Sunday, 15th December 2024

ರಾಜ್ಯ ಮಟ್ಟಕ್ಕೆ ಆಯ್ಕೆ

ಚಿಕ್ಕನಾಯಕನಹಳ್ಳಿ : ತುಮಕೂರು ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಆಶ್ರಯದಲ್ಲಿ ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಜರುಗಿದ ಜಿಲ್ಲಾ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಪಟ್ಟಣದ ವಿವಿಧ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾದ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

೧೪ ವರ್ಷ ವಯೋಮಿತಿ ಒಳಗೆ : ಮಹಮದ್ ಆಸಿಫ್ ೬೦ ಮೀಟರ್ ಪ್ರಥಮ, ಅರ್ಚನ ೬೦೦ ಮೀಟರ್ ದ್ವಿತೀಯ, ೧೬ ವರ್ಷ ವಯೋಮಿತಿ ಒಳಗೆ : ಭೂಮಿಕ ೩೦೦ ಮೀಟರ್ ಪ್ರಥಮ, ಅಮೃತ ೧೦೦ ಮೀಟರ್ ಪ್ರಥಮ, ಗೋಕುಲ್ ಲಾಂಗ್ ಜಂಪ್ ಪ್ರಥಮ, ೧೦೦ ಮೀಟರ್ ತೃತೀಯ, ದೀಕ್ಷಿತ್ ೩೦೦ ಮೀಟರ್ ತೃತೀಯ, ೨೦ ವರ್ಷ ವಯೋಮಿತಿ ಒಳಗೆ : ಬಾಬು ೧೦೦ ಮೀಟರ್ ಪ್ರಥಮ, ಶಶಾಂಕ್ ೨೦೦ ಮತ್ತು ೪೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಇವರು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.