Thursday, 24th October 2024

ಒಂಬತ್ತು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ

ವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಒಂಬತ್ತು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಿದ್ದಾರೆ.

ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಬಿಹಾರ, ಪಶ್ಚಿಮ ಬಂಗಾಳ, ಕೇರಳ, ಒಡಿಶಾ, ಜಾರ್ಖಂಡ್ ಮತ್ತು ಗುಜರಾತ್ ರಾಜ್ಯಗಳು ವಂದೇ ಭಾರತ್ ರೈಲುಗಳಿಂದ ಪ್ರಯೋಜನ ಪಡೆಯಲಿವೆ.

ಈ ಬಳಿಕ ವೀಡಿಯೋ ಕಾನ್ಫೆರೆನ್ಸ್ ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ಮೂಲಸೌಕರ್ಯ ಅಭಿವೃದ್ಧಿ ಯು 140 ಕೋಟಿ ಭಾರತೀಯರ ಆಕಾಂಕ್ಷೆ ಗಳಿಗೆ ಹೊಂದಿಕೆಯಾಗಿದೆ. ವಂದೇ ಭಾರತ್ ರೈಲುಗಳು ದೇಶದ ಪ್ರತಿಯೊಂದು ಭಾಗ ವನ್ನು ಸಂಪರ್ಕಿಸುವ ದಿನ ದೂರವಿಲ್ಲ ಎಂದರು.

9 ರೈಲುಗಳ ವೇಳಾಪಟ್ಟಿ ಹಾಗೂ ಸಂಪೂರ್ಣ ವಿವರ

1.20665/20666 ಚೆನ್ನೈ ಎಗ್ಮೋರ್ – ತಿರುನೆಲ್ವೇಲಿ ವಂದೇ ಭಾರತ್ ಎಕ್ಸ್ಪ್ರೆಸ್

ರೈಲು ಸಂಖ್ಯೆ 20666 ತಿರುನೆಲ್ವೇಲಿ-ಚೆನ್ನೈ ಎಗ್ಮೋರ್ ವಂದೇ ಭಾರತ್ ಎಕ್ಸ್ಪ್ರೆಸ್ ತಿರು ನೆಲ್ವೇಲಿಯಿಂದ ಬೆಳಿಗ್ಗೆ 6:00 ಗಂಟೆಗೆ ಹೊರಟು ಮಧ್ಯಾಹ್ನ 1:50 ಕ್ಕೆ ಚೆನ್ನೈ ಎಗ್ಮೋರ್ ತಲುಪಲಿದೆ.

ರೈಲು ಸಂಖ್ಯೆ 20665 ಚೆನ್ನೈ-ತಿರುನೆಲ್ವೇಲಿ ವಂದೇ ಭಾರತ್ ಎಕ್ಸ್ ಪ್ರೆಸ್ ಚೆನ್ನೈನಿಂದ ಮಧ್ಯಾಹ್ನ 2:50ಕ್ಕೆ ಹೊರಟು ರಾತ್ರಿ 10.40ಕ್ಕೆ ತಿರುನೆಲ್ವೇಲಿ ತಲುಪಲಿದೆ. ಮಂಗಳವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ರೈಲು ಚಲಿಸುತ್ತದೆ.

2.20677/20678 ಎಂಜಿಆರ್ ಚೆನ್ನೈ-ವಿಜಯವಾಡ ವಂದೇ ಭಾರತ್ ಎಕ್ಸ್ಪ್ರೆಸ್

ರೈಲು ಸಂಖ್ಯೆ 20677 ಎಂಜಿಆರ್ ಚೆನ್ನೈ-ವಿಜಯವಾಡ ವಂದೇ ಭಾರತ್ ಎಕ್ಸ್ಪ್ರೆಸ್ ಚೆನ್ನೈನಿಂದ ಬೆಳಿಗ್ಗೆ 5:30 ಕ್ಕೆ ಹೊರಟು ಮಧ್ಯಾಹ್ನ 12:10 ಕ್ಕೆ ವಿಜಯವಾಡವನ್ನು ತಲುಪಲಿದೆ.

