ಭಾರತದಲ್ಲಿ ಮಳೆ, ಪ್ರವಾಹ ಮತ್ತಿತರ ಕಾರಣದಿಂದ ಕಳೆದ 12 ತಿಂಗಳಲ್ಲಿ ಆಹಾರವಸ್ತುಗಳ ಶೇ. 10ಕ್ಕಿಂತಲೂ ಹೆಚ್ಚಾಗಿದೆ. ಜನಸಾಮಾನ್ಯರಿಗೆ ಆಹಾರವಸ್ತುಗಳಲ್ಲಿ ಲಭ್ಯತೆ ಕಡಿಮೆ ಆಗಬಾರದೆಂಬ ದೃಷ್ಟಿಯಿಂದ ಸರ್ಕಾರ ಅಕ್ಕಿ ರಫ್ತು ನಿಷೇಧಿಸಿದೆ.
ಜಾಗತಿಕವಾಗಿ ಅಕ್ಕಿ ರಫ್ತಿನಲ್ಲಿ ಭಾರತದ ಪಾಲು ಶೇ. 40ರಷ್ಟಿದೆ. ಭಾರತದ ಅಕ್ಕಿಯ ಮೇಲೆ ಅತಿಹೆಚ್ಚು ಅವಲಂಬಿತ ವಾಗಿರುವುದು ನೆರೆಯ ದೇಶಗಳಾದ ಬಾಂಗ್ಲಾದೇಶ ಮತ್ತು ನೇಪಾಳ. ಹಾಗೆಯೇ, ಕ್ಯಾಮರೂನ್, ಡಿಜಿಬೋಟಿ, ಬೆನಿನ್, ಆಂಗೊಲಾ, ಗಿನಿಯಾ, ಐವರಿ ಕೋಸ್ಟ್, ಕೀನ್ಯಾ ಮೊದಲಾದ ದೇಶಗಳೂ ಕೂಡ ಭಾರತದಿಂದ ಬಾಸ್ಮತಿಯೇತರ ಅಕ್ಕಿ ಯನ್ನು ಹೆಚ್ಚು ಖರೀದಿಸುತ್ತವೆ.
ಉತ್ತರ ಅಮೆರಿಕ ಖಂಡದ ರಾಷ್ಟ್ರಗಳಾದ ಕೆನಡಾ ಮತ್ತು ಅಮೆರಿಕಾದಲ್ಲಿ ಅಕ್ಕಿಗೆ ಬಹಳ ಬೇಡಿಕೆ ಇದೆ. 2022-23ರ ವರ್ಷದಲ್ಲಿ ಉತ್ತರ ಅಮೆರಿಕನ್ ದೇಶಗಳು ಭಾರತದಿಂದ 64,330 ಟನ್ಗಳಷ್ಟು ಬಾಸ್ಮತಿಯೇತರ ಅಕ್ಕಿ ಆಮದು ಮಾಡಿಕೊಂಡಿದ್ದವು.