ಚಿಕ್ಕನಾಯಕನಹಳ್ಳಿ: ಮಹಾತ್ಮ ಗಾಂಧೀಜಿಯವರು ಮೊದಲು ತತ್ವ ಆದರ್ಶವನ್ನು ಸ್ವತಃ ಕರ್ತವ್ಯದಲ್ಲಿ ತಮ್ಮನ್ನ ತಾವೇ ತೊಡಗಿಸಿಕೊಳ್ಳುತ್ತಿದ್ದರು ಎಂದು ರುಪ್ಸಾ ಸಂಘಟನೆಯ ರಾಜ್ಯ ನಿರ್ದೇಶಕರಾದ ಗೋವಿಂದರಾಜು ಹೇಳಿದರು.
ತಾಲ್ಲೂಕಿನ ದೊಡ್ಡಣ್ಣೆಗೆರೆ ಗವಿರಂಗನಾಥ ವಿದ್ಯಾಪೀಠ ಪ್ರೌಢಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆಯಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಮಹಾತ್ಮ ಗಾಂಧೀಜಿಯವರು ಅಹಿಂಸಾ ತತ್ವವನ್ನು ಅನುಸರಿ ರಾಷ್ಟ್ರದ ಪಿತಾಮಹಾರಾಗಿ ಜಗತ್ತಿಗೆ ಮಾದರಿಯ ಮಾಹಾನ್ ಪುರುಷರಾಗಿದ್ದಾರೆ.
ಸತ್ಯಹರಿಶ್ಚಂದ್ರ ನಾಟಕನವನ್ನ ವೀಕ್ಷಿಸಿದ ಗಾಂಧಿಯವರು ಮನುಷ್ಯ ಜೀವನದಲ್ಲಿ ಸುಳ್ಳು ಹೇಳುವುದನ್ನ ಬಿಟ್ಟು ಸತ್ಯ ದಿಂದ ಬದುಕ ಬೇಕೆಂಬುದನ್ನವ ಮೌಲ್ಯವನ್ನು ಅನುಸರಿಸಿದರು. ಮಾಹಾತ್ಮರು ತತ್ವ ಸಿದ್ಧಾಂತ ಗಳನ್ನು ಭೋಧಿಸುವ ಜೊತೆಗೆ ತಾವೇ ಕ್ರೀಯಾಶೀಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗಾಂಧಿಯ ವಿಚಾರ ಧಾರೆಗಳನ್ನ ಮಕ್ಕಳು ಚಿಕ್ಕವಯಸ್ಸಿನಿಂದಲೆ ತಿಳಿಯಬೇಕಾಗಿದೆ. ಅಹಿಂಸಾ ತತ್ವನ್ನು ಪ್ರತಿಯೊಬ್ಬರು ಅನುಸರಿಸಿ ದರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮುಖ್ಯಶಿಕ್ಷಕರಾದ ಸಿ.ವೆಂಕಟೇಶ್ ನಾಯ್ಕ ಮಾತನಾಡಿ ಗಾಂಧಿ ಮತ್ತು ಲಾಲ್ ಬಹದ್ಧೂರ್ ಶಾಸ್ತ್ರಿಯವರು ರಾಷ್ಟ್ರಕ್ಕೆ ತಮ್ಮದೇ ಆದ ಕೊಡುಗೆಗಳನ್ನ ನೀಡಿದ್ದಾರೆˌ ಮನುಷ್ಯ ವಾಸಿಸುವ ಪರಿಸರವನ್ನ ಸ್ವಚ್ಛವಾಗಿಟ್ಟುಕೊಂಡರೆ ರೋಗಗಳನ್ನ ನಿಯಂತ್ರಿಸುವ ಉದ್ದೇಶದಿಂದ ಗಾಂಧಿಯವರು ಪ್ರತಿನಿತ್ಯ ದಿನಚರಿಯಾಗಿ ಕೊಳಚೆ ಪ್ರದೇಶಗಳನ್ನ ಆಯ್ಕೆಮಾಡಿಕೊಂಡುನಿಸ್ವಾರ್ಥದಿಂದ ಸ್ವಚ್ಛ ಮಾಡುವ ಕೆಲಸವನ್ನ ಮಾಡು ತ್ತಿದ್ದರು. ದೇಶದ ಪ್ರಧಾನಿ ಯಾಗಿದ್ದರು ಐಶಾರಾಮಿ ಜೀವನವನ್ನ ನೆಡಸದೆ ಸರಳವಾಗಿ ಬದುಕಿದ ಲಾಲ್ ಬಹುದ್ಧೂರ್ ಶಾಸ್ತ್ರಿಯವರು ದೇಶಾಭಿೃದ್ದಿಯ ಚಿಂತಕರಾಗಿದ್ದರು ಎಂದರು.
ಮಾಜಿ ಪುರಸಭಾ ಸದಸ್ಯ ಸಿ.ಮಲ್ಲಿಕಾರ್ಜುನಸ್ವಾಮಿ ಮಾತನಾಡಿ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳು ನಗರ ಮತ್ತು ಪಟ್ಟಣ ಶಾಲೆಗಳಿಗೆ ಹೊಲಿಕೆಯಿಂದ ಕೀಳಿರಿಮೆಯನ್ನು ಮನಸ್ಸಿನಲ್ಲಿ ಇರಿಸಿಕೊಳ್ಳಬಾರದು ಶಿಕ್ಷಣದ ಮೌಲ್ಯವನ್ನು ಹೆಚ್ಚಿಸುವ ಶಕ್ತಿಯು ಗ್ರಾಮೀಣ ಭಾಗದ ಶಿಕ್ಷರಿಗೂ ಇರುತ್ತದೆ. ಶಾಲಾ ಪರಿಸರ ನಿರ್ವಹಣೆ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣದ ಭೋದನೆಗೆ ದೊಡ್ಡಣ್ಣೆಗೆರೆಯ ಗವಿರಂಗನಾಥ ವಿದ್ಯಾಪೀಠ ಪ್ರೌಢಾಶಾಲೆಯ ಶಿಕ್ಷಕ ವರ್ಗ ಪಾತ್ರವಹಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಕರಾದ ನಟರಾಜುˌಕೆ.ವಿ.ನಟರಾಜುˌಲೋಕನಾಥ್ ಸೇರಿದಂತೆ ಸಿಬ್ಬಂದಿ ಹಾಗು ವಿದ್ಯಾರ್ಥಿಗಳ ಇದ್ದರು.