ರೈಲು ಸಂಖ್ಯೆ 20678 ವಿಜಯವಾಡ-ಎಂಜಿಆರ್ ಚೆನ್ನೈ ವಂದೇ ಭಾರತ್ ಎಕ್ಸ್ ಪ್ರೆಸ್ ವಿಜಯವಾಡದಿಂದ ಮಧ್ಯಾಹ್ನ 3.20ಕ್ಕೆ ಹೊರಟು ರಾತ್ರಿ 10.00ಕ್ಕೆ ಎಂಜಿಆರ್ ಚೆನ್ನೈ ತಲುಪಲಿದೆ. ಮಂಗಳವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ರೈಲು ಚಲಿಸುತ್ತದೆ.

3.22348/22347 ಪಾಟ್ನಾ-ಹೌರಾ ವಂದೇ ಭಾರತ್ ಎಕ್ಸ್ಪ್ರೆಸ್

ರೈಲು ಸಂಖ್ಯೆ 22348 ಪಾಟ್ನಾ-ಹೌರಾ ವಂದೇ ಭಾರತ್ ಎಕ್ಸ್ಪ್ರೆಸ್ ಪಾಟ್ನಾದಿಂದ ಬೆಳಿಗ್ಗೆ 8:00 ಗಂಟೆಗೆ ಹೊರಟು ಮಧ್ಯಾಹ್ನ 2:35 ಕ್ಕೆ ಹೌರಾ ತಲುಪಲಿದೆ.

ರೈಲು ಸಂಖ್ಯೆ 22347 ಹೌರಾ-ಪಾಟ್ನಾ ವಂದೇ ಭಾರತ್ ಎಕ್ಸ್ ಪ್ರೆಸ್ ಹೌರಾದಿಂದ ಮಧ್ಯಾಹ್ನ 3:50ಕ್ಕೆ ಹೊರಟು ರಾತ್ರಿ 10.40ಕ್ಕೆ ಪಾಟ್ನಾ ತಲುಪಲಿದೆ. ಬುಧವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ರೈಲು ಸಂಚರಿಸಲಿದೆ.

4.20703/20704 ಸಿಕಂದರಾಬಾದ್ (ಕಾಚಿಗುಡ) – ಬೆಂಗಳೂರು (ಯಶವಂತಪುರ) ವಂದೇ ಭಾರತ್ ಎಕ್ಸ್ಪ್ರೆಸ್

ರೈಲು ಸಂಖ್ಯೆ 20703 ಸಿಕಂದರಾಬಾದ್ (ಕಾಚಿಗುಡ) – ಬೆಂಗಳೂರು (ಯಶವಂತಪುರ) ವಂದೇ ಭಾರತ್ ಎಕ್ಸ್ಪ್ರೆಸ್ ಸಿಕಂದರಾಬಾದ್ (ಕಾಚಿಗುಡ) ನಿಂದ ಬೆಳಿಗ್ಗೆ 5:30 ಕ್ಕೆ ಹೊರಟು ಮಧ್ಯಾಹ್ನ 2:00 ಕ್ಕೆ ಬೆಂಗಳೂರು (ಯಶವಂತಪುರ) ತಲುಪಲಿದೆ.

ರೈಲು ಸಂಖ್ಯೆ 20704 ಬೆಂಗಳೂರು (ಯಶವಂತಪುರ) – ಸಿಕಂದರಾಬಾದ್ (ಕಾಚಿಗುಡ) ವಂದೇ ಭಾರತ್ ಎಕ್ಸ್ಪ್ರೆಸ್ ಬೆಂಗಳೂರಿನಿಂದ ಮಧ್ಯಾಹ್ನ 2:45 ಕ್ಕೆ ಹೊರಟು ರಾತ್ರಿ 11:15 ಕ್ಕೆ ಸಿಕಂದರಾಬಾದ್ (ಕಾಚಿಗುಡ) ತಲುಪಲಿದೆ. ಬುಧವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ರೈಲು ಚಲಿಸುತ್ತದೆ.

5.20835/20836 ರೂರ್ಕೆಲಾ – ಪುರಿ ವಂದೇ ಭಾರತ್ ಎಕ್ಸ್ಪ್ರೆಸ್

ರೈಲು ಸಂಖ್ಯೆ 20836 ಪುರಿ-ರೂರ್ಕೆಲಾ ವಂದೇ ಭಾರತ್ ಎಕ್ಸ್ಪ್ರೆಸ್ ಪುರಿಯಿಂದ ಬೆಳಿಗ್ಗೆ 5:00 ಗಂಟೆಗೆ ಹೊರಟು ಮಧ್ಯಾಹ್ನ 12:40 ಕ್ಕೆ ರೂರ್ಕೆಲಾವನ್ನು ತಲುಪಲಿದೆ.

