ಬೆಂಗಳೂರು: ವಿವಿಧ ಕನ್ನಡ ಪರ ಸಂಘಟನೆಗಳು ಸೆ.29ರಂದು ನೀಡಿದ ಎರಡನೇ ಬಂದ್ ಕರೆಯಿಂದಾಗಿ ನಗರದ ಕೆಲವು ಖಾಸಗಿ ಶಾಲೆಗಳಿಗೆ ಗುರುವಾರದ ಈದ್-ಮಿಲಾದ್ ರಜೆ ರದ್ದುಗೊಳಿಸಿವೆ.
ಬಂದ್ನಿಂದಾಗಿ ಕಳೆದು ಹೋದ ಶೈಕ್ಷಣಿಕ ದಿನಗಳನ್ನು ಮರಳಿ ಪಡೆಯಲು, ಕೆಲವು ಶಾಲೆಗಳು ಶನಿವಾರದ ತರಗತಿಗಳನ್ನು ನಿಗದಿ ಪಡಿಸಿವೆ.
ಖಾಸಗಿ ಅನುದಾನರಹಿತ ಶಾಲೆಯೊಂದರ ಪ್ರಾಂಶುಪಾಲರು, “ಮಧ್ಯಾವಧಿ ಪರೀಕ್ಷೆ ನಡೆಯುತ್ತಿರುವುದರಿಂದ ಗುರುವಾರ ಮತ್ತು ಶನಿವಾರ ತರಗತಿಗಳನ್ನು ನಡೆಸದೆ ನಮಗೆ ಬೇರೆ ದಾರಿಯಿಲ್ಲ” ಎಂದು ಹೇಳಿದರು.
“ಶುಕ್ರವಾರ ಕರ್ನಾಟಕ ಬಂದ್ ಆಗಿರುವುದರಿಂದ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಾವು ಶುಕ್ರವಾರದ ಪರೀಕ್ಷೆಗಳನ್ನು ಶನಿವಾರಕ್ಕೆ ಮರು ನಿಗದಿಪಡಿಸಿದ್ದೇವೆ. ಆದರೆ, ಪೂರ್ವ ಘೋಷಿತ ಹಬ್ಬದ ರಜೆಯಲ್ಲಿ ತರಗತಿ ನಡೆಸುವುದು ನ್ಯಾಯಯುತ ನಿರ್ಧಾರ ವಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
“ಶಾಲೆಗಳು ನಿರ್ಧರ ತೆಗೆದುಕೊಳ್ಳಲು ಸ್ವತಂತ್ರವಾಗಿವೆ. ಆದರೆ, ಇದು ನ್ಯಾಯಯುತ ನಿರ್ಧಾರವಲ್ಲ ಎಂದು ನಾನು ಭಾವಿಸು ತ್ತೇನೆ. ಬದಲಾಗಿ, ಅವರು ಶನಿವಾರ ಮತ್ತು ಭಾನುವಾರದಂದು ಪೂರ್ಣ ದಿನದ ತರಗತಿಗಳನ್ನು ನಡೆಸಬಹುದು “ಎಂದು ಕರ್ನಾಟಕದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್ನ ಪ್ರಧಾನ ಕಾರ್ಯದರ್ಶಿ ಡಿ ಶಶಿ ಕುಮಾರ್ ಹೇಳಿದರು.
ಶಶಿಕುಮಾರ್ ಜಿಲ್ಲಾಡಳಿತವು ಶುಕ್ರವಾರದಂದು ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಕುರಿತು ಗುರುವಾರ ಸಂಜೆಯಾದರೂ ಗೊಂದಲಗಳನ್ನು ತಪ್ಪಿಸುವ ನಿಟ್ಟಿನಲ್ಲಿ ನಿರ್ಧಾರ ಪ್ರಕಟಿಸುವಂತೆ ಮನವಿ ಮಾಡಿದರು.