Friday, 22nd November 2024

ನಾಳೆ ರಿಪಬ್ಲಿಕನ್ ಪಕ್ಷದ ಎರಡನೇ ಅಧ್ಯಕ್ಷೀಯ ಚರ್ಚೆ

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರತುಪಡಿಸಿ ಏಳು ಅಭ್ಯರ್ಥಿಗಳು ಬುಧವಾರ ರಾತ್ರಿ ನಡೆಯಲಿರುವ ಎರಡನೇ ಅಧ್ಯಕ್ಷೀಯ ಚರ್ಚೆಯಲ್ಲಿ ಮುಖಾಮುಖಿಯಾಗಲಿದ್ದಾರೆ.

ಕ್ಯಾಲಿಫೋರ್ನಿಯಾದ ಸಿಮಿ ವ್ಯಾಲಿಯಲ್ಲಿರುವ ರೊನಾಲ್ಡ್ ರೇಗನ್ ಪ್ರೆಸಿಡೆನ್ಷಿಯಲ್ ಲೈಬ್ರರಿಯಲ್ಲಿ ಬುಧವಾರ ಚರ್ಚೆ ನಡೆಯಲಿದ್ದು, ಫಾಕ್ಸ್ ಬಿಸಿನೆಸ್ ನೆಟ್ವರ್ಕ್ ಮತ್ತು ಯುನಿವಿಷನ್ ಆತಿಥ್ಯ ವಹಿಸಲಿವೆ.

ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್, ದಕ್ಷಿಣ ಕೆರೊಲಿನಾದ ಮಾಜಿ ಗವರ್ನರ್ ನಿಕ್ಕಿ ಹ್ಯಾಲೆ, ದಕ್ಷಿಣ ಕೆರೊಲಿನಾ ಸೆನೆಟರ್ ಟಿಮ್ ಸ್ಕಾಟ್, ಭಾರತೀಯ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ, ಮಾಜಿ ಉಪಾಧ್ಯಕ್ಷ ಮೈಕ್ ಪೆನ್ಸ್, ನ್ಯೂಜೆರ್ಸಿಯ ಮಾಜಿ ಗವರ್ನರ್ ಕ್ರಿಸ್ ಕ್ರಿಸ್ಟಿ ಮತ್ತು ಉತ್ತರ ಡಕೋಟಾ ಗವರ್ನರ್ ಡೌಗ್ ಬರ್ಗಮ್ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.

ಆಗಸ್ಟ್ 23 ರಂದು ನಡೆದ ಮೊದಲ ರಿಪಬ್ಲಿಕನ್ ಅಧ್ಯಕ್ಷೀಯ ಪ್ರಾಥಮಿಕ ಚರ್ಚೆಯಲ್ಲಿ ಕಾಣಿಸಿಕೊಂಡ ಮಾಜಿ ಅರ್ಕಾನ್ಸಾಸ್ ಗವರ್ನರ್ ಆಸಾ ಹಚಿನ್ಸನ್ ಅವರಿಗೆ ಬುಧವಾರದ ಚರ್ಚೆಗೆ ಆರ್​ಎನ್​ಸಿಯ ಉನ್ನತ ಮತದಾನ ಮತ್ತು ನಿಧಿಸಂಗ್ರಹದ ಮಾನದಂಡಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ.

ಮಾಜಿ ಅಧ್ಯಕ್ಷ ಟ್ರಂಪ್​ರಿಗೆ ಶೇ 59, ಡೆಸಾಂಟಿಸ್ ಶೇ 16, ಹ್ಯಾಲೆ ಶೇ 7, ಪೆನ್ಸ್ ಮತ್ತು ಕ್ರಿಸ್ಟಿ ಶೇ 4, ಸ್ಕಾಟ್ ಶೇ 3 ಮತ್ತು ರಾಮಸ್ವಾಮಿ ಶೇ 2ರಷ್ಟು ಜನ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಈ ಸಮೀಕ್ಷೆಗಳು ಹೇಳಿವೆ.