ದಾಸ್ ಕ್ಯಾಪಿಟಲ್
dascapital1205@gmail.com
೨೦೧೪ರ ಮಹಾಚುನಾವಣೆಯಲ್ಲಿ ಮೋದಿ ನೇತೃತ್ವದ ಎನ್‌ಡಿಎಯ ಪ್ರಚಂಡ ಗೆಲುವಿಗೆ ಅನಂತ ಮೂರ್ತಿಯವರು ಪ್ರತಿಕ್ರಿಯಿಸುತ್ತ, ಇಷ್ಟು ದೊಡ್ಡ ಬಹು
ಮತದೊಂದಿಗೆ ಮೋದಿಯವರು ಗೆಲ್ಲುವ ಬದಲು ಅಲ್ಪ ಬಹುಮತದೊಂದಿಗೆ ಗೆಲ್ಲಬೇಕಿತ್ತು ಎಂದಿದ್ದರು. ಅಂದರೆ ಬಲವಾದ ವಿಪಕ್ಷ ಮೋದಿಗೆ ಇರಬೇಕಿತ್ತು ಎಂಬ ಅವರ ನಿಲುವಿನಲ್ಲಿ, ‘ಪ್ರಜಾಪ್ರಭುತ್ವದ ದೊಡ್ಡ ಶಕ್ತಿಯಿರುವುದು ವಿಪಕ್ಷದ ಅಸ್ತಿತ್ವದಲ್ಲಿ’ ಎಂಬುದು ಸ್ಪಷ್ಟವಾಗುತ್ತದೆ.
ವಿಪಕ್ಷದಲ್ಲೂ ಪ್ರಧಾನಿಯಾಗುವ ಅರ್ಹತೆ-ಯೋಗ್ಯತೆಯುಳ್ಳ ಒಬ್ಬ ವ್ಯಕ್ತಿಯಿರಬೇಕು. ಅರ್ಥ ಸಚಿವನಾಗಲು ಅರ್ಹ ವ್ಯಕ್ತಿಯಿರಬೇಕು. ಆಡಳಿತ ಪಕ್ಷದ ಪ್ರಧಾನಿ ಸೋತರೆ, ವಿಪಕ್ಷದ ಪ್ರಧಾನಿಯಾಗಲು ಅರ್ಹತೆಯುಳ್ಳ ವ್ಯಕ್ತಿ ಅಧಿಕಾರ ತಗೊಂಡು ನಡೆಸುವ ಶಕ್ತಿವಂತನಾಗಿರಬೇಕು. ಮಾತ್ರವಲ್ಲ ಇತರ ಮಂತ್ರಿ ಸ್ಥಾನಗಳನ್ನು ನಿರ್ವಹಿಸಬಲ್ಲ ವ್ಯಕ್ತಿಗಳಿರಬೇಕು ಎಂಬಲ್ಲಿಗೆ ಬಹುಪರಾಕ್ ಸಂಸ್ಕೃತಿಯನ್ನು ಅನಂತಮೂರ್ತಿ ವಿರೋಧಿಸು ತ್ತೇನೆ ಎಂದಿದ್ದರು. ಮೋದಿಯ ಸುತ್ತಲಿನ ಬಹುಪರಾಕ್ ಸಂಸ್ಕೃತಿ ಪ್ರಜಾಪ್ರಭುತ್ವಕ್ಕೆ ಮಾರಕ ಎಂದಿದ್ದರು.
