ನವದೆಹಲಿ: ಕುಸ್ತಿಪಟು ವಿನೇಶ್ ಫೋಗಟ್ ಮಂಗಳವಾರ ಏಷ್ಯನ್ ಕ್ರೀಡಾಕೂಟದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.
28 ವರ್ಷದ ಆಟಗಾರ್ತಿ, ಆಗಸ್ಟ್ 13ರಂದು ತರಬೇತಿಯ ಸಮಯದಲ್ಲಿ ಎಡ ಮೊಣ ಕಾಲಿಗೆ ಗಾಯವಾಗಿದೆ ಮತ್ತು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಹೇಳಿದ್ದಾರೆ.
“ಸ್ಕ್ಯಾನ್ ಮತ್ತು ಪರೀಕ್ಷೆಗಳನ್ನ ಮಾಡಿದ ನಂತರ, ದುರದೃಷ್ಟವಶಾತ್, ನಾನು ಚೇತರಿಸಿ ಕೊಳ್ಳಲು ಶಸ್ತ್ರಚಿಕಿತ್ಸೆಯೊಂದೇ ಆಯ್ಕೆ ಎಂದು ವೈದ್ಯರು ಹೇಳಿದ್ದಾರೆ” ಎಂದು ಫೋಗಟ್ ಬರೆದಿದ್ದಾರೆ, “ನಾನು ಆಗಸ್ಟ್ 17 ರಂದು ಮುಂಬೈನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾ ಗುತ್ತೇನೆ” ಎಂದು ಎಂದಿದ್ದಾರೆ.
“2018ರಲ್ಲಿ ಜಕಾರ್ತಾದಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವುದು ನನ್ನ ಕನಸಾಗಿತ್ತು. ಆದರೆ ದುರದೃಷ್ಟವ ಶಾತ್, ಈ ಗಾಯವು ಈಗ ನನ್ನ ಭಾಗವಹಿಸುವಿಕೆ ಯನ್ನ ತಡೆದಿದೆ. ಮೀಸಲು ಆಟಗಾರನನ್ನ ಏಷ್ಯನ್ ಗೇಮ್ಸ್’ಗೆ ಕಳುಹಿಸಲು ಸಂಬಂಧ ಪಟ್ಟ ಎಲ್ಲಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ” ಎಂದು ಹೇಳಿದರು.