ನವದೆಹಲಿ: ಭಾರತದ ಅಧ್ಯಕ್ಷತೆಯ ಜಿ20ಶೃಂಗಸಭೆ ಸೆಪ್ಟಂಬರ್ 9 ಮತ್ತು 10 ರಂದು ರಾಷ್ಟ್ರ ರಾಜಧಾನಿ ನಗರಿಯಲ್ಲಿ ನಡೆಯ ಲಿದೆ.
ದೆಹಲಿಯ ಪ್ರಗತಿ ಮೈದಾನ್ ಸಂಕೀರ್ಣವನ್ನು (Pragathi Maidan Complex) ಮರು ಅಭಿ ವೃದ್ಧಿಪಡಿಸಲಾಗಿದ್ದು ವಿಶ್ವದರ್ಜೆಯ ಸ್ಥಳವಾಗಿ ಅದು ಮಾರ್ಪಟ್ಟಿದೆ. ಐಟಿಪಿಒ ಕಾಂಪ್ಲೆಕ್ಸ್ ಆಗಿದ್ದ ಈ ಸ್ಥಳ ಈಗ ಐಇಸಿಸಿ ಸೆಂಟರ್ ಆಗಿ ರೂಪುಗೊಂಡಿದೆ. ಇಂಟರ್ನ್ಯಾ ಷನ್ ಎಕ್ಸಿಬಿ ಶನ್ ಕಮ್ ಕನ್ವೆನ್ಷನ್ ಸೆಂಟರ್ (IECC) ಅನ್ನು ಪ್ರಧಾನಿ ನರೇಂದ್ರ ಮೋದಿ ಜು.26ರಂದು ಉದ್ಘಾಟನೆ ಮಾಡಲಿ ದ್ದಾರೆ.
ಆ ದಿನದಂದು ಪೂಜೆಯ ಮೂಲಕ ಸಮಾರಂಭ ಆರಂಭವಾಗಲಿದ್ದು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನೂರಾರು ಮಂದಿಗೆ ಆ ಸಮಾರಂಭಕ್ಕೆ ಆಹ್ವಾನ ಕೊಡ ಲಾಗಿದೆ.
ಜಿ20 ಗುಂಪಿನ ಸಭೆ ಪ್ರತೀ ವರ್ಷವೂ ನಡೆಯುತ್ತದೆ. ಪ್ರತೀ ಬಾರಿಯೂ ಒಂದು ದೇಶಕ್ಕೆ ಅಧ್ಯಕ್ಷ ಸ್ಥಾನ ಕೊಡಲಾಗುತ್ತದೆ. ಭಾರತಕ್ಕೆ ಮೊದಲ ಬಾರಿಗೆ ಜಿ20 ಅಧ್ಯಕ್ಷ ಸ್ಥಾನ ಸಿಕ್ಕಿದೆ. 2022ರ ಡಿಸೆಂಬರ್ 1ರಿಂದ 2023 ನವೆಂಬರ್ 30ರವರೆಗೂ ಭಾರತ ಜಿ20 ಗುಂಪಿನ ಅಧ್ಯಕ್ಷನಾಗಿದೆ. ಸೆಪ್ಟಂಬರ್ 9 ಮತ್ತು 10 ರಂದು ಬಹಳ ಮುಖ್ಯವಾದ ಜಿ20 ಶೃಂಗಸಭೆ ನಡೆಯುತ್ತಿದೆ. ಇದೇ ಐಇಸಿಸಿಯಲ್ಲಿ ಇದನ್ನು ಆಯೋಜಿಸಲಾಗಿದೆ.
ಜಿ20 ಎಂಬುದು ವಿಶ್ವದ ಅಗ್ರಗಣ್ಯ 20 ಆರ್ಥಿಕತೆಯ ದೇಶಗಳ ಗುಂಪಾಗಿದೆ. ಅಮೆರಿಕ, ರಷ್ಯಾ, ಚೀನಾ, ಜಪಾನ್, ಫ್ರಾನ್ಸ್, ಭಾರತ, ಇಟಲಿ, ಕೊರಿಯಾ, ಸೌದಿ ಅರೇಬಿಯಾ, ಜರ್ಮನಿ, ಬ್ರಿಟನ್, ಯೂರೋಪಿಯನ್ ಯೂನಿಯನ್ ಇತ್ಯಾದಿ 20 ಸದಸ್ಯ ದೇಶಗಳಿವೆ.