Friday, 22nd November 2024

ಬಾಂಗ್ಲಾದೇಶದಲ್ಲಿ ಡೆಂಘೀ ಜ್ವರ ಉಲ್ಬಣ: ಮೃತರ ಸಂಖ್ಯೆ 303ಕ್ಕೆ ಏರಿಕೆ

ಬಾಂಗ್ಲಾದೇಶ: ಬಾಂಗ್ಲಾದೇಶದಲ್ಲಿ ಡೆಂಘೀ ರೋಗ ದಿನ ಕಳೆದಂತೆ ಹಬ್ಬುತ್ತಲೇ ಇದೆ. ಕಳೆದ 24 ಗಂಟೆಯಲ್ಲಿ 10 ಮಂದಿ ದೇಶದ ವಿವಿಧೆಡೆ ಸಾವನ್ನಪ್ಪಿದ್ದಾರೆ.

ಒಟ್ಟು 2,495 ಡೆಂಘೀ ಪ್ರಕರಣಗಳು ವರದಿಯಾಗಿವೆ. ಈ ವರ್ಷ ಬಾಂಗ್ಲಾದಲ್ಲಿ ಡೆಂಘೀ ಪ್ರಾರಂಭವಾದಂದಿ ನಿಂದ ಇಲ್ಲಿಯವರೆಗೆ 303 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 63,968 ಕ್ಕೇರಿದೆ ಎಂದು ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ ತಿಳಿಸಿದೆ.

ಜೂನ್​-ಸೆಪ್ಟೆಂಬರ್​ನ ಮಾನ್ಸೂನ್ ಅವಧಿಯು ಬಾಂಗ್ಲಾದಲ್ಲಿ ಡೆಂಘೀ ಜ್ವರದ ತಿಂಗಳುಗಳಾಗಿವೆ. ಹಾಗಾಗಿ, ದೇಶವನ್ನು ಸೊಳ್ಳೆ ಹರಡುವ ರೋಗಗಳಿಗೆ ಒಳಗಾಗುವ ಹೆಚ್ಚಿನ ಅಪಾಯದ ರಾಷ್ಟ್ರವೆಂದೂ ಪರಿಗಣಿಸ ಲಾಗಿದೆ. ಸಾಮಾನ್ಯ ಜ್ವರದಂತೆ ಕಾಣಿಸಿಕೊಳ್ಳುವ ಡೆಂಗ್ಯೂ ಅತಿಯಾದರೆ ಪ್ರಾಣವನ್ನೇ ತೆಗೆಯುತ್ತದೆ.

ವಿಶ್ವದ 40% ಜನರು ಡೆಂಘೀ ಹರಡುವ ಅಪಾಯವಿರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಪ್ರತಿ ವರ್ಷ ಸುಮಾರು 400 ಮಿಲಿಯನ್​ ಜನರು ಇದೇ ಜ್ವರದಿಂದ ಬಳಲುತ್ತಾರೆ. 400 ಮಿಲಿಯನ್​ ಜನರಲ್ಲಿ 100 ಮಿಲಿಯನ್​ ಜನರ ಆರೋಗ್ಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. 22 ಸಾವಿರ ಜನ ಪ್ರತಿವರ್ಷ ಜ್ವರಕ್ಕೆ ಸಾವನ್ನಪ್ಪುತ್ತಿದ್ದಾರೆ.