Saturday, 23rd November 2024

ಪುರುಷರ ಟ್ರ್ಯಾಪ್ ಶೂಟಿಂಗ್‌: ಪೃಥ್ವಿರಾಜ್, ಕಿನಾನ್, ಜೊರಾವರ್ ಸಿಂಗ್’ಗೆ ಚಿನ್ನ

ಹ್ಯಾಂಗ್‌ಝೌ(ಚೀನಾ): ಏಷ್ಯನ್ ಗೇಮ್ಸ್‌ನ 8 ನೇ ದಿನ ಪುರುಷರ ಟ್ರ್ಯಾಪ್ ಶೂಟಿಂಗ್‌ ವಿಭಾಗದಲ್ಲಿ ಭಾರತದ ಪೃಥ್ವಿರಾಜ್ ತೊಂಡೈಮಾನ್, ಕಿನಾನ್ ಚೆನೈ ಮತ್ತು ಜೊರಾವರ್ ಸಿಂಗ್ ಸಂಧು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಈ ಗೆಲುವಿಗೂ ಮುನ್ನ, ಮಹಿಳಾ ಟ್ರ್ಯಾಪ್ ಶೂಟಿಂಗ್​ ವಿಭಾಗದಲ್ಲಿ ಮನೀಶಾ ಕೀರ್, ಪ್ರೀತಿ ರಜಾಕ್ ಮತ್ತು ರಾಜೇಶ್ವರಿ ಕುಮಾರಿ ಅವರು ಬೆಳ್ಳಿ ಪದಕವನ್ನು ಪಡೆದಿದ್ದು, ಭಾರತ ತಂಡ ಈ ಬಾರಿಯ ಏಷ್ಯನ್ ಗೇಮ್ಸ್​ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದೆ.

ಟ್ರಾಪ್​ ಶೂಟಿಂಗ್​ ಮಹಿಳಾ ವಿಭಾಗಕ್ಕೆ ಬೆಳ್ಳಿಕೊನೆಯದಾಗಿ ಶೂಟ್ ಮಾಡಿದ ಅಲ್ರಾಶಿದಿ ತನ್ನ ಅತ್ಯುತ್ತಮ ಪ್ರಯತ್ನದಿಂದ ಶೂಟ್​ ಮಾಡಿ 24 ಅಂಕಗಳನ್ನು ಗಳಿಸಿದರು. ಆದರೆ ಆ ಅಂಕ ಭಾರತದ ಮೊತ್ತವನ್ನು ಮೀರಿಸುವಲ್ಲಿ ವಿಫಲವಾಗಿದೆ. ಇದರ ನಡುವೆ ಭಾರತ ಮಹಿಳಾ ತಂಡವು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಒಟ್ಟು 337 ಅಂಕ​ಗಳಿಸಿ ದ್ವಿತೀಯ ಸ್ಥಾನ ಪಡೆದರು. ಕಜಕಿಸ್ತಾನದ ಮರಿಯಾ ಡಿಮಿಟ್ರಿಯೆಂಕೊ, ಐಜಾನ್ ಡೊಸ್ಮಗಂಬೆಟೊವಾ ಮತ್ತು ಅನಸ್ತಾಸಿಯಾ ಪ್ರಿಲೆಪಿನಾ (336) ಶೂಟ್​ ಮೂಲಕ ಕಂಚಿನ ಪದಕ ಪಡೆದರು.