ಶಿವಸಾಗರ: ಹತ್ತನೆ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಒಂದು ದಿನದ ಮಟ್ಟಿಗೆ ಜಿಲ್ಲಾಧಿ ಕಾರಿಯಾಗಿ ಸೇವೆ ಸಲ್ಲಿಸಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.
ಬೊಕೊಟಾ ನೆಮುಗುರಿ ಡ್ಯೂರಿಟಿಂಗ್ ಟೀ ಗಾರ್ಡನ್ನ ಭಾಗ್ಯದೀಪ್ ರಾಜ್ಗರ್ ಅವರೆ ಶಿವಸಾಗರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈ ಆಡಳಿತ ನಡೆಸುವ ಅವಕಾಶ ಪಡೆದ ವಿದ್ಯಾರ್ಥಿಯನ್ನು ಸ್ವತಃ ಜಿಲ್ಲಾಧಿಕಾರಿ ವಿಕ್ರಮ್ ಯಾದವ್ ಅವರೇ ಮನೆಗೆ ತೆರಳಿ ಅವರನ್ನು ಕರೆತಂದು ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಭಾಗವಹಿಸುವಂತೆ ನೋಡಿಕೊಂಡಿದ್ದಾರೆ.
ದೂರದ, ಗ್ರಾಮೀಣ ಮತ್ತು ಬಡ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುವ ಉಪಕ್ರಮ ವಾಗಿರುವ ‘ಆರೋಹಣ್ ‘ ಕಾರ್ಯಕ್ರಮದ ಅಡಿಯಲ್ಲಿ ಬೊಕೊಟಾ ಬೋರ್ಬಮ್ ಹೈಸ್ಕೂಲ್ನ 16 ವರ್ಷದ ವಿದ್ಯಾರ್ಥಿ ಭಾಗ್ಯದೀಪ್ ರಾಜ್ಗರ್ ಅವರನ್ನು ಒಂದು ದಿನದ ಮಟ್ಟಿಗೆ ಜಿಲ್ಲಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಯಾದವ್ ಸುದ್ದಿಗಾರರಿಗೆ ತಿಳಿಸಿದರು.
ಭಾಗ್ಯದೀಪ್ ರಾಜ್ಗರ್ ಪ್ರತಿಭಾವಂತ ಹುಡುಗ, ಅವರು ಜೀವನದಲ್ಲಿ ಹಲವಾರು ಕಷ್ಟಗಳನ್ನು ಎದುರಿಸು ತ್ತಿದ್ದರೂ, ಶ್ರೇಷ್ಠತೆ ಸಾಧಿಸಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. ಒಂದು ದಿನದ ಮಟ್ಟಿಗೆ ಜಿಲ್ಲಾಧಿಕಾರಿ ಹುದ್ದೆಗೆ ಅವರನ್ನು ಆಯ್ಕೆ ಮಾಡುವುದರಿಂದ ಅವರು ಮಾತ್ರವಲ್ಲದೆ ಇತರ ವಿದ್ಯಾರ್ಥಿಗಳಿಗೂ ತಮ್ಮ ಅಧ್ಯಯ ನವನ್ನು ಮುಂದುವರಿಸಲು ಪ್ರೇರೇಪಿಸುತ್ತದೆ ಎಂದು ನನಗೆ ಖಚಿತವಾಗಿದೆ ಎಂದು ಡಿಸಿ ಹೇಳಿದರು.
ಒಂದು ದಿನದ ಜಿಲ್ಲಾಧಿಕಾರಿಯಾಗುವ ಭಾಗ್ಯ ಪಡೆದ ಭಾಗ್ಯದೀಪ್ ರಾಜ್ಗಢ್ ಅವರು ಭವಿಷ್ಯದಲ್ಲಿ ಆಡಳಿತ ಅಧಿಕಾರಿಯಾಗುವ ಕನಸನ್ನು ಹೊಂದಿದ್ದಾರೆ ಎಂದು ಹೇಳಿದರು.