ಪ್ರಜಾತಂತ್ರದ ದೃಷ್ಟಿಯಿಂದ ಅವರ ಮಾತು ಸತ್ಯ. ಆದರೆ, ಮೋದಿಯನ್ನು ವಿರೋಧಿಸುವವರಲ್ಲೂ ಬಲವಾದ ಪ್ರಜಾತಾಂತ್ರಿಕ ಶಕ್ತಿಯಿರಬೇಕು. ೨೦೧೪ ರಿಂದಲೂ ಅಂಥ ವಿಪಕ್ಷ ಇಲ್ಲದೇ ಹೋದದ್ದು ದುರಂತವೋ ದೌರ್ಭಾಗ್ಯವೋ ಗೊತ್ತಿಲ್ಲ. ವಿರೋಧವೂ ಪ್ರಜಾಪ್ರಭುತ್ವದ ಸೈದ್ಧಾಂತಿಕ ನಿಲುವಿನಲ್ಲೇ ಇರಬೇಕು. ಸಾವಿನ ದಲ್ಲಾಳಿ, ರಾವಣ, ವಿಷಸರ್ಪ, ಕಳ್ಳ, ದೇಶದ್ರೋಹಿ ಅಂತ ಜನಮಾನ್ಯ ಪ್ರಧಾನಿಯನ್ನು ಜರೆಯುವುದು ಸೈದ್ಧಾಂತಿಕ ಪ್ರಜಾಪ್ರಭುತ್ವವೇ? ಅಷ್ಟಕ್ಕೂ ಸೈದ್ಧಾಂತಿಕ ನೆಲೆಯ ಪ್ರಜಾಪ್ರಭುತ್ವದ ಪ್ರಜ್ಞೆ ವಿಪಕ್ಷಕ್ಕೆ ಗೊತ್ತೇ ಇಲ್ಲ ಎಂಬಷ್ಟು ಅಸಾಂವಿಧಾನಿಕ ಪದಗಳಲ್ಲಿ ಪ್ರಧಾನಿಯನ್ನು ಹೀಗಳೆಯುತ್ತಾರೆ.
ಪ್ರಶ್ನಿಸುವಿಕೆಗೂ ಒಂದು ಸಭ್ಯತೆಯಿದೆ. ಅಸಭ್ಯತೆಯನ್ನೇ ಸಭ್ಯತೆ ಯೆಂದು ಭಾವಿಸಿದರೆ, ಕಣ್ಣುಹೊಡೆಯುವುದು, ಅಪ್ಪಿಕೊಳ್ಳುವುದು, ಜಾತಿ ಹೆಸರು ಹಿಡಿದು ನಿಂದಿಸುವುದು ಇದೆಲ್ಲ ಅಧಿವೇಶನದೊಳಗೂ ಹೊರಗೂ ಘಟಿಸುತ್ತದೆ. ಪಾರ್ಲಿಮೆಂಟಿಗಿರುವ ಘನತೆ, ಮಹತ್ವವನ್ನು ಅರಿತೇ ಸದನದೊಳಗೆ ವ್ಯವಹರಿಸ ಬೇಕಾಗುತ್ತದೆ. ಈ ಮಾತು ವಿಪಕ್ಷದವರಿಗೂ, ಆಡಳಿತ ಪಕ್ಷದವರಿಗೂ ಅನ್ವಯ. ಅಲ್ಲಿರುವವರೆಲ್ಲರೂ ಜನಪ್ರತಿನಿಧಿಗಳೇ ಆಗಿರುವುದಾದರೂ, ಜನದನಿಯಾಗಬೇಕಾದ ಸ್ಥಾನದಲ್ಲಿ ವಿಪಕ್ಷದ ಅಸ್ತಿತ್ವವಿರುತ್ತದೆ. ಆಡಳಿತದ ಯಂತ್ರ ಹಳಿ ತಪ್ಪದಂತೆ ನೋಡಿಕೊಳ್ಳುವ ಪ್ರಧಾನ ಜವಾಬ್ದಾರಿ ಹೊತ್ತ ವಿಪಕ್ಷವು ಸಂಸತ್ತು ನಡೆದುಬಂದ ಇತಿಹಾಸವನ್ನು ಚೆನ್ನಾಗಿಯೇ ಅರಿತಿರಬೇಕಾಗುತ್ತದೆ.