ರೈಲು ಸಂಖ್ಯೆ 20835 ರೂರ್ಕೆಲಾ-ಪುರಿ ವಂದೇ ಭಾರತ್ ಎಕ್ಸ್ ಪ್ರೆಸ್ ರೂರ್ಕೆಲಾದಿಂದ ಮಧ್ಯಾಹ್ನ 2:10ಕ್ಕೆ ಹೊರಟು ರಾತ್ರಿ 9:40ಕ್ಕೆ ಪುರಿ (ಕಾಚಿಗುಡ) ತಲುಪಲಿದೆ. ಮಾರ್ಗದಲ್ಲಿ ಇದು ಖುರ್ದಾ ರಸ್ತೆ, ಭುವನೇಶ್ವರ, ಕಟಕ್, ಧೆಂಕನಲ್, ತಲ್ಚೇರ್ ರಸ್ತೆ, ಅಂಗುಲ್, ರಾಯ್ರಾಖೋಲ್, ಸಂಬಲ್ಪುರ ನಗರ ಮತ್ತು ಜಾರ್ಸುಗುಡದಲ್ಲಿ ನಿಲ್ಲುತ್ತದೆ. ಈ ರೈಲು ಶನಿವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ಸಂಚಾರ.

6.20631/20632 ಕಾಸರಗೋಡು-ತಿರುವನಂತಪುರಂ ವಂದೇ ಭಾರತ್ ಎಕ್ಸ್ಪ್ರೆಸ್

ರೈಲು ಸಂಖ್ಯೆ 20631 ಕಾಸರಗೋಡು-ತಿರುವನಂತಪುರಂ ವಂದೇ ಭಾರತ್ ಎಕ್ಸ್ಪ್ರೆಸ್ ಕಾಸರಗೋಡಿನಿಂದ ಬೆಳಿಗ್ಗೆ 7:00 ಗಂಟೆಗೆ ಹೊರಟು ಮಧ್ಯಾಹ್ನ 3:05 ಕ್ಕೆ ತಿರುವನಂತಪುರಂ ತಲುಪಲಿದೆ.

ರೈಲು ಸಂಖ್ಯೆ 20632 ತಿರುವನಂತಪುರಂ-ಕಾಸರಗೋಡು ವಂದೇ ಭಾರತ್ ಎಕ್ಸ್ ಪ್ರೆಸ್ ತಿರುವನಂತಪುರಂನಿಂದ ಸಂಜೆ 4.05ಕ್ಕೆ ಹೊರಟು ರಾತ್ರಿ 11.55ಕ್ಕೆ ಕಾಸರಗೋಡಿಗೆ ತಲುಪಲಿದೆ.

ಕಾಸರಗೋಡು-ತಿರುವನಂತಪುರಂ ವಂದೇ ಭಾರತ್ ರೈಲು ಮಂಗಳವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ಚಲಿಸಿದರೆ, ತಿರುವನಂತಪುರಂ-ಕಾಸರಗೋಡು ವಂದೇ ಭಾರತ್ ಸೋಮವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಚಲಿಸುತ್ತದೆ.

7.20979/20980 ಉದಯಪುರ-ಜೈಪುರ ವಂದೇ ಭಾರತ್ ಎಕ್ಸ್ಪ್ರೆಸ್

ರೈಲು ಸಂಖ್ಯೆ 20979 ಉದಯಪುರ-ಜೈಪುರ ವಂದೇ ಭಾರತ್ ಎಕ್ಸ್ಪ್ರೆಸ್ ಉದಯಪುರದಿಂದ ಬೆಳಿಗ್ಗೆ 7:50 ಕ್ಕೆ ಹೊರಟು ಮಧ್ಯಾಹ್ನ 2:05 ಕ್ಕೆ ಜೈಪುರವನ್ನು ತಲುಪಲಿದೆ.

