ಪ್ರಸ್ತುತ
ಪ್ರಕಾಶ್ ಶೇಷರಾಘವಾಚಾರ್
ಹರ್ದೀಪ್ ಸಿಂಗ್ ನಿಜ್ಜಾರ್ ಎಂಬ ಖಲಿಸ್ಥಾನಿ ಭಯೋತ್ಪಾದಕನ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟೀನ್ ಟ್ರೊಡೋ ಗಂಭೀರ ಆರೋಪ ಮಾಡಿ ಕೆನಡಾದಲ್ಲಿನ ಭಾರತೀಯ ದೂತಾವಾಸದ ಅಧಿಕಾರಿಯನ್ನು ಉಚ್ಚಾಟಿಸಿ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ದಲ್ಲಿ ಬಹು ದೊಡ್ಡ ಬಿಕ್ಕಟ್ಟನ್ನು ಸೃಷ್ಟಿಸಿದ್ದಾರೆ. ಕೆನಡಾ ಆರೋಪ ವನ್ನು ಕಟುವಾಗಿ ನಿರಾಕರಿಸಿರುವ ಭಾರತ ತನ್ನ ರಾಜತಾಂತ್ರಿಕ ಸಿಬ್ಬಂದಿಯ ಉಚ್ಚಾಟನೆಗೆ ಪ್ರತಿಯಾಗಿ ಭಾರತ ದಲ್ಲಿರುವ ಕೆನಡಾದ ಹಿರಿಯ ರಾಜತಾಂತ್ರಿಕ ಸಿಬ್ಬಂದಿಯನ್ನು ಐದು ದಿನದೊಳಗೆ ಭಾರತ ಬಿಟ್ಟು ಹೋಗಲು ಆದೇಶಿಸಿ ಮೂರು ದಿನ ಕಳೆದಿದೆ.
ಕೆನಾಡದಲ್ಲಿ ಆಶ್ರಯ ಪಡೆದಿರುವ ಹಲವಾರು ಘೋಷಿತ ಭಯೋತ್ಪಾದಕರ ಪಟ್ಟಿಯನ್ನು ಅಲ್ಲಿನ ಸರಕಾರಕ್ಕೆ ನೀಡಿರುವ ಭಾರತ, ಅವರನ್ನು ಹಸ್ತಾಂತರಿಸಲು ಕೋರಿತ್ತು. ಆದರೆ ಟ್ರೊಡೊ ಆಡಳಿತ ಮಾನವ ಹಕ್ಕನ್ನು ನೆಪವಾಗಿಸಿ ಅವರ ಮೇಲೆ ಕ್ರಮ ಜರುಗಿಸಲು ನಿರಾಕರಿಸಿತ್ತು. ಭಾರತದ ಸಾರ್ವಭೌಮತ್ವಕ್ಕೆ ಅಪಾಯ ತಂದೊಡ್ಡುವ ಚಟುವಟಿಕೆಯಲ್ಲಿ ತೊಡಗಿರುವ ಖಲಿಸ್ಥಾನಿ ಗುಂಪುಗಳಿಗೆ ಕೆನಡಾ ಸರಕಾರದ ಆಶ್ರಯ ಭಾರತದ ಆಂತರಿಕ ಭದ್ರತೆಗೆ ತಲೆನೋವಾಗಿದೆ.
