Saturday, 23rd November 2024

ಬುರ್ಜ್ ಖಲೀಫಾದಲ್ಲಿ ಭಾರತೀಯ ಧ್ವಜ ಪ್ರದರ್ಶನ

ವದೆಹಲಿ : ಮಂಗಳವಾರ ದೇಶಾದ್ಯಂತ 77 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆ ಮಾಡಿದ್ದು, ಸ್ವಾತಂತ್ರ್ಯ ದಿನಾ ಚರಣೆಯ ಸಂದರ್ಭದಲ್ಲಿ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಭಾರತೀಯ ಧ್ವಜವನ್ನು ಪ್ರದರ್ಶಿಸಲಾಯಿತು.

ದುಬೈನ ಬುರ್ಜ್ ಖಲೀಫಾದಲ್ಲಿ ಮಧ್ಯರಾತ್ರಿ 12:10 ಕ್ಕೆ ಭಾರತೀಯ ಧ್ವಜವನ್ನು ಎಲ್‌ಇಡಿ ದೀಪಗಳೊಂದಿಗೆ ಪ್ರದರ್ಶಿಸ ಲಾಯಿತು.

ಈ ಸಮಯದಲ್ಲಿ, ಭಾರತೀಯ ರಾಷ್ಟ್ರಗೀತೆಯನ್ನು ಸಹ ನುಡಿಸಲಾಯಿತು. ಭಾರತದ ಜನರು ಈ ಅದ್ಭುತ ದೃಶ್ಯಗಳನ್ನು ನೋಡಿ ಸಂತೋಷಪಟ್ಟರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.