Sunday, 15th December 2024

ಸಂಗೀತ ಆಲಿಸಲು ಸೋನಿಯ ಹೊಸ ಡಬ್ಲ್ಯುಎಫ್–1000ಎಕ್ಸ್ಎಂ5 ನೈಜ ವೈರ್ಲೆಸ್ ಇಯರ್ಬಡ್ಗಳೊಂದಿಗೆ 

ನವದೆಹಲಿ: ಮಾರುಕಟ್ಟೆಗೆ ಸೋನಿ ಹೊಸದಾಗಿ ಪರಿಚಯಿಸಿರುವ ಡಬ್ಲ್ಯುಎಫ್–1000ಎಕ್ಸ್ಎಂ5 (WF-1000XM5)  ನೈಜ  ವೈರ್ಲೆಸ್ ಇಯರ್ಬಡ್ಗಳ ನೆರವಿನಿಂದ ಹೊಸ ದರ್ಜೆಯ ಶ್ರೇಷ್ಠತೆ ಅನುಭವಿಸಿ. ಮೆಚ್ಚುಗೆ ಪಡೆದ 1000ಎಕ್ಸ್ ಸರಣಿಯ ಪರಾಕಾಷ್ಠತೆ ಪ್ರತಿನಿಧಿಸುವ ಈ ಅತ್ಯಾಧುನಿಕ ಮಾದರಿಯು ಪರಿಪೂರ್ಣತೆಯನ್ನು ಮರುವ್ಯಾಖ್ಯಾನಿಸುತ್ತದೆ.

ಸರಿಸಾಟಿಯಿಲ್ಲದ ಸದ್ದು ನಿವಾರಿಸುವ, ಗರಿಷ್ಠ ಮಟ್ಟದ ತನ್ಮಯಗೊಳಿ ಸುವ  ಧ್ವನಿ ಅನುಭವ ಮತ್ತು ಇಲ್ಲಿಯವರೆಗಿನ ಸೋನಿಯ ಅತ್ಯಂತ ಅಸಾಧಾರಣ ಕರೆ ಗುಣಮಟ್ಟವನ್ನೂ ಇದು ನೀಡುತ್ತದೆ. ಡಬ್ಲ್ಯುಎಫ್–1000ಎಕ್ಸ್ಎಂ5 ನಿಮ್ಮ ಮತ್ತು ನಿಮ್ಮ ರಾಗಗಳ ಮಧ್ಯೆ ತಡೆರಹಿತ ಸಂಪರ್ಕವನ್ನು ಸೃಷ್ಟಿಸುವುದರಿಂದ ನಿಮ್ಮ ಸಂಗೀತ ಆಸ್ವಾದನೆಯಲ್ಲಿ ನಿಮ್ಮಷ್ಟಕ್ಕೆ  ನೀವು ತನ್ಮಯರಾಗಬಹುದು.

ಭಾರತದ ಮಾರುಕಟ್ಟೆಗೆ ಡಬ್ಲ್ಯುಎಫ್–1000ಎಕ್ಸ್ಎಂ5 ಪರಿಚಯಿಸಿರುವುದರ ಕುರಿತು ಮಾತನಾಡಿರುವ ಸೋನಿ ಇಂಡಿ ಯಾದ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ನಯ್ಯರ್ ಅವರು, ‘ಡಬ್ಲ್ಯುಎಫ್–1000ಎಕ್ಸ್ಎಂ5, ಇಯರ್ಬಡ್ಗಳ ಪರಿಕಲ್ಪನೆ ಯನ್ನು ಮರುವ್ಯಾಖ್ಯಾನಿಸಿದೆ. ಸಂಗೀತ ಆಲಿಸುವವರಿಗೆ ಉನ್ನತ ಮಟ್ಟದ ತನ್ಮಯಗೊಳಿಸುವ ಧ್ವನಿ ಅನುಭವ ಒದಗಿಸುವ ವೈಶಿಷ್ಟ್ಯಗಳನ್ನು ನಮ್ಮ ಇಯರ್ಬಡ್ಗಳು ಒಳಗೊಂಡಿವೆ ಎಂಬುದನ್ನು ಘೋಷಿಸಲು ನಾವು ಹೆಮ್ಮೆಪಡುತ್ತೇವೆ.