ಭಾರತ ತನ್ನ ನಾಗರಿಕರ ಸುರಕ್ಷತೆ ಕಾಪಾಡಿಕೊಳ್ಳಲು ಮೂರು ಹಂತದ ಶತ್ರುಗಳ ವಿರುದ್ಧ ಹೋರಾಡುತ್ತಿದೆ. ಮೊಲನೆಯದು ದೇಶದೊಳಗೇ ಇದ್ದು, ದೇಶದ ಅನ್ನವನ್ನೇ ತಿಂದು ದೇಶದ ವಿರುದ್ಧ ಕೆಲಸ ಮಾಡುತ್ತಿರುವವ ಆಂತರಿಕ ಶತ್ರುಗಳು. ಇನ್ನು ದೇಶದ ಹೊರಗಡೆಯಿದ್ದು ಭಾರತ ವಿರೋಧಿ ಚಟುವಟಿಕೆ ಮಾಡುತ್ತಿರುವವರು ಮತ್ತು ಮೂರನೆಯದಾಗಿ ನಮ್ಮೊಡನೆ ಕಾಲು ಕೆರೆದು ಜಗಳ ವಾಡಲು ಸದಾ ಕಾತರದಲ್ಲಿರುವ ಚೀನಾ ಮತ್ತು ಪಾಕಿಸ್ತಾನ. ಭಯೋತ್ಪಾದಕರು ತಮ್ಮ ಅಟ್ಟಹಾಸ ತೋರಿದಾಗ ಎರಡು ಬಾರಿ ಸರ್ಜಿಕಲ್ ಸ್ಟ್ರೈಕ್ ಕೈಗೊಂಡು ಭಾರತ ತನ್ನ ರಕ್ಷಣೆಗಾಗಿ ಗಡಿ ದಾಟಲು ಹಿಂಜರಿಯುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ. ಕಾಕತಾಳೀಯವೆಂಬಂತೆ ಕಳೆದ ಎಂಟು ತಿಂಗಳಲ್ಲಿ ಒಂಬತ್ತು ಭಾರತ ವಿರೋಧಿ ಶಕ್ತಿಗಳು ಅನುಮಾನಾಸ್ಪದವಾಗಿ ಪಾಕಿಸ್ತಾನ, ಆಫ್ಘಾನಿಸ್ಥಾನ, ಯುಕೆ, ಅಮೆರಿಕ ಮತ್ತು ಕೆನಡಾದಲ್ಲಿ ಮೃತಪಟ್ಟಿದ್ದಾರೆ.
ಹರ್ದೀಪ್ ಸಿಂಗ್ ನಿಜ್ಜಾರ್: ೪೫ ವರ್ಷದ ಹರ್ದೀಪ್ ಸಿಂಗ್ ನಿಜ್ಜಾರ್ ಜಲಂಧರ್ನ ಭರ್ಸಿಂಗ್ಪುರ ಗ್ರಾಮದವನು. ನಿಷೇಽತ ಖಲಿಸ್ಥಾನಿ ಉಗ್ರಗಾಮಿ ಸಂಘಟನೆ ‘ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್)ನ ಮಾಸ್ಟರ್ ಮೈಂಡ್. ಇವನು ಹಾಗೂ ನಿಷೇಧಿತ ಪ್ರತ್ಯೇಕತಾವಾದಿ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟಿಸ್ (SFJ)ನ ಭಾಗವಾಗಿದ್ದವನು. ೧೯೯೭ರಲ್ಲಿ ಕೆನಡಾಕ್ಕೆ ಪರಾರಿಯಾಗಿ ಸರ್ರೆಯಲ್ಲಿ ಆಶ್ರಯ ಪಡೆದಿದ್ದ ಭಯೋ ತ್ಪಾದಕ. ೨೦೦೭ ರಲ್ಲಿ ಪಂಜಾಬ್ನ ಲುಽಯಾನದಲ್ಲಿ ಆರು ಮಂದಿಯನ್ನು ಬಲಿ ತೆಗೆದುಕೊಂಡ ಮತ್ತು ಸುಮಾರು ೪೦ ಮಂದಿಯನ್ನು ಗಾಯಗೊಳಿಸಿದ ಸ್ಫೋಟವೂ ಸೇರಿದಂತೆ ಹಲವು ಪ್ರಕರಣ
ಗಳಲ್ಲಿ ನಿಜ್ಜರ್ ಬೇಕಾಗಿದ್ದ. ೨೦೨೦ರಲ್ಲಿ ಯುಎಪಿಎ ಕಾಯಿದೆ ಯಡಿ ಈತನನ್ನು ಭಯೋತ್ಪಾದಕ ಎಂದು ಘೋಷಿಸಲಾಗಿತ್ತು.
ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇವನನ್ನು ಅಧಿಕೃತವಾಗಿ ತಲೆಮರೆಸಿಕೊಂಡಿರುವ ವ್ಯಕ್ತಿ ಎಂದು ಸಾರಿ, ಇವನ ಬಗ್ಗೆ ಮಾಹಿತಿ ನೀಡಿದವರಿಗೆ ೧೦ ಲಕ್ಷ ರು.
ಬಹು ಮಾನ ನೀಡುವುದಾಗಿ ಘೋಷಿಸಿತ್ತು. ಈತನನ್ನು ಜೂನ್ ೧೮, ೨೦೨೩ ರಂದು ಕೆನಡಾದಲ್ಲಿ ಅಪರಿಚಿತ ವ್ಯಕ್ತಿಗಳು ಸರ್ರೆಯ ಗುರುದ್ವಾರದ ಹೊರಗೆ ಗುಂಡಿಕ್ಕಿ ಕೊಂದಿದ್ದರು.
