ಬೀಜಿಂಗ್: ಭಾರೀ ಮಳೆಗೆ ಚೀನಾದ ರಾಜಧಾನಿ ಅಕ್ಷರಶಃ ತತ್ತರಿಸಿದೆ. ಕಳೆದ 40 ತಾಸುಗಳಲ್ಲಿ ಸುರಿದಿದ್ದು, ಮುಸಲಧಾರೆಗೆ ಜನತೆ ಹೈರಾಣಾಗಿದ್ದಾರೆ.
ಮಳೆಯ ಹಿನ್ನೆಲೆಯಲ್ಲಿ ನಡೆದ ಅವಘಡಗಳಲ್ಲಿ 11 ಜನರು ಸಾವನ್ನಪ್ಪಿದ್ದು, 27 ಮಂದಿ ನಾಪತ್ತೆಯಾಗಿದ್ದಾರೆ. ಎಲ್ಲೆಡೆ ಭಾರೀ ಪ್ರವಾಹ ಆವರಿಸಿಕೊಂಡಿದ್ದು, ಸಂತ್ರಸ್ತರಿಗೆ ಆಹಾರ ಸಾಮಗ್ರಿ ವಿತರಿಸಲು ಮಿಲಿಟರಿ ಹೆಲಿಕಾ ಪ್ಟರ್‌ಗಳ ನೆರವು ಪಡೆಯಲಾಗಿದೆ.
ಸೈನಿಕರು ಹಾಗೂ ನಾಲ್ಕು ಹೆಲಿಕಾಪ್ಟರ್‌ಗಳ ನೆರವಿನಲ್ಲಿ ಮಂಗಳವಾರ ಮುಂಜಾನೆ ಬೀಜಿಂಗ್‌ನ ಮೆಂಟೌಗೌ ಜಿಲ್ಲೆಯ ರೈಲು ನಿಲ್ದಾಣದಲ್ಲಿ ಮತ್ತು ಸುತ್ತಮುತ್ತ ಪ್ರವಾಹದಲ್ಲಿ ಸಿಲುಕಿರುವ ಜನರಿಗೆ ಆಹಾರ ಪ್ಯಾಕೆಟ್‌ಗಳನ್ನು ತಲುಪಿಸಿತು. ಫಂಗ್ಶಾನ್ ಮತ್ತು ಮೆಂಟೌಗೌ ಸೇರಿದಂತೆ ಬೀಜಿಂಗ್‌ನ ಪ್ರದೇಶಗಳು ಪ್ರವಾಹದ ನೀರಿನಿಂದ ತೀವ್ರ ಹಾನಿಯನ್ನು ಅನುಭವಿಸಿವೆ.
ಮೂರು ರೈಲುಗಳು ಪ್ರವಾಹದಲ್ಲಿ ಸಿಲುಕಿಕೊಂಡಿವೆ. ನೈಋತ್ಯ ಬೀಜಿಂಗ್‌ನ ಫಾಂಗ್‌ಶಾನ್ ನೆರೆಹೊರೆಯಲ್ಲಿ ಅರ್ಧ ಮುಳುಗಿದ ಬಸ್‌ಗಳು ಕಂಡುಬಂದವು. ಹೈಸ್ಪೀಡ್ ರೈಲುಗಳು ಸೋಮವಾರ 30 ಗಂಟೆಗಳ ಕಾಲ ಹಳಿಗಳ ಮೇಲೆ ಸಿಲುಕಿಕೊಂಡವು.