ಗೌಜು–ಗದ್ದಲದ ಸದ್ದು ರದ್ದುಪಡಿಸುವ ಇದರ ಸಕ್ರಿಯ ವೈಶಿಷ್ಟ್ಯಗಳು, ಹೆಚ್ಚಿನ ರೆಸಲ್ಯೂಷನ್ ಆಡಿಯೊ ಮತ್ತು ಅದ್ಭುತ ಧ್ವನಿ ಗುಣಮಟ್ಟ, ತುಲನಾತ್ಮಕವಾಗಿ ಸಮರ್ಥ ಬೆಲೆಯಲ್ಲಿ ಇದು ಪರಿಪೂರ್ಣ ಆಯ್ಕೆಯಾಗಿದೆ. ಆಡಿಯೊ ಜಗತ್ತಿನಲ್ಲಿ ಹೊಸ ಮಾನ ದಂಡ ಸೃಷ್ಟಿಸಿದೆ. ಈ ಇಯರ್ಬಡ್ಗಳೊಂದಿಗೆ, ಜಾಗತಿಕವಾಗಿ ಮತ್ತು ಭಾರತದಲ್ಲಿ ನಿಜವಾದ ವೈರ್ಲೆಸ್ ಇಯರ್ಬಡ್ಗಳ ವಿಭಾಗ ದಲ್ಲಿ ಅತ್ಯು ತ್ತಮ ಇಯರ್ಬಡ್ ತಯಾರಕರಲ್ಲಿ ಒಬ್ಬರಾಗಿ ನಮ್ಮ ಮಹತ್ವದ ಸ್ಥಾನದಲ್ಲಿ ನಿಲ್ಲುವ ಗುರಿಯನ್ನು ನಾವು ಹೊಂದಿ ದ್ದೇವೆ’ ಎಂದು ಹೇಳಿದ್ದಾರೆ.

ಡಬ್ಲ್ಯುಎಫ್–1000ಎಕ್ಸ್ಎಂ5 ಇಯರ್ಬಡ್ಗಳು ವ್ಯಾಕುಲತೆ ಮುಕ್ತ ಸಂಗೀತ ಆಲಿಸುವಿಕೆ ಮತ್ತು ಸ್ಪಷ್ಟತೆಗಾಗಿ ಇರುವ ಮಾನದಂಡ ಹೆಚ್ಚಿಸುತ್ತವೆ. ಸಂಗೀತದಲ್ಲಿ ಸೋನಿಯ ಪರಿಣತಿಯೊಂದಿಗೆ, ನೀವು ಪರಾಕಾಷ್ಠತೆಯ ಸಂಗೀತ ಅನುಭವವನ್ನು ಪಡೆಯುತ್ತಿರುವಿರಿ ಎಂದು ನೀವು ನಂಬಬಹುದು. ಡಬ್ಲ್ಯುಎಫ್–1000ಎಕ್ಸ್ಎಂ5 – ಪ್ರೀಮಿಯಂ ಧ್ವನಿ ಗುಣಮಟ್ಟ ನೀಡಲು ಮತ್ತು ಮಾರುಕಟ್ಟೆಯಲ್ಲಿ ಅತ್ಯುತ್ತಮ ಸದ್ದು-ರದ್ದುಗೊಳಿಸುವ ಕಾರ್ಯಕ್ಷಮತೆ ಯನ್ನು ನೀಡಲು ಅತ್ಯಾಧುನಿಕ ತಂತ್ರಜ್ಞಾನ ವನ್ನು ಹೊಂದಿದೆ.

ನೈಜ-ಸಮಯದ ಆಡಿಯೊ ಪ್ರೊಸೆಸರ್ಗಳು ಮತ್ತು ಉನ್ನತ-ಕಾರ್ಯಕ್ಷಮತೆಯ ಮೈಕ್ಗಳು ವಿಶೇಷವಾಗಿ ವಿನ್ಯಾಸಗೊಳಿಸಲಾದ ಡ್ರೈವರ್ ಯೂನಿಟ್ ಡೈನಾಮಿಕ್ ಡ್ರೈವರ್ ಎಕ್ಸ್, ವ್ಯಾಪಕ ಆವರ್ತನ ಪುನರ್ ಉತ್ಪಾದನೆ, ಆಳವಾದ ಬಾಸ್ ಮತ್ತು ಸ್ಪಷ್ಟವಾದ ಗಾಯನಕ್ಕಾಗಿ ನಿಮ್ಮನ್ನು ತುಂಬಾ ಉತ್ತಮವಾದ ಧ್ವನಿಯಲ್ಲಿ ತನ್ಮಯಗೊಳಿಸಲು ಅವುಗಳನ್ನು ವಿನ್ಯಾಸಗೊಳಿಸಲಾಗಿದೆ, ನಿಮ್ಮ ಮೆಚ್ಚಿನ ಕಲಾವಿದರೊಂದಿಗೆ ನೀವು ಸ್ಟುಡಿಯೊದಲ್ಲಿರುವಂತಹ ಭಾವನೆ ಮೂಡಿಸುತ್ತದೆ.

