ನವದೆಹಲಿ: ಶ್ರೀಕೃಷ್ಣ ಜನ್ಮಭೂಮಿ ಮಥುರಾದಲ್ಲಿ ರೈಲ್ವೆ ಇಲಾಖೆ ನಡೆಸುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆಗೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಆಗಸ್ಟ್ 16 ರಂದು ವಿಚಾರಣೆ ನಡೆಸಲು ಒಪ್ಪಿದೆ.
ಹಿರಿಯ ವಕೀಲ ಪ್ರಶಾಂತೋ ಚಂದ್ರ ಸೇನ್ ಅವರು ಅರ್ಜಿಯ ಕುರಿತಾಗಿ ಕೋರ್ಟ್ ಮುಂದೆ ಪ್ರಸ್ತಾಪಿಸಿದಾಗ ಮುಖ್ಯ ನ್ಯಾಯ ಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಅರ್ಜಿದಾರರಿಗೆ ಆಗಸ್ಟ್ 16 ರಂದು ವಿಚಾರಣೆ ನಡೆಸುವುದಾಗಿ ಭರವಸೆ ನೀಡಿತು.
ಆಗಸ್ಟ್ 9 ರಿಂದ ರೈಲ್ವೆ ಅಧಿಕಾರಿಗಳು ಜನರು ವಾಸಿಸುತ್ತಿರುವ ಪ್ರದೇಶದಲ್ಲಿ ಒತ್ತುವರಿ ಕಾರ್ಯ ಆರಂಭಿಸಿದ್ದಾರೆ.
1800 ರ ದಶಕ ದಿಂದಲೂ ಜನರು ಅಲ್ಲಿ ವಾಸಿಸುತ್ತಿದ್ದಾರೆ. ಇದೀಗ ರೈಲ್ವೆ ಸರ್ಕಾರಿ ಜಾಗ ಎಂದು ಗುರುತಿಸಿ ಜನರನ್ನು ಒಕ್ಕೆಲೆಬ್ಬಿ ಸುತ್ತಿದ್ದಾರೆ ಎಂದು ಹಿರಿಯ ವಕೀಲ ಸೇನ್ ಪೀಠಕ್ಕೆ ಮಾಹಿತಿ ನೀಡಿದರು.
ಮಥುರಾ ರೈಲ್ವೆ ಅಧಿಕಾರಿಗಳು ಜನಪ್ರದೇಶವನ್ನು ರೈಲ್ವೆಗೆ ಸೇರಿದ ಜಾಗ ಎಂದು ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿ ದ್ದಾರೆ. ಇದರ ವಿರುದ್ಧ ಸಿವಿಲ್ ಮೊಕದ್ದಮೆ ದಾಖಲಿಸಿ, ರೈಲ್ವೆ ಪ್ರಾಧಿಕಾರದ ವಿರುದ್ಧ ಶಾಶ್ವತ ತಡೆಯಾಜ್ಞೆ ಕೋರಲಾಗಿದೆ. ಆದಾಗ್ಯೂ, ಆಗಸ್ಟ್ 9 ರಿಂದ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.