ಹರವೀಂದರ್ ಸಿಂಗ್ ಸಂಧು ಅಲಿಯಾಸ್ ರಿಂಡಾ: ಇವನೊಬ್ಬ ಭಾರತದ ಮೋಸ್ಟ್ ವಾಂಟೆಡ್ ಕುಖ್ಯಾತ ಭಯೋತ್ಪಾದಕ. ಕಳೆದ ನವೆಂಬರ್ ತಿಂಗಳಲ್ಲಿ ಮಿತಿಮೀರಿದ ಮಾದಕ ವಸ್ತು ಸೇವನೆಯಿಂದ ಲಾಹೋರ್ನ ಮಿಲಿಟರಿ ಆಸ್ಪತ್ರೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ. ಎನ್ಐಎ ಇವನನ್ನು ರಾಷ್ಟ್ರೀಯ ಭದ್ರತೆಗೆ ಪ್ರಮುಖ ಅಪಾಯಕಾರಿ ವ್ಯಕ್ತಿ ಎಂದು ವರ್ಗೀಕರಿಸಿ ರಿಂಡಾನ ಬಗ್ಗೆ ಯಾವುದೇ ಮಾಹಿತಿ ನೀಡಿದವರಿಗೆ ೧೦ ಲಕ್ಷ ರು. ಬಹುಮಾನವನ್ನು ಘೋಷಿಸಿತ್ತು. ಮಹಾರಾಷ್ಟ್ರ, ಚಂಡೀಗಢ, ಹರಿಯಾಣ, ಪಶ್ಚಿಮ ಬಂಗಾಳದಲ್ಲಿ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ಬೇಕಾಗಿದ್ದ ವ್ಯಕ್ತಿಯಾಗಿದ್ದ. ಇವನು ದೊಡ್ಡ
ಪ್ರಮಾಣದ ಡ್ರಗ್ಸ್ / ಶಸಾಸಗಳ ಗಡಿಯಾಚೆಗಿನ ಕಳ್ಳಸಾಗಣೆಯಲ್ಲಿಯೂ ತೊಡಗಿಸಿಕೊಂಡಿದ್ದ. ಮೊಹಾಲಿ ಯಲ್ಲಿರುವ ಪಂಜಾಬ್ ಪೊಲೀಸ್ನ ಇಂಟೆಲಿಜೆನ್ಸ್ ಹೆಡ್ ಕ್ವಾರ್ಟರ್ಸ್ನ ಮೇಲೆ ಆರ್ಪಿಜಿ ದಾಳಿಯ ಮಾಸ್ಟರ್ ಮೈಂಡ್ ಇವನಾಗಿದ್ದ.
ಪೊಲೀಸ್ ಮೂಲಗಳ ಪ್ರಕಾರ, ರಿಂಡಾ ನೇಪಾಳದ ಮೂಲಕ ಭಾರತದಿಂದ ಪಲಾಯನ ಮಾಡಿ ೨೦೨೦ ರಲ್ಲಿ ನಕಲಿ ಪಾಸ್ಪೋರ್ಟ್ನಲ್ಲಿ ಪಾಕಿಸ್ತಾನವನ್ನು
ತಲುಪಿದ್ದನು.ಪಾಕಿಸ್ತಾನ ಇಂಟರ್-ಸರ್ವೀಸಸ್ ಇಂಟೆಲಿ ಜೆನ್ಸ್ (ಐಎಸ್ಐ) ಇವನಿಗೆ ಬೆಂಬಲ ಮತ್ತು ಆಶ್ರಯ ನೀಡಿತ್ತು ಎಂದು ನಂಬಲಾಗಿತ್ತು. ಪಾಕಿಸ್ತಾನದ ಆಸ್ಪತ್ರೆಯಲ್ಲಿ ಅಂಗಾಂಗ ವೈಫಲ್ಯದಿಂದ ಮೃತಪಟ್ಟ ಎಂದು ವರದಿಗಳು ಸೂಚಿಸುತ್ತವೆಯಾದರೂ, ಗುಪ್ತಚರ ಮೂಲಗಳ ಪ್ರಕಾರ ಇವನು ವಿಷಪ್ರಾಶನದಿಂದ
ಮೃತಪಟ್ಟ ಎಂದು ಹೇಳಲಾಗುತ್ತಿದೆ.