 ಡಬ್ಲ್ಯುಎಫ್–1000ಎಕ್ಸ್ಎಂ5– ಈಗ ಪ್ರತಿ ಇಯರ್ಬಡ್ನಲ್ಲಿ ಮೂರು ಮೈಕ್ರೊಫೋನ್ಗಳನ್ನು ಒಳಗೊಂಡಿದೆ. ಇದರಲ್ಲಿ ಡ್ಯುಯಲ್ ಪ್ರತಿಕ್ರಿಯೆ ಮೈಕ್ಗಳೂ ಸೇರಿವೆ. ಇವು ಕಡಿಮೆ ಆವರ್ತನ ರದ್ದತಿ ಕಾರ್ಯಕ್ಷಮತೆಯನ್ನು ಸುಧಾರಿಸುತ್ತವೆ. ಇದು ಸದ್ದು ರದ್ದತಿಯಲ್ಲಿ ಸೋನಿಯ ಅತಿದೊಡ್ಡ ಹೆಜ್ಜೆಯಾಗಿದೆ. ಇದರ ಪರಿಣಾಮವಾಗಿ ಸುತ್ತುವರಿದ ಧ್ವನಿಯನ್ನು ಇನ್ನಷ್ಟು ನಿಖರವಾಗಿ ಸೆರೆಹಿಡಿಯಲಿದೆ. ಸೋನಿ ಹೊಸದಾಗಿ ಅಭಿವೃದ್ಧಿಪಡಿಸಿದ, ಇಂಟಿಗ್ರೇಟೆಡ್ ಪ್ರೊಸೆಸರ್ ವಿ2– ಎಚ್ಡಿ ಸದ್ದು ರದ್ದುಪಡಿಸುವ ಪ್ರೊಸೆಸರ್ ಕ್ಯುಎನ್2ಇ (QN2e) ನ ಸಾಮರ್ಥ್ಯವನ್ನು ಅನಾವರಣ ಮಾಡಲಿದೆ.

ತಂತ್ರಜ್ಞಾನದ ಅನನ್ಯ ಸಂಯೋಜನೆಯು ಆರು ಮೈಕ್ರೊಫೋನ್ಗಳನ್ನು ಎರಡೂ ಕಿವಿಗಳಲ್ಲಿ ನಿಯಂತ್ರಿಸುತ್ತದೆ. ಅಭೂತಪೂರ್ವ ಸದ್ದು ರದ್ದತಿ ಗುಣಮಟ್ಟವನ್ನು ನಿಮ್ಮ ಸುತ್ತಲಿನ ಪರಿಸರಕ್ಕೆ ಉತ್ತಮ ಕಾರ್ಯಕ್ಷಮತೆ ಒದಗಿಸುವುದಕ್ಕೂ ಅಳವಡಿಸಿಕೊಳ್ಳ ಬಹುದು.  ಹೊಸ ಡೈನಾಮಿಕ್ ಡ್ರೈವರ್ X – ನೆರವಿನಿಂದ  ಡಬ್ಲ್ಯುಎಫ್–1000ಎಕ್ಸ್ಎಂ5– ನಲ್ಲಿ ಕಡಿಮೆ ಆವರ್ತನಗಳನ್ನು ಪುನರ್ ಉತ್ಪಾದಿಸುವ ಸಾಮರ್ಥ್ಯವನ್ನು ಸುಧಾರಿಸಲಾಗಿದೆ. ಜೊತೆಗೆ, ನಾಯ್ಸ್ ಐಸೋಲೇಷನ್ ಇಯರ್ಬಡ್ ಟಿಪ್ಸ್ ವಿಶಿಷ್ಟವಾದ ಪಾಲಿಯುರೆಥೇನ್ ಫೋಮ್ ವಸ್ತುವನ್ನು ಹೊಂದಿದ್ದು ಅದು ಹೆಚ್ಚಿನ ಆವರ್ತನ ಶ್ರೇಣಿಯಲ್ಲಿ ಶಬ್ದವನ್ನು ಕಡಿಮೆ ಮಾಡುತ್ತದೆ.

