ತುಮಕೂರು: ಜಿಲ್ಲೆಯಲ್ಲಿ ಹಿಂದೂ, ಮುಸ್ಲಿಂ ಸಮುದಾಯದವರು ಸಹೋದರರಂತೆ ಬದುಕುತ್ತಿದ್ದು, ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಕಾರಣವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ತಿಳಿಸಿದರು.
ನಗರದ ಬಾರ್‌ಲೈನ್ ರಸ್ತೆಯ ಮಕ್ಕಾ ಮಸೀದಿಯಲ್ಲಿ ಮುಸ್ಲಿಂ ಭಾಂಧವರು ಹಮ್ಮಿಕೊಂಡಿದ್ದ ಈದ್‌ವಿಲಾದ್ ಪ್ರಾರ್ಥನೆ ಯಲ್ಲಿ ಪಾಲ್ಗೊಂಡು ಮಾತ ನಾಡಿ, ಯಾವುದೇ ಹಬ್ಬ,ಹರಿದಿನ,ಉರುಸ್‌ಗಳನ್ನು ಇಬ್ಬರು ಅತ್ಯಂತ ತಾಳ್ಮೆಯಿಂದ ಆಚರಿಸುತ್ತಿರುವುದನ್ನು ನಾವು ಜಿಲ್ಲೆಯಲ್ಲಿ ಕಾಣಬಹುದಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ.ಮಾತನಾಡಿ,ಮಕ್ಕಾ ಮಸೀದಿ ಪೊಲೀಸ್ ಇಲಾಖೆ ಕಟ್ಟಿದ ಮಸೀದಿ ಎಂದು ತಿಳಿದು ಸಂತೋಷ ವಾಯಿತು.ಇದರ ನಿರ್ವಹಣೆಯನ್ನು ಇಂದು ಮುಸ್ಲಿಂ ಭಾಂಧವರು ಮಾಡುತ್ತಿರುವುದು ಸಂತೋಷದ ವಿಚಾರ.ಈ ಬಾರಿ ಗೌರಿ,ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಎರಡು ಒಟ್ಟಿಗೆ ಬಂದಿರುವುದು ನಮ್ಮಲ್ಲಿರುವ ಸಹೋದರ ಭಾವನೆಯನ್ನು ವ್ಯಕ್ತಪಡಿಸಲು ಸಿಕ್ಕ ಅವಕಾಶ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರ ಹಾಲಪ್ಪ ಮಾತನಾಡಿ,ಮಹಮದ್ ಪೈಗಂಬರರ ಹುಟ್ಟು ಹಬ್ಬವಾದ ಇಂದು ಎಲ್ಲಾ ಸಮುದಾಯ ದವರು ಸೇರಿ ಹಬ್ಬ ಆಚರಿಸುತ್ತಿರುವುದು ಸಂತೋಷ ಮೂಡಿಸಿದೆ.ಈ ಭಾಂಧವ್ಯ ಹೀಗೆಯೇ ಮುಂದುವರೆಯಲಿ ಎಂಬ ಆಶಯ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಸ್.ಷಪಿ ಅಹಮದ್ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಹಿಂದು, ಮುಸ್ಲಿಂರು ಅನಾದಿ ಕಾಲದಿಂದ ಪರಸ್ವರ ಸಹೋದರರಂತೆ ಶಾಂತಿ, ನೆಮ್ಮದಿಯಿಂದ ಬದುಕು ನಡೆಸುತ್ತಿದ್ದಾರೆ ಎಂದರು.
ಈ ವೇಳೆ ಮುಖಂಡರಾದ ವೇಣುಗೋಪಾಲ್, ದೇವೇಗೌಡ, ಸಿಮೆಂಟ್ ಮಂಜಣ್ಣ, ಶರೀಫ್, ಮೆಹಬೂಬ್‌ಪಾಷ, ಪ್ರಕಾಶ್, ಆದಿಲ್, ಅಫ್ತಾಬ್ ಅಹಮದ್,ಅನ್ವರ್ ಪಾಷ, ಪ್ರಕಾಶ್, ಮೆಹಬೂಬ್,ಮಹಮದ್ ಇಸ್ಮಾಯಿಲ್,ಡಾ.ನಯಾಜ್ ಅಹಮದ್ ,ತಾಜುದ್ದೀನ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಈದ್ ಮಿಲಾದ್ ಆಚರಿಸಿದರು.