ರೈಲು ಸಂಖ್ಯೆ 20980 ಜೈಪುರ-ಉದಯಪುರ ವಂದೇ ಭಾರತ್ ಎಕ್ಸ್ ಪ್ರೆಸ್ ಜೈಪುರದಿಂದ ಮಧ್ಯಾಹ್ನ 3:45ಕ್ಕೆ ಹೊರಟು ರಾತ್ರಿ 10:00ಕ್ಕೆ ಉದಯಪುರವನ್ನು ತಲುಪಲಿದೆ. ಮಂಗಳವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ರೈಲು ಚಲಿಸುತ್ತದೆ.

8.22926/22925 ಜಾಮ್ನಗರ್-ಅಹಮದಾಬಾದ್ (ಸಬರಮತಿ) ವಂದೇ ಭಾರತ್ ಎಕ್ಸ್ಪ್ರೆಸ್

ರೈಲು ಸಂಖ್ಯೆ 22926 ಜಾಮ್ನಗರ್-ಅಹಮದಾಬಾದ್ (ಸಬರಮತಿ) ವಂದೇ ಭಾರತ್ ಎಕ್ಸ್ಪ್ರೆಸ್ ಜಾಮ್ನಗರದಿಂದ ಬೆಳಿಗ್ಗೆ 5:30 ಕ್ಕೆ ಹೊರಟು ಬೆಳಿಗ್ಗೆ 10:10 ಕ್ಕೆ ಅಹಮದಾಬಾದ್ ತಲುಪಲಿದೆ.

ರೈಲು ಸಂಖ್ಯೆ 22925 ಅಹಮದಾಬಾದ್-ಜಾಮ್ನಗರ್ ವಂದೇ ಭಾರತ್ ಎಕ್ಸ್ಪ್ರೆಸ್ ಅಹಮದಾಬಾದ್ನಿಂದ ಸಂಜೆ 5:55ಕ್ಕೆ ಹೊರಟು ರಾತ್ರಿ 10.35ಕ್ಕೆ ಜಾಮ್ನಗರವನ್ನು ತಲುಪಲಿದೆ.

ಜಾಮ್ನಗರ್-ಅಹಮದಾಬಾದ್ (ಸಬರಮತಿ) ವಂದೇ ಭಾರತ್ ರೈಲು ಬುಧವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ಚಲಿಸಿದರೆ, ಅಹಮದಾಬಾದ್-ಜಾಮ್ನಗರ್ ವಂದೇ ಭಾರತ್ ಮಂಗಳವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಚಲಿಸುತ್ತದೆ.

9.20898/20897 ರಾಂಚಿ-ಹೌರಾ ವಂದೇ ಭಾರತ್ ಎಕ್ಸ್ಪ್ರೆಸ್

ರೈಲು ಸಂಖ್ಯೆ 20898 ರಾಂಚಿ-ಹೌರಾ ವಂದೇ ಭಾರತ್ ಎಕ್ಸ್ಪ್ರೆಸ್ ರಾಂಚಿಯಿಂದ ಬೆಳಿಗ್ಗೆ 5:15 ಕ್ಕೆ ಹೊರಟು ಮಧ್ಯಾಹ್ನ 12:25 ಕ್ಕೆ ಹೌರಾ ತಲುಪಲಿದೆ.

ರೈಲು ಸಂಖ್ಯೆ 20897 ಹೌರಾ-ರಾಂಚಿ ವಂದೇ ಭಾರತ್ ಎಕ್ಸ್ ಪ್ರೆಸ್ ಹೌರಾದಿಂದ ಮಧ್ಯಾಹ್ನ 3:45ಕ್ಕೆ ಹೊರಟು ರಾತ್ರಿ 10.50ಕ್ಕೆ ರಾಂಚಿ ತಲುಪಲಿದೆ. ಮಾರ್ಗದಲ್ಲಿ ಮುರಿ, ಕೊಟ್ಶಿಲಾ, ಪುರುಲಿಯಾ, ಚಾಂಡಿಲ್, ಟಾಟಾ ಮತ್ತು ಖರಗ್ ಪುರದಲ್ಲಿ ನಿಲ್ಲಲಿದೆ. ಮಂಗಳವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ರೈಲು ಚಲಿಸುತ್ತದೆ.

ಹೊಸ ವಂದೇ ಭಾರತ್ ರೈಲುಗಳು 25 ಸುಧಾರಣೆಗಳೊಂದಿಗೆ ಸಂಚರಿಸಲಿವೆ.