ಬಶೀರ್ ಅಹಮದ್: ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ನ ಸ್ವಯಂಘೋಷಿತ ಕಮಾಂಡರ್ ಬಶೀರ್ ಅಹ್ಮದ್ ಪೀರ್ನನ್ನು ಪಾಕಿಸ್ತಾನದ
ರಾವಲ್ಪಿಂಡಿಯಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದರು. ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ವನಾದ ಇವನು ೧೫ ವರ್ಷ ಗಳಿಂದ ಪಾಕಿಸ್ತಾನದಲ್ಲಿ ನೆಲೆಸಿ ದ್ದನು. ಗಡಿ ನಿಯಂತ್ರಣ ರೇಖೆಯ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ಭಯೋತ್ಪಾ ದಕರನ್ನು ಕಳುಹಿಸಿಕೊಡುವ ಉಸ್ತುವಾರಿ ವಹಿಸಿದ್ದ ಪೀರ್, ಭಯೋತ್ಪಾದಕ ಚಟುವಟಿಕೆ ಗಳಲ್ಲಿ ಆತನ ಪಾತ್ರಕ್ಕಾಗಿ ಕೇಂದ್ರ ಸರಕಾರವು ಕಳೆದ ವರ್ಷ ಅಕ್ಟೋಬರ್ನಲ್ಲಿ ಇವನನ್ನು ಯುಎಪಿಎ ಕಾಯಿದೆಯ ಅಡಿಯಲ್ಲಿ ಭಯೋ ತ್ಪಾದಕ ಎಂದು ಘೋಷಿಸಿತು.
ಪಾಕಿಸ್ತಾನದ ಮಾಧ್ಯಮ ವರದಿಗಳ ಪ್ರಕಾರ, ಪೀರ್ ಅಲಿಯಾಸ್ ಇಮ್ತಿಯಾಜ್ ಆಲಂನನ್ನು ರಾವಲ್ಪಿಂಡಿಯ ಅಂಗಡಿಯೊಂದರ ಹೊರಗೆ ದುಷ್ಕರ್ಮಿಗಳು ಪಾಯಿಂಟ್ ಬ್ಲಾಂಕ್ ರೇಂಜ್ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.
ಹರ್ಪೀತ್ ಸಿಂಗ್ ಅಲಿಯಾಸ್ ಹ್ಯಾಪಿ ಸಂಗೇರಾ: ‘ಹ್ಯಾಪಿ ಸಂಗೇರಾ’ ಎಂದೇ ಗುರುತಿಸಿಕೊಂಡಿದ್ದ ಇಟಲಿ ಮೂಲದ ಹರ್ಪ್ರೀತ್ ಸಿಂಗ್ ಐಎಸ್ಐ ಬೆಂಬಲಿತ
ದರೋಡೆಕೋರನಲ್ಲದೆ ಭಯೋತ್ಪಾದಕ ಕೂಡ. ಬರ್ನಾಲಾ ಜಿಲ್ಲೆಯ ಸಂಘೇರಾ ಗ್ರಾಮದವನು. ಕೊಲೆ, ಡ್ರಗ್ಸ್ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಮತ್ತು ಪಂಜಾಬ್ ನಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ನಿರುದ್ಯೋಗಿ ಯುವಕರನ್ನು ಬಳಸಿಕೊಂಡಿರುವ ಆರೋಪದಲ್ಲಿ ಬೇಕಾಗಿದ್ದವನು. ಪಾಕಿಸ್ತಾನ ಮೂಲದ ರಿಂಡಾನ ನಿಕಟ ಸಹವರ್ತಿ ಯಾಗಿದ್ದ. ಪಾಕಿಸ್ತಾನ ದಲ್ಲಿ ರಿಂಡಾ ಹತ್ಯೆಯಾದ ಮರು ದಿನವೆ ಇಟಲಿಯಲ್ಲಿ ಹ್ಯಾಪಿ ಸಂಘೇರಾ ಅಪರಿಚಿತರ ಗುಂಡಿಗೆ ಬಲಿಯಾದನು.
