ನವದೆಹಲಿ: ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ(EPFO) ಹೆಚ್ಚಿನ ವೇತನದ ಮೇಲೆ ಪಿಂಚಣಿ ಕುರಿತು ವೇತನ ವಿವರಗಳನ್ನು ಅಪ್‌ಲೋಡ್ ಮಾಡಲು ಉದ್ಯೋಗದಾತರಿಗೆ ಡಿಸೆಂಬರ್ 31, 2023 ರವರೆಗೆ ಕಾಲಾವಕಾಶ ನೀಡಿದೆ.
ಉದ್ಯೋಗದಾತರು ಮತ್ತು ಉದ್ಯೋಗದಾತರ ಸಂಘಗಳ ಪ್ರಾತಿನಿಧ್ಯದ ಮೇರೆಗೆ ಸೆಪ್ಟೆಂಬರ್ 30 ರಂದು ಕೊನೆಗೊಳ್ಳುವ ವೇತನ ವಿವರಗಳನ್ನು ಅಪ್‌ಲೋಡ್ ಮಾಡಲು ಗಡುವನ್ನು ವಿಸ್ತರಿಸಲಾಗಿದೆ.
ಸೆಪ್ಟೆಂಬರ್ 29, 2023 ರಂತೆ ಉದ್ಯೋಗದಾತರೊಂದಿಗೆ ಆಯ್ಕೆ / ಜಂಟಿ ಆಯ್ಕೆಗಳ ಮೌಲ್ಯೀಕರಣಕ್ಕಾಗಿ 5.52 ಲಕ್ಷ ಅರ್ಜಿಗಳು ಇನ್ನೂ ಬಾಕಿ ಉಳಿದಿವೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.
ಉದ್ಯೋಗದಾತರು ಮತ್ತು ಉದ್ಯೋಗದಾತರ ಸಂಘಗಳಿಂದ ಪಡೆದ ಪ್ರಾತಿನಿಧ್ಯಗಳ ದೃಷ್ಟಿಯಿಂದ ಅರ್ಜಿದಾರರ ಪಿಂಚಣಿ ದಾರರು/ಸದಸ್ಯರ ವೇತನ ವಿವರಗಳನ್ನು ಅಪ್‌ಲೋಡ್ ಮಾಡಲು ಕಾಲಾವಧಿಯನ್ನು ವಿಸ್ತರಿಸಲು ವಿನಂತಿ ಮಾಡಲಾಗಿದ್ದು, ಉದ್ಯೋಗದಾತರಿಗೆ ವೇತನದ ವಿವರಗಳು ಇತ್ಯಾದಿಗಳನ್ನು ಆನ್‌ಲೈನ್‌ನಲ್ಲಿ ಸೆಪ್ಟೆಂಬರ್ 30 ರೊಳಗೆ ಸಲ್ಲಿಸಲು ಕಾಲಾವಕಾಶ ವಿತ್ತು. ಆದ್ರೆ, ಈಗ ಮೂರು ತಿಂಗಳ ಅವಧಿಯನ್ನು ನೀಡಲಾಗಿದೆ.
ಜುಲೈ 11, 2023 ರವರೆಗೆ ಪಿಂಚಣಿದಾರರು / ಸದಸ್ಯರಿಂದ ಆಯ್ಕೆ / ಜಂಟಿ ಆಯ್ಕೆಗಳ ಮೌಲ್ಯೀಕರಣಕ್ಕಾಗಿ 17.49 ಲಕ್ಷ ಅರ್ಜಿ ಗಳನ್ನು ಸ್ವೀಕರಿಸಲಾಗಿದೆ.