Friday, 20th September 2024

ಅಲಿಗಢ ಮುಸ್ಲಿಂ ವಿವಿಯಲ್ಲಿ ವಿದ್ಯಾರ್ಥಿ ಗುಂಪುಗಳ ನಡುವೆ ಗುಂಡಿನ ಚಕಮಕಿ

ಅಲಿಗಢ: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಗುಂಪುಗಳ ನಡುವೆ ಗುಂಡಿನ ಚಕಮಕಿ ನಡೆದು ಮೂವರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಜೆಎನ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಬಂದೂಕಿನಿಂದ ಹಲವು ಸುತ್ತುಗಳ ಗುಂಡು ಹಾರಿಸಲಾಗಿದೆ ಎಂದು ಹೇಳ ಲಾಗುತ್ತಿದೆ. ಇದರಲ್ಲಿ ಒಂದೇ ಗುಂಪಿನ ಮೂವರು ವಿದ್ಯಾರ್ಥಿಗಳು ಗುಂಡು ಹಾರಿ ಸಿದ್ದು, ಈ ವೇಳೆ ಓರ್ವನ ಎದೆಗೆ ಗುಂಡು ತಗುಲಿದೆ. ಈ ಘಟನೆಯನ್ನು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಚಳವಳಿಗೆ ಲಿಂಕ್​ ಮಾಡಲಾಗುತ್ತಿದೆ.

ಮೊರಾದಾಬಾದ್ ನಿವಾಸಿಗಳಾದ ಸಾದಿಕ್, ಅಬ್ದುಲ್ಲಾ ಮತ್ತು ಫಿರೋಜ್ ಆಲಂ ಗಾಯಗೊಂಡ ವಿದ್ಯಾರ್ಥಿಗಳು. ಬಿಎಂ ಹಾಸ್ಟೆಲ್‌ನ ಕೆಲವು ವಿದ್ಯಾರ್ಥಿಗಳು ಕುಳಿತು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆ ವೇಳೆ, 10-12 ಮುಸುಕುಧಾರಿ ದಾಳಿಕೋರರು ಬೈಕ್‌ಗಳಲ್ಲಿ ಅಲ್ಲಿಗೆ ಬಂದು ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಗುಂಡು ಹಾರಿಸಿದ ನಂತರ ಅವರೆಲ್ಲ ಓಡಿಹೋಗಿದ್ದಾರೆ.

ಎಎಂಯು ಕ್ಯಾಂಪಸ್‌ನಲ್ಲಿ ಗುಂಡಿನ ದಾಳಿಯಿಂದಾಗಿ ಕೋಲಾಹಲ ಉಂಟಾಯಿತು. ಸ್ವಲ್ಪ ಸಮಯದ ನಂತರ ಮುಸುಕುಧಾರಿ ದಾಳಿಕೋರನು ಕರೆ ಮಾಡಿ ಇತರ ಗುಂಪನ್ನು ಸರ್ ಸೈಯದ್ ನಾರ್ತ್ ಹಾಸ್ಟೆಲ್‌ಗೆ ರಾಜಿ ಮಾಡಿ ಕೊಳ್ಳಲು ಕರೆದಿದ್ದಾನೆ. ತಕ್ಷಣ ಇತರ ಗುಂಪಿನ ವಿದ್ಯಾರ್ಥಿಗಳು ಅಲ್ಲಿಗೆ ತಲುಪಿ ದ್ದಾರೆ ಎನ್ನಲಾಗಿದೆ. ನಂತರ ಮತ್ತೆ ಗುಂಡಿನ ದಾಳಿ ನಡೆದಿದ್ದು ಖಾಸಗಿ ಕಾಲೇಜಿನಲ್ಲಿ ಬಿಯುಎಂಎಸ್ ಓದುತ್ತಿದ್ದ ಮೊರಾದಾಬಾದ್‌ನ ಸಾದಿಕ್ ಗಂಭೀರ ಗಾಯಗೊಂಡಿದ್ದಾನೆ.

ಗುಂಡಿನ ಚಕಮಕಿ ಮತ್ತು ಗಲಾಟೆಯ ಸುದ್ದಿ ತಿಳಿದ ಎಎಂಯುನ ಪ್ರೊಕ್ಟರ್ ತಂಡ ಕೂಡ ಘಟನಾ ಸ್ಥಳಕ್ಕೆ ತಲುಪಿತ್ತು.