ಪರಮಜೀತ್ ಸಿಂಗ್ ಪಂಜವಾರ: ಖಲಿಸ್ಥಾನಿ ಕಮಾಂಡೊ ಫೋರ್ಸ್ನ ಪರಮಜೀತ್ ಸಿಂಗ್ ಪಂಜುವಾರ ಮೇ೬ರಂದು ಲಾಹೋರ್ನ ಜೋಹರ್ ನಗರದಲ್ಲಿ ಅಪರಿಚಿತರ ಗುಂಡಿಗೆ ಬಲಿಯಾದ. ೨೦೦೨ರಲ್ಲಿ ಭಾರತಕ್ಕೆ ಬೇಕಾಗಿದ್ದ ೨೦ ಕುಖ್ಯಾತ ಅಪರಾಧಿಗಳ ಮತ್ತು ಭಯೋತ್ಪಾದಕರ ಪಟ್ಟಿಯನ್ನು ಪಾಕಿಸ್ತಾನಕ್ಕೆ ಸಲ್ಲಿಸಲಾಗಿತ್ತು. ಆ ಪಟ್ಟಿಯಲ್ಲಿ ಇವನೂ ಒಬ್ಬ. ಹಲವು ಬಾರಿ ಇವನನ್ನು ಭಾರತಕ್ಕೆ ಹಸ್ತಾಂತರಿಸಲು ಪಾಕಿಸ್ತಾನಕ್ಕೆ ಅಽಕೃತವಾಗಿ ಕೋರಲಾಗಿತ್ತು. ೨೦೧೦ರಲ್ಲಿ
ಪಟಿಯಾಲ ಮತ್ತು ಅಂಬಾಲಾ ನಗರಗಳಲ್ಲಿ ನಡೆದ ಅವಳಿ ಬಾಂಬ್ ಸ್ಫೋಟದ ಪ್ರಮುಖ ಸಂಚುಕೋರನಾಗಿದ್ದ.
ಇತ್ತೀಚಿನ ದಿನಗಳಲ್ಲಿ, ಪರಮ್ಜೀತ್ ಮಾನವರಹಿತ ಡ್ರೋನ್ಗಳ ಮೂಲಕ ಮಾದಕವಸ್ತು ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ತೊಡಗಿದ್ದ.
ಸೈಯದ್ ಖಾಲೀದ್ ರಾಜಾ: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಅಲ್ ಬದರ್ನ ಮಾಜಿ ಕಮಾಂಡರ್ ಆಗಿದ್ದ ಸೈಯದ್ ಖಾಲಿದ್ ರಜಾನನ್ನು
ಫೆಬ್ರವರಿ ೨೬ ರಂದು, ಅಪರಿಚಿತರು ಪಾಕಿಸ್ತಾನದ ಕರಾಚಿ ಯಲ್ಲಿನ ಅವನ ನಿವಾಸದ ಹೊರಗೆ ಗುಂಡಿಕ್ಕಿ ಕೊಂದರು. ಅಲ್ ಬದರ್ವಿದೇಶಿ ಭಯೋತ್ಪಾದಕ ಸಂಘಟನೆಯು ‘ಕಾಶ್ಮೀರಿ ಸ್ವಾತಂತ್ರ್ಯ ಹೋರಾಟ’ ಬಲಪಡಿಸಲು ಮತ್ತು ಭಾರತದಿಂದ ಜಮ್ಮು ಮತ್ತು ಕಾಶ್ಮೀರವನ್ನು ‘ವಿಮೋಚನೆ’ ಮಾಡಿ ಅದನ್ನು ಪಾಕಿಸ್ತಾನ ದೊಂದಿಗೆ ವಿಲೀನಗೊಳಿಸುವ ಉದ್ದೇಶದಿಂದ ರಚಿಸಲಾಗಿದ್ದ ಸಂಘಟನೆ. ಕಾರ್ಗಿಲ್ ಯುದ್ಧ ಸಂದರ್ಭದಲ್ಲಿಯೂ ಅಲ್ ಬದರ್, ಪಾಕಿಸ್ತಾನದ ಪರವಾಗಿ ಹೋರಾಟ ಮಾಡಿತ್ತು. ಭಾರತಕ್ಕೆ ಮೋಸ್ಟ್ ವಾಂಟೆಂಡ್ ಪಟ್ಟಿಯಲ್ಲಿದ್ದ ಇವನು ಅನುಮಾನಾಸ್ಪದವಾಗಿ ಹತನಾದ.
