Friday, 22nd November 2024

ಕಾಡುಪ್ರಾಣಿ ಬೇಟೆ, ಡ್ರಗ್​ ದಂಧೆಗೆ ಓರ್ವ ಬಲಿ, ಗುಂಡೇಟಿನಲ್ಲಿ ಗಾಯ

ಚಿರಾಂಗ್/ಲಖಿಂಪುರ: ಅಸ್ಸೋಂನಲ್ಲಿ ಕಾಡುಪ್ರಾಣಿ ಬೇಟೆ ಮತ್ತು ಡ್ರಗ್​ ದಂಧೆಗೆ ಓರ್ವ ಬಲಿಯಾಗಿದ್ದರೆ, ಇನ್ನೊಬ್ಬ ಗುಂಡೇಟಿಗೆ ತೀವ್ರವಾಗಿ ಗಾಯಗೊಂಡಿ ದ್ದಾನೆ.

ಭಾನುವಾರ ರಾತ್ರಿ ನಡೆದ ಪ್ರತ್ಯೇಕ ಎನ್​ಕೌಂಟರ್​ನಲ್ಲಿ ಪೊಲೀಸರು ಆರೋಪಿಯನ್ನು ಹೊಡೆದುರುಳಿಸಿದ್ದಾರೆ. ಲಖಿಂಪುರ ಮತ್ತು ಚಿರಾಂಗ್ ಜಿಲ್ಲೆಗಳಲ್ಲಿ ಈ ಎರಡು ಎನ್‌ಕೌಂಟರ್‌ಗಳು ನಡೆದಿವೆ.

ಚಿರಾಂಗ್‌ ಜಿಲ್ಲೆಯ ಜಲುಕಾನಿ ಎಂಬಲ್ಲಿ ಕಳ್ಳ ಬೇಟೆಗಾರರ ಸೆರೆ ಹಿಡಿಯುವ ವೇಳೆ ಬಂಧಿತ ಬೇಟೆಗಾರ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಎನ್​ಕೌಂಟರ್ ನಡೆಸಲಾಗಿದೆ. ಜಲುಕಾನಿ ಭಾರತ ಮತ್ತು ಭೂತಾನ್​ ಗಡಿ ಭಾಗದಲ್ಲಿದೆ. ಘೇಂಡಾಮೃಗಗಳು ಮತ್ತು 40 ಕಾಡು ಆನೆಗಳ ಹತ್ಯೆಯಲ್ಲಿ ಭಾಗಿಯಾಗಿರುವ ಮೂವರು ಬೇಟೆಗಾರರ ಪೈಕಿ ಓರ್ವನನ್ನು ಬಂಧಿಸಲಾಗಿದೆ.

ಬಂಧಿತ ಬೇಟೆಗಾರ ಪೊಲೀಸರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಸೆರೆಯಿಂದ ತಪ್ಪಿಸಿ ಕೊಂಡು ಓಡಿ ಹೋಗುತ್ತಿದ್ದ ಆರೋಪಿ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡು ಬೇಟೆಗಾರ ನಿಗೆ ತಾಕಿ ಗಂಭೀರ ಗಾಯಗೊಂಡು ಆತ ಅರಣ್ಯದಲ್ಲೇ ಸಾವನ್ನಪ್ಪಿದ್ದಾನೆ. ಇದೇ ವೇಳೆ, ಇನ್ನಿಬ್ಬರು ಆರೋಪಿ ಗಳ ಪೈಕಿ ಓರ್ವನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಲಖಿಂಪುರದಲ್ಲಿ ನಡೆದ ಎರಡನೇ ಎನ್​ಕೌಂಟರ್​ನಲ್ಲಿ ಡ್ರಗ್ಸ್​ ಪೆಡ್ಲರ್​ ಒಬ್ಬನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.