Sunday, 15th December 2024

ರೈತರ ಆರಾಧ್ಯ ದೈವ ಬಲರಾಮರ ಜಯಂತಿ

ತುಮಕೂರು: ಭಾರತೀಯ ಕಿಸಾನ್ ಸಂಘ, ಕರ್ನಾಟಕ ದಕ್ಷಿಣ ಪ್ರಾಂತ್ಯದ ವತಿಯಿಂದ  ರೈತರ ಆರಾಧ್ಯ ದೈವ ಭಗವಾನ್ ಬಲರಾಮರ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದು ಭಾರತೀಯ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಾಸರಘಟ್ಟ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಿಸಾನ್ ಸಂಘದಿ0ದ ಪ್ರಮುಖವಾಗಿ ಬಲರಾಮ ಜಯಂತಿ, ಗೋಪೂಜಾ, ಭಾರತ್ ಮಾತೆ ಪೂಜೆ ಮತ್ತು ಸ್ಥಾಪನಾ ದಿನ ಕಾರ್ಯ ಕ್ರಮವನ್ನು ಸಪ್ತಾಹದ ರೀತಿ ಆಚರಿಸಿಕೊಂಡು ಬರಲಾಗುತ್ತಿದೆ. ಮುಂದಿನ 7 ದಿನ ಗಳಲ್ಲಿ ತುಮಕೂರು ಜಿಲ್ಲೆಯ 150ಕ್ಕೂ ಹೆಚ್ಚು ಗ್ರಾಮಸಮಿತಿಗಳಲ್ಲಿಯೂ ಈ ಕಾರ್ಯಕ್ರಮ ಜರುಗಲಿದೆ ಎಂದರು.
ಮಹಾಭಾರತದಲ್ಲಿ ಬರುವ ಬಲರಾಮ ಓರ್ವ ಆದರ್ಶ ಪುರುಷ. ರೈತನಾಗಿದ್ದು ಕೊಂಡು,ಇಡೀ ಜೀವನ ಪರ್ಯಂತ ಕೃಷಿಕನಾಗಿ ಅನ್ನ ಬೆಳೆದು ನೀಡಿದ್ದನ್ನು ಹೊರತು ಪಡಿಸಿದರೆ ಎಲ್ಲಿಯೂ ರಾಜಕೀಯ ಮಾಡಲಿಲ್ಲ. ಶ್ರೀಕೃಷ್ಣನಿಗಿಂತ ಹೆಚ್ಚು ಬಲಶಾಲಿ ಯಾಗಿದ್ದರೂ ಸಹ ಯುದ್ದದಲ್ಲಿ ಪಾಲ್ಗೊಳ್ಳದೆ ಶಾಂತಿಯನ್ನು ಬಯಸಿದ ವೀರ. ಹಾಗಾಗಿ ಇಂತಹ ಆದರ್ಶ ಪುರುಷನ ಜಯಂತಿ ಯನ್ನು ಭಾರತೀಯ ಕಿಸಾನ್ ಸಂಘ ಸಪ್ತಾಯದ ರೀತಿಯಲ್ಲಿ ಆಚರಿಸಲಾಗುತ್ತಿದೆ.
ಭಾರತೀಯ ಕಿಸಾನ್ ಸಂಘದ ಸಂಘಟನೆ, ರಚನಾತ್ಮಕ ಅಂಶಗಳು ಹಾಗು ಹೋರಾಟ ಈ ಮೂರು ಅಂಶಗಳನ್ನು ಆಯಾಯ ಕಲಾಕ್ಕೆ ತಕ್ಕಂತೆ ಮಾಡುತ್ತಾ ಬಂದಿದೆ.ಜಿಲ್ಲೆಯ ಶಿರಾ ತಾಲೂಕು ಯಲದಕುಂಟೆ ಗ್ರಾಮದ ಹನುಮಂತಯ್ಯ ಎಂಬ ರೈತನ 2 ವರ್ಷ 350 ಅಡಿಕೆ ಗಿಡಗಳು ದ್ವೇಷಕ್ಕೆ ಬಲಿಯಾದ ಸಂದರ್ಭದಲ್ಲಿ ಸಂಬಂಧಪಟ್ಟವರ ಜೊತೆ ಮಾತನಾಡಿ, ಆತನಿಗೆ ಪರಿಹಾರ ಕೊಡಿಸುವ ಕೆಲಸ ಮಾಡಿದ್ದೇವೆ.ಇದರಿಂದ ಗಿಡಗಳನ್ನು ಕಳೆದುಕೊಂಡ ರೈತನಿಗೆ ಪರಿಹಾರದ ದೊರೆತರೆ, ದ್ವೇಷಕ್ಕೆ ಗಿಡ ಕಡಿದ ರೈತ, ತನ್ನ ತಪ್ಪಿಗೆ ದಂಡ ತೆತ್ತಿದ್ದಾನೆ. ಇಂತಹ ಅನೇಕ ಕೆಲಸಗಳನ್ನು ಭಾರತೀಯ ಕಿಸಾನ್ ಸಂಘ ಮಾಡುತ್ತಿದೆ ಎಂದು  ತಿಳಿಸಿ ದರು.
ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದ್ದು, ಪೂರ್ವ ಮುಂಗಾರು ಮತ್ತು ಮುಂಗಾರು ಎರಡು ಕೈಕೊಟ್ಟಿದ್ದು, ಶೇ30ರಷ್ಟು ಬಿತ್ತನೆಯಾಗಿಲ್ಲ.ಬಿತ್ತನೆಯಾದ ಒಟ್ಟಾರೆ ಪ್ರದೇಶದ ಶೇ65ರಷ್ಟು ಬೆಳೆ ಹಾನಿಯಾಗಿದೆ. ಹಾಗಾಗಿ ಸರಕಾರ ಭೀಕ್ಷೆಯ ರೂಪದಲ್ಲಿ ಪರಿಹಾರ ನೀಡದೆ ವೈಜ್ಞಾನಿಕ ಪರಿಹಾರ ನೀಡಬೇಕು.ಹಾಗೆಯೇ ಕೃಷಿ ಕೂಲಿ ಕಾರ್ಮಿಕರಿಗೆ ಪರಿಹಾರ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತರಬೇಕೆಂದು   ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿಜಯಕುಮಾರ್,ಮಹಿಳಾ ಘಟಕದ ಬಿ.ಎನ್.ನವೀನ ಸದಾಶಿವಯ್ಯ,ಪ್ರಾಂತ ಕಾರ್ಯದರ್ಶಿ ಸಂತೋಷ, ಜಿಲ್ಲಾ ಕೋಶಾಧ್ಯಕ್ಷ ಮಹಲಿಂಗಯ್ಯ, ಪ್ರಾಂತ ಕಾರ್ಯದರ್ಶಿ ಸುರೇಶ್, ಡಾ.ಮೋಹನ್‌ಕುಮಾರ್,ಸಿದ್ದಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.
ಪೋಟೋ: ಸುದ್ದಿಗೋಷ್ಠಿಯಲ್ಲಿ ಕಿಸಾನ್ ಸಂಘದ  ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಾಸರಘಟ್ಟ ಮಾತನಾಡಿದರು.