ಅವತಾರ್ ಸಿಂಗ್ ಖಾಂಡ: ಖಲಿಸ್ಥಾನಿ ಚಳುವಳಿಯ ಮೂಲಭೂತವಾದಿಯಾದ ಇವನು ಭಯೋತ್ಪಾದಕ ಮತ್ತು ಭಾರತ ವಿರೋಧಿ ಚಟುವಟಿಕೆಯಲ್ಲಿ ಸಕ್ರಿಯ ನಾಗಿದ್ದವ. ಸ್ಟೂಡೆಂಟ್ ವೀಸಾದಲ್ಲಿ ಬ್ರಿಟನ್ಗೆ ತೆರಳಿ ಅಲ್ಲಿಯೇ ನೆಲಸಿದ್ದ. ಇತ್ತೀಚೆಗೆ ಲಂಡನ್ನ ಭಾರತದ ದೂತಾವಾಸ ಕಚೇರಿಯ ಮೇಲೆ ಹಾರಿಸಿದ್ದ ತ್ರಿವರ್ಣ ಧ್ವಜವನ್ನು ತೆಗೆದು ಖಲಿಸ್ಥಾನಿ ಧ್ವಜವನ್ನು ಹಾಕಿದ ಆರೋಪದಲ್ಲಿ ಇವನೂ ಒಬ್ಬ ನಾಗಿದ್ದನು. ಜೂನ್ನಲ್ಲಿ ಅನಾರೋಗ್ಯ ನಿಮಿತ್ತ ಲಂಡನ್ ನಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದಾಗ ಅನುಮಾನಾಸ್ಪದವಾಗಿ ಮೃತಪಟ್ಟ. ಮೂಲಗಳ ಪ್ರಕಾರ ಇವನು ವಿಷ ಸೇವನೆಯಿಂದ ಮೃತಪಟ್ಟಿದ್ದು ಎಂದು ಹೇಳುತ್ತಾರೆ.
ಅಜಾಜ್ ಅಹಮದ್: ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದ ಇವನು ಅಪರಿಚಿತರ ಗುಂಡಿಗೆ ಬಲಿಯಾದ. ಅಜಾಜ್ ಅಹಮದ್ ಅಲಿಯಾಸ್ ಅಬು ಉಸ್ಮಾನ್ ಅಲ್ ಕಾಶ್ಮೀರಿ ಅಫ್ಘಾನಿಸ್ಥಾನದ ಕುನಾರ್ ಜಿಯಲ್ಲಿ ಹತನಾದನು.
ಸೈಯದ್ ಖಾಲಿದ್ ನೂರ್: ಫೆಬ್ರವರಿಯಲ್ಲಿ ಸೈಯದ್ ಖಾಲೀದ್ ನೂರ್ನನ್ನು ಕರಾಚಿಯಲ್ಲಿ ಅಪರಿಚಿತರು ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಭಾರತ ವಿರೋಧಿಗಳನ್ನು ಭಾರತದ ಗುಪ್ತಚರರೇ ಹತ್ಯೆ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಆದರೆ ಈ ಭಾರತ ವಿರೋಧಿಗಳು ಕಳೆದ ಒಂಬತ್ತು ತಿಂಗಳಲ್ಲಿ ಅನುಮಾನಾಸ್ಪದವಾಗಿ ಹತ್ಯೆಯಾಗಿರುವುದು ಭಾರತ ವಿರೋಧಿ ಶಕ್ತಿಗಳನ್ನು ತಲ್ಲಣಗೊಳಿಸಿದೆ. ಮುಂಬಯಿಗೆ ಬಂದು ನರಮೇಧ ಮಾಡಿದ ಶಕ್ತಿಗಳ ವಿರುದ್ಧ ಕಠಿಣ ಕಾರ್ಯಾಚರಣೆ ಮಾಡಲು ಎದೆಗಾರಿಕೆ ತೋರದ ದುರ್ಬಲ ನೀತಿಯು ಇದೀಗ ಬದಲಾಗಿದೆ. ಬದಲಾಗಿರುವ ಭಾರತದಲ್ಲಿ ಶತ್ರುಗಳು ಆಕ್ರಮಣ ಮಾಡುವು ದನ್ನು ಕಾಯುವ ದುರ್ಬಲ ನೀತಿಯ ಬದಲಾಗಿ ಶತ್ರುಗಳು ಇರುವ ತಾಣಗಳಿಗೆ ಹೋಗಿ ಬೇಟೆಯಾಡುವ ರಣನೀತಿಯು ಭಾರತ ವಿರೋಧಿಗಳ ಹೆಡ್ಡೆಮುರಿ ಕಟ್ಟುತ್ತಿದೆ ಎಂದು ರಕ್ಷಣಾ ತಜ್ಞರ ಅಂಬೋಣ.