Saturday, 23rd November 2024

ಏಷ್ಯನ್ ಗೇಮ್ಸ್: ಶ್ರೀಲಂಕಾವನ್ನು ಮಣಿಸಿ ಚಿನ್ನ ಗೆದ್ದ ಭಾರತ

ಹ್ಯಾಂಗ್ಝೌ: ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಐತಿಹಾಸಿಕ ಚಿನ್ನದ ಪದಕ ಗೆದ್ದಿದೆ.

ಭಾರತವು ಶ್ರೀಲಂಕಾವನ್ನ 19 ರನ್ನುಗಳಿಂದ ಸೋಲಿಸಿತು. 2017ರ ಏಕದಿನ ವಿಶ್ವಕಪ್, 2020ರ ಟಿ20 ವಿಶ್ವಕಪ್ ಹಾಗೂ 2022ರ ಕಾಮನ್ವೆಲ್ತ್ ಗೇಮ್ಸ್’ನ ಫೈನಲ್‌ ನಲ್ಲಿ ವಿಫಲ ವಾಗಿದ್ದ ಭಾರತ ಕೊನೆಗೂ ಫೈನಲ್ ಪ್ರವೇಶಿಸಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮಹಿಳಾ ಕ್ರಿಕೆಟ್ ತಂಡವು ಸ್ಮೃತಿ ಮಂದಾನ 46 ರನ್ ಮತ್ತು ಜೆಮಿಮಾ ರೊಡ್ರಿಗಸ್ 40 ಎಸೆತಗಳಲ್ಲಿ 42 ರನ್ ಗಳಿಸುವುದರೊಂದಿಗೆ 7 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿತು. ಶ್ರೀಲಂಕಾದ ಉದೇಶಿಕಾ ಪ್ರಬೋಧಾನಿ 16 ರನ್ ನೀಡಿ 2 ವಿಕೆಟ್ ಪಡೆದರೆ, ಸುಗಂಧಿಕಾ ಕುಮಾರಿ ಮತ್ತು ಇನೋಕಾ ರಣವೀರ ತಲಾ 2 ವಿಕೆಟ್ ಪಡೆದರು.

ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ನಿಷೇಧದ ಬಳಿಕ ತಂಡಕ್ಕೆ ಮರಳಿದ್ದಾರೆ. ಇದಕ್ಕೆ ಉತ್ತರವಾಗಿ ಶ್ರೀಲಂಕಾ 8 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಲಷ್ಟೇ ಶಕ್ತವಾಯಿತು.

ಭಾರತದ ಬೌಲರ್ ಟಿಟಾಸ್ ಸಾಧು ಆರು ರನ್ ನೀಡಿ ಮೂರು ವಿಕೆಟ್ ಪಡೆದರು. ಭಾರತದ ಪರ ರಾಜೇಶ್ವರಿ ಗಾಯಕ್ವಾಡ್ 2 ವಿಕೆಟ್ ಕಿತ್ತರೆ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್ ಹಾಗೂ ದೇವಿಕಾ ವೈದ್ಯ ತಲಾ 1 ವಿಕೆಟ್ ಪಡೆದರು. ಕಳೆದ ವರ್ಷ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ತಂಡ ಬೆಳ್ಳಿ ಪದಕ ಗೆದ್ದಿತ್ತು.