Friday, 18th October 2024

ನ್ಯಾಯಾಧೀಶರ ಹತ್ಯೆ: 34 ವರ್ಷಗಳ ಬಳಿಕ ತನಿಖೆ

ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ನ್ಯಾಯಾಧೀಶರೊಬ್ಬರ ಹತ್ಯೆ ನಡೆದು 34 ವರ್ಷಗಳ ಬಳಿಕ ಜಮ್ಮು ಕಾಶ್ಮೀರ ತನಿಖಾ ಸಂಸ್ಥೆ ಎಸ್​​​ಐಎ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ.

ಜಮ್ಮು- ಕಾಶ್ಮೀರದ ಲಿಬರೇಶನ್ ಫ್ರಂಟ್ ಸಂಸ್ಥಾಪಕ ಮಕ್ಬೂಲ್ ಭಟ್ ಅವರಿಗೆ ಮರಣದಂಡನೆ ವಿಧಿಸಿದ ನ್ಯಾಯಾಧೀಶರ ಹತ್ಯೆ ಪ್ರಕರಣದ ತನಿಖೆಯನ್ನು ಪುನಾರಂಭಿಸಿದೆ.

ಮೂರು ದಶಕಗಳ ಹಿಂದೆ ನಿವೃತ್ತ ನ್ಯಾಯಮೂರ್ತಿ ನೀಲಕಂಠ ಗಂಜೂ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಹತ್ಯೆಯ ಕ್ರಿಮಿನಲ್ ಪಿತೂರಿಯನ್ನು ಬಯಲಿ ಗೆಳೆಯಲು ಹಾಗೂ ಈ ಕೊಲೆ ಪ್ರಕರಣದ ಸಂಗತಿಗಳನ್ನು ಹೊರ ತರಲು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ರಾಜ್ಯ ತನಿಖಾ ಸಂಸ್ಥೆ (SIA) ಮಂಗಳವಾರ ತನಿಖೆ ಆರಂಭಿಸಿದೆ.

ಶ್ರೀನಗರದ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಹಾಗೂ ಕಾಶ್ಮೀರಿ ಪಂಡಿತರಾದ ನೀಲಕಾಂತ್ ಗಂಜೂ ಅವರು, 1968 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಇನ್ಸ್‌ಪೆಕ್ಟರ್ ಅಮರ್ ಚಂದ್ ಕೊಲೆ ಸಂಬಂಧದ ಪ್ರಕರಣದಲ್ಲಿ, JKLF ಸಂಸ್ಥಾಪಕ ಮಕ್ಬೂಲ್ ಭಟ್ ಅವರಿಗೆ ಮರಣದಂಡನೆ ವಿಧಿಸಿ ದ್ದರು. ಈ ಮರಣದಂಡನೆಯನ್ನು 1982 ರಲ್ಲಿ ಸುಪ್ರೀಂ ಕೋರ್ಟ್ ಸಹ ಎತ್ತಿ ಹಿಡಿದಿತ್ತು. ಸುಪ್ರೀಂಕೋರ್ಟ್​​ನ ತೀರ್ಪಿನ ಬಳಿಕ ಭಟ್ ಅವರನ್ನು ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. 9 ಫೆಬ್ರವರಿ 1984 ರಂದು ಅದೇ ಜೈಲಿನಲ್ಲಿ ಸಮಾಧಿ ಕೂಡಾ ಮಾಡಲಾಗಿತ್ತು.

ಶ್ರೀನಗರದ ಹರಿ ಸಿಂಗ್ ಹೈ ಸ್ಟ್ರೀಟ್‌ನಲ್ಲಿ 67 ವರ್ಷದ ನಿವೃತ್ತ ನ್ಯಾಯಾಧೀಶ ಗಂಜೂ ಹತ್ಯೆ ಮಾಡಲಾಗಿತ್ತು. 1989 ರಲ್ಲಿ ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತ್ ಸಮುದಾಯವನ್ನು ಗುರಿಯಾಗಿಸಿಕೊಂಡು ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ಹಿಂಸಾಚಾರದಿಂದಾಗಿ, ಅಲ್ಲಿನ ಕಾಶ್ಮೀರಿ ಪಂಡಿತರೆಲ್ಲ ಜಮ್ಮು ಕಡೆಗೆ ವಲಸೆ ಹೋಗಿದ್ದರು.