ಹೆದ್ದಾರಿ ಮತ್ತು ಹೈ-ಸ್ಪೀಡ್ ರೈಲು ಸೇತುವೆ ನಿರ್ಮಾಣ ಯೋಜನೆಗಳಲ್ಲಿ ಪ್ರಿಕಾಸ್ಟ್ ಬಾಕ್ಸ್ ಗಿರ್ಡರ್‍ಗಳನ್ನು ಸ್ಥಾಪಿಸಲು ಇದನ್ನು ಬಳಸಲಾಗುತ್ತದೆ. ಶಹಪುರ ತಹಸಿಲ್‍ನ ಸರ್ಲಾಂಬೆ ಗ್ರಾಮದ ಬಳಿ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಏಕನಾಥ ಶಿಂಧೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರ ಘೋಷಿಸಿದ್ದಾರೆ.
ಸಮೃದ್ಧಿ ಮಹಾಮಾರ್ಗ್ ಅನ್ನು ಹಿಂದೂ ಹೃದಯಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಮಹಾರಾಷ್ಟ್ರ ಸಮೃದ್ಧಿ ಮಹಾಮಾರ್ಗ್ ಎಂದು ಹೆಸರಿಸಲಾಗಿದ್ದು, ಮುಂಬೈ ಮತ್ತು ನಾಗ್ಪುರವನ್ನು ಸಂಪರ್ಕಿಸುವ 701ಕಿಮೀ ಉದ್ದದ ಎಕ್ಸ್‍ಪ್ರೆಸ್‍ವೇ ಆಗಿದೆ.
ನಿರ್ಮಾಣದ ಕಾಮಗಾರಿಯನ್ನು ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ನಡೆಸುತ್ತಿದೆ. ಮೊದಲ ಹಂತ, ನಾಗ್ಪುರವನ್ನು ದೇವಾಲಯದ ಪಟ್ಟಣವಾದ ಶಿರಡಿಗೆ ಸಂಪರ್ಕಿಸುತ್ತದೆ, ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 2022 ರಲ್ಲಿ ಉದ್ಘಾಟಿಸಿದರು.