ಸರಿಹೊತ್ತಿನ ಸಮಸ್ಯೆಗಳನ್ನು ಸರಕಾರದ ಮುಂದಿಟ್ಟು ತಾತ್ವಿಕ ನೆಲೆಯಲ್ಲೇ ಅದನ್ನು ಇಕ್ಕಟ್ಟಿಗೆ ಸಿಲುಕಿಸುವುದು ಪ್ರಜಾತಾಂತ್ರಿಕ ಜವಾಬ್ದಾರಿಯಾದರೂ ಅದ ಕ್ಕೊಂದು ವಿಧಾನ ಅಂತ ಇದೆ. ಚರ್ಚಾಸ್ಪದ ವಿಷಯಗಳ ಗಂಭೀರತೆಯನ್ನು ಅರಿತಿರಬೇಕಾಗುತ್ತದೆ. ಅದನ್ನು ಅಧಿವೇಶನದಲ್ಲಿ ಪ್ರಸ್ತುತ ಪಡಿಸುವ ರೀತಿಯೂ
ಸಾಂವಿಧಾನಿಕವಾಗೇ ಇರಬೇಕಾಗುತ್ತದೆ. ವಿಪಕ್ಷದ ಸ್ಥಾನದಲ್ಲಿದ್ದೇವೆಂಬ ಮಾತ್ರಕ್ಕೆ ವಿರೋಧಿಸುವುದು ಪ್ರಜಾಪ್ರಭುತ್ವದ ನೀತಿಗೆ ವಿರುದ್ಧ. ವ್ಯಕ್ತಿಗಳನ್ನು, ಪಕ್ಷವನ್ನು, ಆಡಳಿತ ಪಕ್ಷದ ಸೈದ್ಧಾಂತಿಕ ನಿಲುವುಗಳನ್ನು ವಿರೋಧಿಸುವುದು ಕೂಡ ಪ್ರಜಾಪ್ರಭುತ್ವದ ಅಡಿಯಲ್ಲೇ ಆಗಬೇಕಾಗುತ್ತದೆ.
ಆಡಳಿತ ಯಂತ್ರವನ್ನು ಚಾಲಿಸುವ ಸರಕಾರದ ಕ್ರಮ ವನ್ನು ವಿರೋಧಿಸುವುದಕ್ಕೂ, ಸರಕಾರ ಆಡಳಿತ ಯಂತ್ರವನ್ನೇ ನಡೆಸಬಾರದು ಎಂದು ವಿರೋಽಸುವುದಕ್ಕೂ ವ್ಯತ್ಯಾಸವನ್ನೇ ಅರಿಯದೆ ವಿರೋಧಿಸುವುದು ವಿಪಕ್ಷದ ಕಾಯಕವಾಗಿ ಕಾಣುತ್ತಿದೆ. ೨೦೧೪ರಿಂದ ಕೇಂದ್ರದಲ್ಲಿ ಬಲವಾದ ವಿಪಕ್ಷ ಇಲ್ಲದೇ
ಹೋದದ್ದು ಭಾರತಕ್ಕೆ ಒಳ್ಳೆಯದಲ್ಲ ಎಂಬುದು ಸತ್ಯ! ಹಾಗಂತ ಕಾಂಗ್ರೆಸ್ ವಿಪಕ್ಷದ ಸ್ಥಾನದಲ್ಲಿದ್ದರೂ ಅಂಥಾದ್ದೇನೂ ಪರಿಣಾಮವಾಗಲಿಲ್ಲ. ಆಡಳಿತ ಪಕ್ಷದ ದೌರ್ಬಲ್ಯಗಳನ್ನು ಹುಡುಕುವಾಗಲೂ ವಿಪಕ್ಷವು ನೈತಿಕಶಕ್ತಿ ಹೊಂದಿರಲೇ ಬೇಕಾಗುತ್ತದೆ. ಬಹುಕಾಲ ಈ ದೇಶವನ್ನು ಆಳಿದ ಕಾಂಗ್ರೆಸ್‌ಗೆ ಅಂಥ ಯಾವ ನೈತಿಕ ಶಕ್ತಿಯಿದೆ ಎಂಬುದು ಹಿಂದೆ ವಿಪಕ್ಷ ದಲ್ಲಿದ್ದ ಬಿಜೆಪಿಗೆ ಗೊತ್ತಿಲ್ಲದ ವಿಷಯವೇನಲ್ಲ!
