತೀಯ ಬ್ಯಾಂಕಿಂಗ್ ಸಂಸ್ಥೆ ಮೊದಲ ಸಭೆ ಜು.28ರಂದು ನಡೆಯಲಿದೆ. ಉದ್ಯೋಗಿ ಗಳ ಬೇಡಿಕೆಗೆ ಐಬಿಎ ಅನುಮೋದನೆ ನೀಡಿದಲ್ಲಿ ಬ್ಯಾಂಕ್ ಉದ್ಯೋಗಿಗಳಿಗೆ ನಾನಾ ಸೌಲಭ್ಯ ಸಿಗಲಿವೆ.

ಹಿಂದೆ ನಡೆದ ಚರ್ಚೆಯಲ್ಲಿ ಬ್ಯಾಂಕ್ ನೌಕರರ ಐದು ದಿನಗಳ ಕೆಲಸದ ಬೇಡಿಕೆ ಬಗ್ಗೆ ಚರ್ಚಿಸಲಾಗಿದ್ದು, ಐಬಿಎ ಈ ಬೇಡಿಕೆ ಯನ್ನು ಈಡೇರಿಸಲು ಉಚ್ಚುಕವಾಗಿದೆ ಎಂದು ಯುನೈಟೆಡ್ ಫಾರ್ಮ್ ಆಫ್ ಬ್ಯಾಂಕ್ ಯೂನಿಯನ್ ಹೇಳಿದೆ.

ನಿವೃತ್ತಿ ಹೊಂದಿದ ಬ್ಯಾಂಕ್ ನೌಕರರಿಗೆ 2 ಲಕ್ಷ ರೂ.ಗಳ ಪ್ರತ್ಯೇಕ ಏಕರೂಪ ವಿಮೆ ಜಾರಿ ಗೊಳಿಸಲು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಒಪ್ಪಿಕೊಂಡಿದ್ದು, ವೇತನ ಹೆಚ್ಚಳದ ಬೇಡಿಕೆ ಕೂಡ ಸೇರಿದೆ. ಐದು ದಿನಗಳ ಕೆಲಸದ ಪದ್ಧತಿ ಜಾರಿಗೊಳಿ ಸಬೇಕೆಂಬ ನೌಕರರ ಬೇಡಿಕೆಗೆ ಅಭ್ಯಂತರ ವಿಲ್ಲವೆಂದು ಕೇಂದ್ರ ಹಣಕಾಸು ಮಂತ್ರಾಲಯ ಈ ಹಿಂದೆಗೆ ಹೇಳಿದೆ.

ಎಲ್‌ಐಸಿಯಲ್ಲಿ ವಾರದಲ್ಲಿ ಐದು ದಿನಗಳ ಕೆಲಸದ ನಿಯಮ ಜಾರಿಗೊಳಿಸಿದೆ. ಇದೇ ಮಾದರಿಯಲ್ಲಿ ಬ್ಯಾಂಕ್ ಉದ್ಯೋಗಿಗಳಿಗೂ ವಾರದಲ್ಲಿ ಐದು ದಿನದ ಕೆಲಸದ ಪದ್ಧತಿ ಜಾರಿಗೊಳಿಸಬೇಕೆಂಬ ಬೇಡಿಕೆ ಇದೆ.