Sunday, 15th December 2024

ರೈಲ್ವೇ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ

ತುಮಕೂರು: ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆ ವತಿಯಿಂದ ಸೋಮವಾರ, ಗಾಂಧಿಜಯಂತಿ ಅಂಗವಾಗಿ ತುಮಕೂರು ರೈಲ್ವೇ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವೇದಿಕೆಯ ಪದಾಧಿಕಾರಿಗಳು ನಿಲ್ದಾಣ ವ್ಯಾಪ್ತಿಯ ರೈಲು ಹಳಿಗಳು, ಪ್ಲಾಟ್ ಫಾರಂ, ಟಿಕೆಟ್ ಕೌಂಟರ್ ಆವರಣ, ಹೊರ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.
ಅಧ್ಯಕ್ಷೆ ಬಾ. ಹ. ರಮಾಕುಮಾರಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಪರಮೇಶ್ವರ್, ಕಾರ್ಯದರ್ಶಿ ಕರಣಂ ರಮೇಶ್, ಜಂಟಿ ಕಾರ್ಯದರ್ಶಿಗಳಾದ ರಘು ರಾಮಚಂದ್ರಯ್ಯ, ಸಗರ ಚಕ್ರವರ್ತಿ, ಖಜಾಂಚಿ ಆರ್. ಬಾಲಾಜಿ, ನಿರ್ದೇಶಕರಾದ ರಾಮಾಂಜನೇಯ, ಶಿವಕುಮಾರ್, ಸಿದ್ದಲಿಂಗಯ್ಯ, ವೀರಪ್ಪ, ರೋಟರಿ ಅಧ್ಯಕ್ಷ ಸಿ.ನಾಗರಾಜ್, ಕಾರ್ಯದರ್ಶಿ ಶಿವಕುಮಾರಸ್ವಾಮಿ ಮತ್ತಿತರರು ಭಾಗವಹಿಸಿದ್ದರು.