ನವದೆಹಲಿ: ಲಾಕ್ಡೌನ್ ಸಡಿಲಿಕೆ ಅಂದರೆ ಅನ್ಲಾಕ್ 4.0 ಇದೇ ಸೆಪ್ಟೆಂಬರ್ 30ರಂದು ಮುಕ್ತಾಯಗೊಳ್ಳಲಿದ್ದು, ಅಕ್ಟೋಬರ್ 1ರಿಂದ ಅನ್ಲಾಕ್ 5.0 ಜಾರಿಯಾಗಲಿದೆ.
ಕೇಂದ್ರ ಸರ್ಕಾರವು ಅನ್ಲಾಕ್ 5.0 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಬೇಕಿದೆ. ಅಂದರೆ ಕೊರೋನಾ ವೈರಸ್ ಬಂದಾಗಿನಿಂದ ಮುಚ್ಚಿರುವ ಶಿಕ್ಷಣ ಸಂಸ್ಥೆಗಳು, ಸಿನಿಮಾ ಥಿಯೇಟರ್ಗಳು ಈ ಅನ್ಲಾಕ್ 5.0 ಮೂಲಕ ತೆರೆಯುವ ನಿರೀಕ್ಷೆ ಯಲ್ಲಿ ಜನರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೀವ್ರ ಕೊರೋನಾ ಬಾಧಿತ 7 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ ದ್ದರು. ಈ ಸಭೆಯಲ್ಲಿ ಪ್ರಧಾನಿ ಮೋದಿ, ಅತೀ ಸೂಕ್ಷ್ಮ ಕಂಟೈನ್ಮೆಂಟ್ ಜೋನ್ ಕಲ್ಪನೆ ಕಾರ್ಯಗತಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಯಾ ರಾಜ್ಯದ ಸಿಎಂಗಳಿಗೆ ಸೂಚನೆ ನೀಡಿದ್ದರು. ದೆಹಲಿಯನ್ನೂ ಒಳಗೊಂಡಂತೆ ಈ 7 ರಾಜ್ಯಗಳ ಮುಖ್ಯಮಂತ್ರಿಗಳಿಗೆ ವಾರದಲ್ಲಿ ಒಂದು ಅಥವಾ ಎರಡು ದಿನ ಲಾಕ್ಡೌನ್ ಅಥವಾ ಕರ್ಫ್ಯೂ ವಿಧಿಸುವುದನ್ನು ತಡೆಯುವಂತೆ ಮೋದಿ ಸಲಹೆ ನೀಡಿದ್ದರು.
ಸಾರ್ವಜನಿಕರು ಹೆಚ್ಚಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಕೇಂದ್ರವು ಸಾಲು-ಸಾಲು ಸಡಿಲಿಕೆಗಳನ್ನು ಘೋಷಿಸಲಿದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಅನ್ಲಾಕ್ 4.0 ಮಾರ್ಗಸೂಚಿ ಹೊರಡಿಸು ವಾಗ, ಕೇಂದ್ರದ ಅನುಮತಿ ಇಲ್ಲದೇ ರಾಜ್ಯ ಸರ್ಕಾರಗಳು ಸ್ವಇಚ್ಛೆಯಿಂದ ಲಾಕ್ಡೌನ್ ವಿಧಿಸಲು ಸಾಧ್ಯವಿಲ್ಲ ಎಂದು ಗೃಹ ವ್ಯವಹಾರಗಳ ಸಚಿವಾಲಯ ಹೇಳಿತ್ತು. ಆರ್ಥಿಕ ಚಟುವಟಿಕೆಗಳು:
ರೆಸ್ಟೋರೆಂಟ್ಗಳು, ಮಾಲ್ಗಳು, ಸಲೂನ್ ಹಾಗೂ ಜಿಮ್ಗಳನ್ನು ತೆರೆಯಲು ಕೇಂದ್ರ ಗೃಹ ಇಲಾಖೆ ಅನುಮತಿ ನೀಡಿದೆ. ಅದೇ ರೀತಿ ಅಕ್ಟೋಬರ್ನಿಂದ ಇನ್ನೂ ಹೆಚ್ಚಿನ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಬಹುದೆಂದು ನಿರೀಕ್ಷಿಸಲಾಗಿದೆ.
ಇನ್ನು, ಅಕ್ಟೋಬರ್ 1ರಿಂದ ಸಿನಿಮಾ ಥಿಯೇಟರ್ಗಳನ್ನು ತೆರೆಯಲು ಕೇಂದ್ರವು ಅವಕಾಶ ನೀಡುತ್ತದೆ ಎಂಬ ಊಹಾಪೋಹ ಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ಕೇಂದ್ರವು ಇನ್ನೂ ಸಹ ಮಾರ್ಗಸೂಚಿ ಬಿಡುಗಡೆ ಮಾಡಿಲ್ಲ. ಪಶ್ಚಿಮ ಬಂಗಾಳ ರಾಜ್ಯವು ಅಕ್ಟೋಬರ್ 1ರಿಂದ ಸಿನಿಮಾ ಥಿಯೇಟರ್ಗಳನ್ನು ತೆರೆಯುವುದಾಗಿ ಘೋಷಿಸಿದೆ. ಶೇ.50ರಷ್ಟು ಅಥವಾ ಅದಕ್ಕಿಂತೂ ಕಡಿಮೆ ಜನರಿಗೆ ಥಿಯೇಟರ್ನಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಲಾಗಿದೆ.
ಕೊರೋನಾ ಸಾಂಕ್ರಾಮಿಕ ರೋಗದಿಂದ ಅತೀ ಹೆಚ್ಚು ಒಡೆತ ತಿಂದ ಕ್ಷೇತ್ರ ಪ್ರವಾಸೋದ್ಯಮ. ಸದ್ಯ ಚೇತರಿಕೆಯ ಹಾದಿಯಲ್ಲಿದೆ. ಅಕ್ಟೋಬರ್ನಿಂದ ಪ್ರವಾಸಿಗರಿಗೆ ಪ್ರವಾಸಿ ತಾಣಗಳು ತೆರೆಯಬಹುದು ಎಂಬ ನಿರೀಕ್ಷೆ ಇದೆ.