ಕಾಂಗ್ರೆಸ್ ಎಷ್ಟರಮಟ್ಟಿಗೆ ಆತ್ಮವಿಮರ್ಶೆ ಮಾಡಿಕೊಂಡಿದೆಯೋ ಗೊತ್ತಿಲ್ಲ! ಆದರೆ, ಬಿಜೆಪಿ ಮಾತ್ರ ಕಾಂಗ್ರೆಸ್ಸನ್ನು ಮೊದಲಿಂದಲೂ ವಿಮರ್ಶೆ ಮಾಡುತ್ತಲೇ ಬಂದಿದೆ. ಆದ್ದರಿಂದ, ನೈತಿಕ ಪ್ರಜಾಪ್ರಭುತ್ವದ ಪ್ರಶ್ನೆ ಬಂದಾಗ ಕಾಂಗ್ರೆಸ್ಸನ್ನು ಎದುರಿಸುವುದು ಬಿಜೆಪಿಗೆ ಅಂಥ ಕಷ್ಟವೇನಲ್ಲ. ೨೦೧೪ರಿಂದಲೂ ಬಲು ಪ್ರಖರವಾಗಿಯೇ ಕಾಂಗ್ರೆಸ್ಸಿಗಿದು ಅರ್ಥವಾದಂತಿದೆ. ಅದಕ್ಕಾಗಿ ಕಾಂಗ್ರೆಸ್ ನೈತಿಕ ಪ್ರಜಾಪ್ರಭುತ್ವದ ಮತ್ತು ಹಿಂದುತ್ವದ ಮಾತುಗಳನ್ನು ಹೇಳಲು ಯತ್ನಿಸುತ್ತಿದೆ. ರಾಜಕೀಯ ಪ್ರಹಸನದಲ್ಲಿ ಇಲ್ಲದ ವೇಷವನ್ನು, ಅದಕ್ಕೆ ತಕ್ಕುದಾದ ಭಾಷೆ-ಭಾವವನ್ನು ಅಭಿವ್ಯಕ್ತಿಸುವುದು, ಆ ಮೂಲಕ ಜನತೆಯನ್ನು ಮರುಳು ಮಾಡುವುದು ಹಿಂದಿನಂತೆ ಈಗ ಸಾಧ್ಯವಿಲ್ಲ ಎಂಬುದು ಕಾಂಗ್ರೆಸ್ಸಿಗೆ ಅರ್ಥವಾಗಿರುವಂತೆಯೇ ಬಿಜೆಪಿ ಮತ್ತಿತರ ಪ್ರಾದೇಶಿಕ ಪಕ್ಷಗಳಿಗೂ ಅರ್ಥವಾದಂತಿದೆ ಎಂದು ಪೂರ್ತಿಯಾಗಿ ಹೇಳಲಾಗದು! ರಾಜ್ಯಗಳ ಚುನಾವಣಾ ಫಲಿತಾಂಶವನ್ನು ನೋಡಿದರೆ ಇದು ಅರ್ಥವಾಗುತ್ತದೆ.
