ನವದೆಹಲಿ: ಆನ್ಲೈನ್ ಪೀಠೋಪಕರಣಗಳಲ್ಲಿ ಭಾರಿ ಹೆಸರು ಮಾಡಿರುವ ಪೆಪ್ಪರ್ ಫ್ರೈ ಕಂಪನಿಯ ಸಹ-ಸಂಸ್ಥಾಪಕ ಅಂಬರೀಶ್ ಮೂರ್ತಿ ಅವರು ಲೇಹ್ನಲ್ಲಿ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ.
“ನನ್ನ ಸ್ನೇಹಿತ, ಮಾರ್ಗದರ್ಶಕ, ಸಹೋದರ, ಆತ್ಮ ಸಂಗಾತಿ ಅಂಬರೀಶ್ ಮೂರ್ತಿ ಇನ್ನಿಲ್ಲ ಎಂದು ತಿಳಿಸಲು ತುಂಬಾ ದುಃಖವಾಗಿದೆ. ನಿನ್ನೆ ರಾತ್ರಿ ಲೇಹ್ನಲ್ಲಿ ಹೃದಯಾಘಾತದಿಂದ ಅವರನ್ನು ಕಳೆದುಕೊಂಡೆ. ದಯವಿಟ್ಟು ಅವರಿಗಾಗಿ ಮತ್ತು ಅವರ ಕುಟುಂಬ ಮತ್ತು ಹತ್ತಿರದವರಿಗೆ ಶಕ್ತಿಗಾಗಿ ಪ್ರಾರ್ಥಿಸಿ” ಎಂದು ಆಶಿಶ್ ಶಾ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಮುಂಬೈನಲ್ಲಿ ನೆಲೆಸಿದ್ದ ಅವರು ಲೇಹ್ಗೆ ಬೈಕ್ನಲ್ಲಿ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಅವರಿಗೆ ಹೃದಯ ಸ್ತಂಭನವಾಗಿದ್ದು ನಿಧನರಾಗಿದ್ದಾರೆ. ಉದ್ಯಮಿಯ ಸಾವಿಗೆ ಹಲವರು ಆಘಾತ ವ್ಯಕ್ತಪಡಿಸಿದ್ದು, ಟ್ವಿಟರ್ ನಲ್ಲಿ ಸಂತಾಪ ಸಲ್ಲಿಸಿದ್ದಾರೆ.
“ಹೃದಯ ಸ್ತಂಭನದಿಂದ ಅಂಬರೀಶ್ ಮೂರ್ತಿ ಅವರ ಹಠಾತ್ ನಿಧನದ ಸುದ್ದಿ ಕೇಳಿ ತುಂಬಾ ದುಃಖ ಮತ್ತು ಆಘಾತವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅದ್ಭುತ ಉದ್ಯಮಿ ಮತ್ತು ಅನೇಕರಿಗೆ ಸ್ಫೂರ್ತಿ. ಪೆಪ್ಪರ್ಫ್ರೈ ಜೊತೆಗಿನ ಅವರ ಪರಂಪರೆಯು ಬದುಕಲಿ.” ಎಂದು ಸ್ವಾತಿ ಭಾರ್ಗವ, ಉದ್ಯಮಿ ಟ್ವಿಟರ್ ನಲ್ಲಿ ಬರೆದಿದ್ದಾರೆ.
ಅಂಬರೀಶ್ ಮೂರ್ತಿ ಜೂನ್ 2011 ರಲ್ಲಿ ಆಶಿಶ್ ಶಾ ಅವರೊಂದಿಗೆ ಪೆಪ್ಪರ್ಫ್ರೈ ಅನ್ನು ಪ್ರಾರಂಭಿಸಿದರು.