ಮುಂಬೈ: ಇಂಡಿಯಾ ಕೌಚರ್ ವೀಕ್ 2023 ಫ್ಯಾಷನ್ ಈವೆಂಟ್ನಲ್ಲಿ ಬಾಲಿವುಡ್ ನಟರಾದ ದಿಶಾ ಪಟಾನಿ, ಸಾರಾ ಅಲಿ ಖಾನ್ ಮತ್ತು ಆದಿತ್ಯ ರಾಯ್ ಕಪೂರ್ ಭಾಗವಹಿಸಿ ಗಮನ ಸೆಳೆದರು.
ಇಂಡಿಯಾ ಕೌಚರ್ ವೀಕ್ 2023 ಫ್ಯಾಷನ್ ಈವೆಂಟ್ ನವದೆಹಲಿಯಲ್ಲಿ ನಡೆಯುತ್ತಿದೆ. ಫ್ಯಾಷನ್ ಡಿಸೈನ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಹ್ಯುಂಡೈ ಮೋಟಾರ್ ಇಂಡಿಯಾ ಜಂಟಿಯಾಗಿ ಆಯೋಜಿಸಿರುವ ಈ ಮೆಗಾ ಈವೆಂಟ್ ಆಗಸ್ಟ್ 2ರವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಬಾಲಿವುಡ್ ನಟರಾದ ದಿಶಾ ಪಟಾನಿ, ಸಾರಾ ಅಲಿ ಖಾನ್ ಮತ್ತು ಆದಿತ್ಯ ರಾಯ್ ಕಪೂರ್ ಭಾಗವಹಿಸಿ ಗಮನ ಸೆಳೆದರು. ಟ್ರೆಡಿಷನಲ್ ಮತ್ತು ಮಾರ್ಡನ್ ಡ್ರೆಸ್ನೊಂದಿಗೆ ನೋಡುಗರನ್ನು ಆಕರ್ಷಿಸಿದರು.
ಮೂವರು ಫ್ಯಾಷನ್ ಡಿಸೈನರ್ಗಳಾದ ಡಾಲಿ ಜೆ, ಶಾಂತನು ಮತ್ತು ನಿಖಿಲ್ ಅವರಿಗಾಗಿ ರ್ಯಾಂಪ್ ವಾಕ್ ಮಾಡಿದರು. ಫಿಟ್ನೆಸ್ ಐಕಾನ್ ದಿಶಾ ಪಟಾನಿ ಸಿಲ್ವರ್ ಬಣ್ಣದ ಸ್ಟೈಲಿಶ್ ಡ್ರೆಸ್ನಲ್ಲಿ ಅಂದವಾಗಿ ಕಂಡರು. ಸಾರಾ ಅಲಿ ಖಾನ್ ಮತ್ತು ಆದಿತ್ಯ ರಾಯ್ ಕಪೂರ್ ಈವೆಂಟ್ಗಾಗಿ ಸಾಂಪ್ರದಾಯಿಕ ಉಡುಪು ಧರಿಸಿದ್ದರು. ದಿಶಾ ಪಟಾನಿ ವೇದಿಕೆಯಲ್ಲಿ ನಡೆದು ಬರುತ್ತಿದ್ದಂತೆ, ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಿತು. ಸಾರಾ ಮತ್ತು ಆದಿತ್ಯ ಜೋಡಿ ಪ್ರೇಕ್ಷಕರನ್ನು ಸೆಳೆಯಿತು.
ಮಲಾಂಗ್ ತಾರೆ ದಿಶಾ ಪಟಾನಿ ಮಿನುಗುವ ಬೆಳ್ಳಿಯ ದಿರಿಸಿನಲ್ಲಿ ರ್ಯಾಂಪ್ ವಾಕ್ ಮಾಡಿದರು. ಕನಿಷ್ಠ ಮೇಕಪ್ ಮತ್ತು ಬೆಳ್ಳಿಯ ಕಿವಿಯೋಲೆಯೊಂದಿಗೆ ತಮ್ಮ ನೋಟವನ್ನು ಪೂರ್ಣಗೊಳಿಸಿದರು. ಡಾಲಿ ಜೆ ಅವರ ಕಾರಣದಿಂದಾಗಿ ನಟಿ ದೇವತೆಯಂತೆ ಕಂಗೊಳಿಸಿದರು. ಸುಂದರವಾದ ಈವೆಂಟ್ ಅಂದವನ್ನು ದಿಶಾ ಮತ್ತಷ್ಟು ಹೆಚ್ಚಿಸಿದರು.
ಸಾರಾ ಅಲಿ ಖಾನ್ ಕ್ರೀಮ್ – ಹ್ಯೂಡ್ ಲೆಹೆಂಗಾವನ್ನು ಆರಿಸಿಕೊಂಡರು. ಅದ್ಭುತವಾದ ಮಿನುಗುವ ಬಸ್ಟಿಯರ್ ಕುಪ್ಪಸದೊಂದಿಗೆ ಕಾಣಿಸಿಕೊಂಡರು. ಅದಕ್ಕೆ ತಕ್ಕಂತೆ ಮೇಕಪ್, ಆಭರಣಗಳನ್ನು ಧರಿಸಿ ತಮ್ಮ ನೋಟ ಪೂರ್ಣಗೊಳಿಸಿದರು. ಆದಿತ್ಯ ರಾಯ್ ಕಪೂರ್ ಬಿಳಿ ಸೆಲ್ವಾರ್ ಧರಿಸಿದ್ದರು. ಶಾಂತನು ಮತ್ತು ನಿಖಿಲ್ ಅವರನ್ನು ಪ್ರತಿನಿಧಿಸಿ ಈ ಸ್ಟಾರ್ ನಟರು ರ್ಯಾಂಪ್ ವಾಕ್ ಮಾಡಿದರು.