ಬೈಗುಳಗಳು ಮಾತ್ರ ಬಲವಾದ ವಿಪಕ್ಷದ ಅಸ್ಮಿತೆಯೆಂಬ ಭ್ರಮೆಯಿಂದ ರಾಜಕೀಯ ಪಕ್ಷಗಳು ಹೊರಬರಬೇಕಿದೆ. ಎಲ್ಲಿಯವರೆಗೆ ‘ಕಂಟೆಂಟ್’ ಇಲ್ಲದೆ ವಿರೋಧಗಳು ಇರುತ್ತ ವೆಯೋ ಅಲ್ಲಿಯವರೆಗೆ ವೈಚಾರಿಕ ರಾಜಕೀಯದ ಪ್ರಜ್ಞೆಯನ್ನು ಯಾವ ಪಕ್ಷವೂ ಸಂಪಾದಿಸಲಾರದು. ಸರಿಹೊತ್ತಿನ ಕೇಂದ್ರದ ರಾಜಕೀಯದಲ್ಲಿ ಎಲ್ಲ ಮೋದಿ-ವಿರೋಧಿ ಪಕ್ಷಗಳು ಅರ್ಥಮಾಡಿಕೊಳ್ಳಬೇಕಾದ ಒಂದು ವಿಚಾರವೇ ನೆಂದರೆ, ಮೋದಿಯನ್ನು ನೈತಿಕ ಪ್ರಜಾಪ್ರಭುತ್ವದ ನೆಲೆಯಲ್ಲಿ
ವಿರೋಽಸುವುದು ಅಷ್ಟು ಸುಲಭದ ಮಾತಲ್ಲ, ಹಾಗೆ ವಿರೋಧಿಸುವುದು ಸಾಧ್ಯವೂ ಇಲ್ಲವೆಂಬುದನ್ನು!
೨೦೧೪ರಿಂದ ನಡೆದ ಲೋಕಸಭಾ ಅಧಿವೇಶನದಲ್ಲಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ನಡೆಸಿದ, ಅಥವಾ ನಡೆದುಹೋದ ಅಧಿವೇಶನದ ಸಾಂದರ್ಭಿಕ ಘಟನೆ ಗಳನ್ನು ಅವಲೋಕಿಸಿದರೆ ವಿಪಕ್ಷಗಳ ಧೋರಣೆಗಳು ಏನೆಂಬುದು ಅರಿವಾಗುತ್ತದೆ. ಸರಕಾರವನ್ನು ಏನಕೇನ ಪ್ರಕಾರದಲ್ಲಿ ವಿರೋಧಿಸುವು ದಕ್ಕಾಗಿಯೇ ನಾವಿರುವುದು ಎಂಬ ತಪ್ಪು ಗ್ರಹಿಕೆಯಲ್ಲೇ ವಿಪಕ್ಷಗಳು ಸರಕಾರವನ್ನು, ಅಲ್ಲಲ್ಲ, ಮೋದಿಯನ್ನು ವಿರೋಽಸುತ್ತಿವೆ. ಮೊನ್ನಿನ ಅವಿಶ್ವಾಸ ನಿರ್ಣಯದ ಸನ್ನಿವೇಶದಲ್ಲಿ ಆದದ್ದೂ ಅದರದ್ದೇ ಪುನರಾವರ್ತನೆ. ಮಣಿಪುರದ ವಿಚಾರದಲ್ಲಿ ಕೇಂದ್ರ ಸರಕಾರ ಭಾರತಮಾತೆಯ ಹತ್ಯೆಮಾಡಿದೆ ಎಂದು ಆರೋಪಿಸು