ಸೋನಿ ಹೊಸದಾಗಿ ಅಭಿವೃದ್ಧಿಪಡಿಸಿರುವ ಎಚ್ಡಿ ಸದ್ದು ರದ್ದುಗೊಳಿಸುವ ಪ್ರೊಸೆಸರ್ ಕ್ಯುಎನ್2ಇ  ಮತ್ತು ಇಂಟಿಗ್ರೇಟೆಡ್ ಪ್ರೊಸೆಸರ್ ವಿ2  ಸಂಯೋಜಿಸುವ ಮೂಲಕ, ಡಬ್ಲ್ಯುಎಫ್–1000ಎಕ್ಸ್ಎಂ5 ನಿಖರವಾದ 24-ಬಿಟ್ ಆಡಿಯೊ ಪ್ರೊಸೆಸಿಂಗ್ ಮತ್ತು ಹೆಚ್ಚಿನ ಕಾರ್ಯಕ್ಷಮತೆಯ ಅನಲಾಗ್ ವರ್ಧನೆಯನ್ನು ಸಂಯೋಜಿಸುತ್ತದೆ. ಕಡಿಮೆ ಅಸ್ಪಷ್ಟತೆ ಮತ್ತು ಸ್ಫಟಿಕ-ಸ್ಪಷ್ಟ ಆಡಿಯೊ ಪುನರುತ್ಪಾದನೆಯು ಇದರ ಫಲಿತಾಂಶವಾಗಿರಲಿದೆ. ಪ್ರೀಮಿಯಂ ಧ್ವನಿ ಗುಣಮಟ್ಟವು ಡಬ್ಲ್ಯುಎಫ್–1000ಎಕ್ಸ್ಎಂ5–ನ ವಿನ್ಯಾಸದಲ್ಲಿ ಮುಖ್ಯವಾಗಿರುವುದು ಮುಂದುವರಿಯುತ್ತದೆ.

ಎಲ್ಡಿಎಸಿ ನೆರವಿನಿಂದ ಹೆಚ್ಚಿನ ರೆಸಲ್ಯೂಷನ್ ಆಡಿಯೊ ವೈರ್ಲೆಸ್ ಸೌಲಭ್ಯ ದೊರೆಯಲಿದೆ. ಇದರ ಜೊತೆಗೆ  ಡಿಎಸ್ಇಇ ಎಕ್ಸ್ಟ್ರೀಮ್™ ಗೆ ಹೋಲಿಸಿದರೆ ನೈಜ ಸಮಯದಲ್ಲಿ ಡಿಜಿಟಲ್ ಸಂಗೀತವನ್ನು ಮೇಲ್ದರ್ಜೆಗೆ ಏರಿಸುತ್ತದೆ. ಹೆಚ್ಚುವರಿಯಾಗಿ, ಈ ಇಯರ್ಬಡ್ಗಳು 360 ರಿಯಾಲಿಟಿ ಆಡಿಯೊ ಒಳಗೊಂಡಿರುತ್ತವೆ. ಇದು ನಿಮ್ಮನ್ನು ಸಂಗೀತ ಆಲಿಸುವುದರಲ್ಲಿ   ತನ್ಮಯಗೊಳಿಸುವ ಆಡಿಯೊ ಅನುಭವವನ್ನು ಸೃಷ್ಟಿಸುತ್ತವೆ. ಉತ್ತಮವಾದ ಗಾಯನದಿಂದ ಆಳವಾದ ಬಾಸ್ವರೆಗೆ, ಎಲ್ಲವನ್ನೂ ಡಬ್ಲ್ಯುಎಫ್–1000ಎಕ್ಸ್ಎಂ5 ನಲ್ಲಿ ಸಂಗೀತಕ್ಕಾಗಿಯೇ ರಾಗ ರೂಪಿಸಲಾಗಿದೆ.

ವಿಶೇಷವಾಗಿ ವಿನ್ಯಾಸಗೊಳಿಸಲಾದ ಡೈನಾಮಿಕ್ ಡ್ರೈವರ್ ಎಕ್ಸ್ –ವ್ಯಾಪಕ ಆವರ್ತನ ಪುನರ್ ಉತ್ಪಾದಿಸಲಿದೆ, ಡಬ್ಲ್ಯುಎಫ್–1000ಎಕ್ಸ್ಎಂ5 ನಿಮಗೆ ಉತ್ಕೃಷ್ಟ ಗಾಯನ ಮತ್ತು ಹೆಚ್ಚು ವಿವರವಾದ ಗಾಯನವನ್ನು ಅನುಭವಿಸಲು ಅನುವು ಮಾಡಿ ಕೊಡುತ್ತದೆ. ಇದರ ತೆಳುಪೊರೆ ರಚನೆಯು ಗುಮ್ಮಟ ಮತ್ತು ಅಂಚಿಗೆ ಹಲವಾರು ವಿಭಿನ್ನ ವಸ್ತುಗಳನ್ನು ಸಂಯೋಜಿಸುತ್ತದೆ. ಕಡಿಮೆ ಅಸ್ಪಷ್ಟತೆಯೊಂದಿಗೆ ಸ್ಪಷ್ಟವಾದ ಗರಿಷ್ಠ ಮತ್ತು ಆಳವಾದ, ಶ್ರೀಮಂತ ಬಾಸ್ ಧ್ವನಿಯನ್ನು ಸಾಧಿಸುತ್ತದೆ.