ವಲ್ಲಿಯೂ ಈ ನೆಲದ ಸಂಸ್ಕೃತಿ ಪರಂಪರೆಯ ಬಗ್ಗೆ ಅಷ್ಟೇನೂ ಅರಿವಿಲ್ಲದವ ಎಂದು ರಾಜಕೀಯ, ಸಾಮಾಜಿಕ ವಲಯದಲ್ಲಿ ಉಲ್ಲೇಖಿಸಲ್ಪಟ್ಟ, ಕೊರತೆಯ ರಾಜಕೀಯದ ಅನುಭವಗಳನ್ನು ಅರ್ಹತೆಯನ್ನಾಗೇ ಹೊಂದಿರುವ, ಪ್ರಬಲ ರಾಷ್ಟ್ರೀಯ ಪಕ್ಷವೊಂದರ ಪ್ರತಿನಿಽಯಾಗಿ ರಾಹುಲ್ ಗಾಂಧಿ ಆಡಿದ ಮಾತಿನಲ್ಲಿ ಯಾವ ದನಿಯನ್ನು ಗುರುತಿಸಲು ಸಾಧ್ಯ ವಿದೆ? ಯಾಕೆಂದರೆ, ಭಾರತಮಾತೆಯ ಹತ್ಯೆ ಎಂಬ ಪದಬಳಕೆ ಮಾಡುವಷ್ಟು ಸಾಂದರ್ಭಿಕ ಮತ್ತು ಸಾರ್ವಕಾಲಿಕ
ಅರ್ಹತೆ ರಾಹುಲ್‌ಗಾಗಲೀ, ಕಾಂಗ್ರೆಸ್ಸಿಗಾಗಲೀ ಇರಬೇಕಾದರೆ ಅವರ ರಾಜಕೀಯ ಚರಿತ್ರೆಯು ತಕ್ಕಮಟ್ಟಿಗಾದರೂ ದೋಷಮುಕ್ತವಾಗಿರಬೇಕು.
ಇಲ್ಲ, ಸುಖಾಸುಮ್ಮನೆ ಮಾತನಾಡಿದರೆ ಭಾರತಮಾತೆಯ ಘನತೆಯನ್ನು ಅಗೌರವಿಸಿದಂತಾಗುತ್ತದೆಂಬ ಕನಿಷ್ಠ ಪ್ರe ಇರಬೇಕಾಗುತ್ತದೆ. ಅವಿಶ್ವಾಸ ನಿರ್ಣಯದಂಥ ದೊಡ್ಡ ಉಸಾಬರಿಯಿಂದ ವಿಪಕ್ಷ ತನ್ನ ಧೋರಣೆಯನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿತು. ಮುಖ್ಯವಾಗಿ, ಸರಕಾರದ ತಪ್ಪು ನಡೆಗಳನ್ನು ವಿರೋಧಿಸಬೇಕಾದ ವಿಪಕ್ಷ ಮೋದಿಯನ್ನೇ ಗುರಿಯನ್ನಾಗಿಸಿಕೊಂಡು ವಿರೋಽಸುತ್ತಿರುವುದು ವಿಷಾದನೀಯ. ಇದು ಕಾಂಗ್ರೆಸ್ಸಿನ ಅತಿದೊಡ್ದ ದೌರ್ಬಲ್ಯವಾಗಿ ಕಾಣುತ್ತಲೇ ಇದೆ.
ಯಾವ ಸಂದರ್ಭವನ್ನು ಹೇಗೆ ಬಳಸಿಕೊಳ್ಳಬೇಕೆಂಬ ರಾಜಕೀಯಜ್ಞಾನ ಇಲ್ಲದೇ ಹೋದಾಗ ಇಂಥ ಅತಿರೇಕದ ವರ್ತನೆ ಘಟಿಸುತ್ತೇನೋ! ಬಹುಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ಸಿಗೆ ಪ್ರಜಾಪ್ರಭುತ್ವದಲ್ಲಿ ವಿಪಕ್ಷದ ಪಾತ್ರವೇನು ಎಂಬುದರ ಸ್ಪಷ್ಟತೆ ಇದ್ದಂತಿಲ್ಲ. ಪೂರ್ವಸಿದ್ಧತೆಯಿಲ್ಲದೆ ಅಧಿವೇಶನಕ್ಕೆ ಬರುವುದು ಅದೆಂಥ ದುಃಸ್ಥಿತಿ ಇವರದು? ಅಂಥ ಮೋದಿಯೇ ಅಧಿವೇಶನದಲ್ಲಿ ಕಾಂಗ್ರೆಸ್ ಘೋಷಿಸಿದ ಅವಿಶ್ವಾಸ ನಿರ್ಣಯದ ಬಗ್ಗೆ ನೇರವಾಗಿ ಆಡಿಬಿಟ್ಟರು. ಮೋದಿಯ ಮಾತುಗಳಲ್ಲಿ, ಅದೇನು ಸಿದ್ಧತೆ, ವಿಷಯ ಸಂಗ್ರಹ, ಪ್ರಸ್ತುತಿ, ನೆನಪಿನ ಶಕ್ತಿ, ಇತಿಹಾಸಜ್ಞಾನ, ಸಂಸದೀಯ ಅನುಭವ ಎಂದು ಹುಬ್ಬೇರಿಸುವಂತಿದೆ. ಮೋದಿಗೆ
ಇವೆಲ್ಲ ಬಂದಿದ್ದು ವಂಶಪಾರಂಪರ್ಯವಾಗೇ ಅಥವಾ ಹೆಸರಿನ ಮಹಿಮೆಯಿಂದಲೇ? ವಿಪಕ್ಷಗಳು ಸೇರಿ ಎಲ್ಲರೂ ಅರ್ಥಮಾಡಿಕೊಳ್ಳಬೇಕಿದೆ.
ಅಧಿವೇಶನದಲ್ಲಿ ಮೋದಿ ಎಸೆದ ಸವಾಲುಗಳು ಮೋದಿಯನ್ನು ವಿಪಕ್ಷ ನಾಯಕನನ್ನಾಗಿಯೂ ಪ್ರತಿಬಿಂಬಿಸುವಂತಿದ್ದವು. ಹಾಗಂತ ಮೋದಿ ಪ್ರತಿಪಕ್ಷ
ನಾಯಕನಾದ ಅನುಭವ ಹೊಂದಿದವರಲ್ಲ ಎಂಬುದು ಗಮನಾರ್ಹ! ಮೋದಿ-ವಿರೋಧಕ್ಕೆ ಬೇಕಾದ ಸರಕುಗಳನ್ನು ಸದೃಢವಾಗೇ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಎಲ್ಲ ಮೋದಿ-ವಿರೋಧಿ ಒಕ್ಕೂಟಗಳಿಗಿದೆ. ಇದು ಸುಲಭದ ಮಾತಲ್ಲ. ಸ್ವತಃ ಮೋದಿಯನ್ನೇ ಪ್ರಶ್ನಿಸುವುದಕ್ಕೂ ಬಿಜೆಪಿಗೂ ಸಾಧ್ಯವಿಲ್ಲದ ಪರಿಸ್ಥಿತಿಯಿದೆ. ಕಾರಣ, ಮೋದಿಯ ನೈತಿಕತೆ ಅಷ್ಟು ಎತ್ತರದಲ್ಲಿದೆ. ೩೭೦ನೆಯ ವಿಽಯ ರದ್ದತಿ, ಜಿಎಸ್‌ಟಿ ಜಾರಿ, ಕೋವಿಡ್ ಸಂಕಷ್ಟದ ಸಮರ್ಥ ನಿರ್ವಹಣೆ, ಸದೃಢ ಆರ್ಥಿಕತೆ, ವಿಜ್ಞಾನ-ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತವನ್ನು ವಿಶ್ವಗುರುವಾಗಿಸಿದ್ದು ಇತ್ಯಾದಿ ಉಪಕ್ರಮಗಳ ಮೂಲಕ ಭಾರತದ ಗೌರವವನ್ನು ಔನ್ನತ್ಯಕ್ಕೇರಿಸಿದ ಮೋದಿಯನ್ನು ಸಮರ್ಥವಾಗಿ ಎದುರಿಸಲು ಮೋದಿಗೂ ಒಬ್ಬ ಸಶಕ್ತ ಮೋದಿ ಬೇಕು ಎನಿಸುವುದು ಹೀಗೆ ಹಲವು ಕಾರಣ ಗಳಿಗಾಗಿ!